ಬೆಂಗಳೂರು:ಅಶೋಕ್​ ಗಸ್ತಿ ಅಕಾಲಿಕ ನಿಧನದಿಂದ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಬಿಜೆಪಿ ಯಾರನ್ನು ಆಯ್ಕೆ ಮಾಡುತ್ತೆ ಎಂಬುದೀಗ ಕುತೂಹಲ ಕೆರಳಿಸಿದೆ.ಬಿಜೆಪಿಯಿಂದ ರಾಜ್ಯಸಭೆ ಸದಸ್ಯರಾಗಿದ್ದ ಅಶೋಕ್ ಗಸ್ತಿ ಕರೊನಾ ಸೋಂಕಿನಿಂದ ಇತ್ತೀಚಿಗೆ ಮೃತಪಟ್ಟರು. ಗಸ್ತಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಡಿಸೆಂಬರ್ 1 ರಂದು ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಪಕ್ಷ ಸಂಘಟನೆಗೆ ಬಲ ತುಂಬಿದವರಿಗೆ ಉತ್ತೇಜನ, ಪಕ್ಷದ ವರ್ಚಸ್ಸು ವೃದ್ಧಿ ಹಾಗೂ ಕಾರ್ಯಕರ್ತರಲ್ಲಿ ಹುರುಪು ನೀಡುವ ಸಾಮರ್ಥ್ಯವುಳ್ಳವರನ್ನು ಪಕ್ಷ ಪರಿಗಣಿಸಲಿದೆ. ಪ್ರತಿಪಕ್ಷಗಳು ಸೇರಿ ರಾಜಕೀಯ ಆಸಕ್ತ ಎಲ್ಲರಿಗೂ ಹಿಂದಿನಂತೆಯೇ ಸಂದೇಶ ರವಾನಿಸುವುದು ದೆಹಲಿ ನಾಯಕರ ಇರಾದೆ. ರಾಯಚೂರು ಜಿಲ್ಲೆಯ ಅಶೋಕ್​ ಗಸ್ತಿ ಅವರು ಸವಿತಾ ಸಮುದಾಯಕ್ಕೆ ಸೇರಿದ್ದವರು. ಅಲ್ಲದೆ ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿ ಮೂರೂವರೆ ದಶಕ ಪಕ್ಷಕ್ಕಾಗಿ ದುಡಿದಿದ್ದರು. ಹೀಗಾಗಿ ಈ ಬಾರಿಯೂ ಕಲ್ಯಾಣ ಕರ್ನಾಟಕ ಪ್ರಾಂತದ ಹಿಂದುಳಿದ ವರ್ಗಕ್ಕೆ ಮಣೆ ಹಾಕಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಪಕ್ಷದ ಸೇವೆ, ನಿಷ್ಕಳಂಕ ವ್ಯಕ್ತಿತ್ವ, ಉತ್ಸಾಹಿ ಯುವಕ ಇತ್ಯಾದಿ ಮಾನದಂಡಗಳ ರೀತ್ಯ ಅಭ್ಯರ್ಥಿಯನ್ನು ಗುರುತಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪಕ್ಷದ ರಾಜ್ಯ ಕೋರ್​ ಕಮಿಟಿ ಸಭೆ ಮಂಗಳೂರಿನಲ್ಲಿ ನ.5ರಂದು ನಿಗದಿಯಾಗಿದ್ದು, ಈ ವಿಷಯ ಚರ್ಚೆಗೆ ಪ್ರಸ್ತಾಪವಾಗುವ ಸಾಧ್ಯತೆಗಳಿವೆ. ಸಿಎಂ ಯಡಿಯೂರಪ್ಪ ಒಂದು ದಿನ ಮುಂಚಿತವಾಗಿ ಮಂಗಳೂರಿಗೆ ತೆರಳಲಿರುವ ಕಾರಣ ಸಭೆಗೆ ಹೆಚ್ಚಿನ ಮಹತ್ವ ಬಂದಿದೆ.
ಕೇಂದ್ರ ಸಚಿವ ಸುರೇಶ್​ ಅಂಗಡಿ ನಿಧನದಿಂದ ಖಾಲಿಯಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ವರದಿ ಸಲ್ಲಿಸುವ ಜವಾಬ್ದಾರಿ ನೀಡಲಾಗಿದ್ದು, ರಾಜ್ಯ ನಾಯಕರ ವರದಿಗೆ ದೆಹಲಿ ನಾಯಕರು ಮನ್ನಣೆ ನೀಡುವುದು ನಿಶ್ಚಿತ ಎಂದು ಮೂಲಗಳು ತಿಳಿಸಿವೆ.
ಮತದಾನ ಮುಗಿಯುತ್ತಿದ್ದಂತೆ ಶಾಸಕ, ಸಚಿವರ ಫೋನ್​ ಸಿಚ್ಡ್​ ಆಫ್​! ಅಂತಹದ್ದೇನಾಯ್ತು?

ಗಸ್ತಿ ನಿಧನದಿಂದ ತೆರವಾಗಿದ್ದ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಚುನಾವಣೆ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
