ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿನ ಗೆಲುವಿನ ಬಳಿಕ ಆಮ್ ಆದ್ಮಿ ಪಕ್ಷ ರಾಜ್ಯಸಭೆಯಲ್ಲೂ ಬಲ ಹೆಚ್ಚಿಸಿಕೊಳ್ಳಲಿದೆ. ಜುಲೈನಲ್ಲಿ ಪಂಜಾಬ್​ನಿಂದ 7 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದರಲ್ಲಿ 6 ಸ್ಥಾನಗಳನ್ನು ಎಎಪಿ ನಿರಾಯಾಸವಾಗಿ ಪಡೆಯಲಿದೆ. ಇದರೊಂದಿಗೆ ರಾಜ್ಯಸಭೆಯಲ್ಲಿ 5ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಸರ್ಕಾರಕ್ಕೆ ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಎಎಪಿ ಬೆಂಬಲ ಅಗತ್ಯವಾಗಲಿದೆ. ಪ್ರಸ್ತುತ ದೆಹಲಿಯ ಮೂರು ರಾಜ್ಯಸಭೆ ಸ್ಥಾನಗಳನ್ನು ಆಪ್ ಹೊಂದಿದೆ.

ಬಿಜೆಪಿಗೆ ಬಹುಮತ ಕಷ್ಟ:ಬಿಜೆಪಿ ತನ್ನ ಬಳಿಯಿದ್ದ ಬಹುತೇಕ ರಾಜ್ಯಸಭೆ ಸ್ಥಾನಗಳನ್ನು ಉಳಿಸಿಕೊಂಡರೂ, ರಾಜ್ಯಸಭೆಯಲ್ಲಿ ಪೂರ್ಣ ಬಹುಮತ ಪಡೆದಿಲ್ಲ. ಇದಕ್ಕಾಗಿ 2024 ಏಪ್ರಿಲ್​ವರೆಗೆ ಕಾಯುವುದು ಅನಿವಾರ್ಯವಾಗಿದೆ. ಮುಂದಿನ ವರ್ಷ ಕೇವಲ 9 ಸ್ಥಾನಗಳು ತೆರವಾಗಲಿವೆ. ಇದರಿಂದ ಬಿಜೆಪಿಗೆ ಹೆಚ್ಚಿನ ಪ್ರಯೋಜನ ಆಗದು. 2024ರಲ್ಲಿ ವಿವಿಧ ರಾಜ್ಯಗಳ 54 ಸ್ಥಾನಗಳು ತೆರವಾಗಲಿವೆ. ಅಲ್ಲಿಯವರೆಗೂ ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆಯಲು ಯುಪಿಎ ಹೊರತಾದ ಪಕ್ಷಗಳ ಅವಲಂಬನೆ ಅಗತ್ಯವಾಗಿದೆ.

ನಾಮನಿರ್ದೇಶಿತರ ಪಾತ್ರ:ಹಾಲಿ ರಾಜ್ಯಸಭೆಯ 12 ನಾಮನಿರ್ದೇಶಿತರಲ್ಲಿ 9 ಮಂದಿ ಬಿಜೆಪಿ ಭಾಗವಾಗಿದ್ದು. ಅದರ ಒಟ್ಟು 97 ಸೀಟುಗಳಲ್ಲಿ ಇವರೂ ಸೇರಿದ್ದಾರೆ. ಮುಂದಿನ ತಿಂಗಳು ಸರ್ಕಾರ ರಾಜ್ಯಸಭೆಗೆ ಏಳು ಸದಸ್ಯರನ್ನು ನಾಮನಿರ್ದೇಶನ ಮಾಡಬೇಕಿದೆ. ‘ನಾಮನಿರ್ದೇಶಿತರು ರಾಜಕೀಯ ಪಕ್ಷವನ್ನು ಸೇರಿದಲ್ಲಿ, ಮಸೂದೆಗಳ ಮೇಲಿನ ಮತದಾನ ಇತ್ಯಾದಿ ವಿಚಾರದಲ್ಲಿ ಪಕ್ಷದ ವಿಪ್ ಅನ್ನು ಪಾಲಿಸಬೇಕಾಗುತ್ತದೆ. ಆದರೆ, ರಾಷ್ಟ್ರಪತಿ ಚುನಾವಣೆಯಲ್ಲಿ ವಿಪ್ ಅನ್ವಯವಾಗುವುದಿಲ್ಲ. ಇಂಥ ನಾಮನಿರ್ದೇಶಿತರಿಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ಹಕ್ಕು ಇರುವುದಿಲ್ಲ’ ಎಂದು ಸಂವಿಧಾನ ತಜ್ಞರು ಹೇಳುತ್ತಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
