ಬೆಂಗಳೂರು:ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪರ್ಧಿಸುವ ಸಾಧ್ಯತೆ ಇದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಕೊಡುಕೊಳ್ಳುವ ಮಾತುಕತೆ ಇನ್ನೂ ನಡೆದಿಲ್ಲ. ಜೆಡಿಎಸ್ ತಾನಾಗಿ ಬೆಂಬಲ ಯಾಚಿಸಲು ಮುಂದಾಗಿಲ್ಲ. ಕಾಂಗ್ರೆಸ್ ಸಹ ಹೆಚ್ಚುವರಿ ಮತಗಳನ್ನು ವರ್ಗಾವಣೆ ಮಾಡುವ ಭರವಸೆ ನೀಡಿಲ್ಲ.
ಬಿಜೆಪಿಗೆ ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಬಹುದು. ಇಬ್ಬರನ್ನು ಗೆಲ್ಲಿಸಿಕೊಂಡ ನಂತರ ಆ ಪಕ್ಷದಲ್ಲಿ 27 ಮತಗಳು ಉಳಿಯುತ್ತವೆ. ಮೂರನೇ ಅಭ್ಯರ್ಥಿ ನಿಲ್ಲಿಸಲು 19 ಮತಗಳ ಅಗತ್ಯ ಬೀಳುತ್ತದೆ. ಬೇರೆ ಕಡೆಯಿಂದ ಅಷ್ಟು ಮತಗಳನ್ನು ಕ್ರಾಸ್ ಮಾಡಿಸುವುದು ಸುಲಭದ ಕೆಲಸವೇನಲ್ಲ. ಕಾಂಗ್ರೆಸ್ ಒಬ್ಬ ಅಭ್ಯರ್ಥಿ ಗೆಲ್ಲಿಸಿಕೊಂಡ ನಂತರ 23 ಮತಗಳು ಉಳಿಯುತ್ತವೆ, ಆದ್ದರಿಂದ ಎರಡನೇ ಅಭ್ಯರ್ಥಿ ನಿಲ್ಲಿಸುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಕೇವಲ ಒಂದು ಸ್ಥಾನಕ್ಕೆ ಸ್ಪರ್ಧಿಸಲು ಈಗಾಗಲೆ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಅಂತಿಮ ಮಾಡಿದೆ. ಜೆಡಿಎಸ್​ಗೆ ಒಂದು ಸ್ಥಾನಕ್ಕೆ ಸ್ಪರ್ಧಿಸುವುದಕ್ಕೂ 12 ಮತಗಳ ಕೊರತೆ ಇದೆ. ಆದ್ದರಿಂದ ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲ ಯಾಚಿಸಬೇಕಾಗಿದೆ.ಇದನ್ನೂ ಓದಿ:ಖರ್ಗೆಗೆ ರಾಜ್ಯಸಭೆ ಟಿಕೆಟ್ ಕೊಡುವಂತೆ ಹೈಕಮಾಂಡ್‌ಗೆ ನಾನೇ ಶಿಫಾರಸು ಮಾಡಿದ್ದೆ: ಸಿದ್ದರಾಮಯ್ಯ
ಕಾಂಗ್ರೆಸ್​ನಲ್ಲಿ ಬೆಂಬಲ ಪಡೆದರೆ ವಿಧಾನಪರಿಷತ್​ನ ಒಂದು ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ ಎಂಬ ಆತಂಕ ಜೆಡಿಎಸ್​ಗೆ ಕಾಡುತ್ತಿದೆ. ಪರಿಷತ್​ಗೆ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಲು ಅವಕಾಶ ಇದೆ. ಆದ್ದರಿಂದಲೇ ಜೆಡಿಎಸ್ ತಾನಾಗಿ ಬೆಂಬಲ ಕೋರಲು ಮುಂದಾಗಿಲ್ಲ. ಬಿಜೆಪಿ ಜತೆ ಹೋಗುವುದನ್ನು ತಪ್ಪಿಸಲು ಕಾಂಗ್ರೆಸ್ ತಾನಾಗಿ ಮತಗಳ ವರ್ಗಾವಣೆ ಬಗ್ಗೆ ಭರವಸೆ ನೀಡುತ್ತದೆಂಬ ನಿರೀಕ್ಷೆಯಲ್ಲಿ ಜೆಡಿಎಸ್ ವರಿಷ್ಠರು ಕಾಯುತ್ತಿದ್ದಾರೆ. ಕಾಂಗ್ರೆಸ್​ಗೂ ತಾವಾಗಿ ಮುಂದೆ ಹೋದರೆ ಪರಿಷತ್ ಸದಸ್ಯ ಸ್ಥಾನ ಕಸಿಯುವುದು ತಪ್ಪಿ ಹೋಗುತ್ತದೆಂಬ ಅಳುಕಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್​ನಲ್ಲಿ ಗೊಂದಲವಾದರೆ ಯಾರಾದರೂ ಪ್ರಭಾವಿ ಕಪು್ಪಕುದುರೆಯನ್ನು ಕಣಕ್ಕಿಳಿಸಿ ಮೂರನೇ ಸ್ಥಾನ ಗೆಲ್ಲುವ ಬಗ್ಗೆ ಬಿಜೆಪಿ ಆಸೆ ಹೊಂದಿದೆ. ಅಂತಿಮವಾಗಿ ದೇವೇಗೌಡರು ನೇರವಾಗಿ ಸೋನಿಯಾ ಗಾಂಧಿ ಜತೆ ಮಾತುಕತೆ ನಡೆಸಿದರೆ, ಬೆಂಬಲ ಸಿಗುವ ನಿರೀಕ್ಷೆ ಇದೆ. ಜೆಡಿಎಸ್ ಮಾತ್ರ ಕಾಂಗ್ರೆಸ್ ಅಥವಾ ಬಿಜೆಪಿ ಎರಡು ಕಡೆ ಅವಕಾಶವನ್ನು ತೆರೆದಿಟ್ಟುಕೊಂಡು ಕಾಯುತ್ತಿದೆ.
ಬೆಂಗಳೂರು:ರಾಜ್ಯಸಭೆ ಚುನಾವಣೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಕಣಕ್ಕಿಳಿಸಲು ಜೆಡಿಎಸ್ ಶಾಸಕಾಂಗ ಸಭೆ ಸರ್ವಾನುಮತದಿಂದ ತೀರ್ವನಿಸಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ಪಕ್ಷದ ಶಾಸಕರು ಭಾಗವಹಿಸಿದ್ದರು. ದೇವೇಗೌಡರು ರಾಜ್ಯಸಭೆ ಪ್ರವೇಶಿಸುವುದು ಇಂದಿನ ಅಗತ್ಯಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ಅವರನ್ನು ರಾಜ್ಯಸಭೆಗೆ ಕಳುಹಿಸಬೇಕು ಎಂದು ಶಾಸಕಾಂಗ ಸಭೆಯಲ್ಲಿ ಒಕ್ಕೊರಲ ತೀರ್ವನಕ್ಕೆ ಬರಲಾಯಿತು. ಸಭೆ ಬಳಿಕ ಮಾತನಾಡಿದ ಎಚ್.ಕೆ. ಕುಮಾರಸ್ವಾಮಿ, ರಾಜ್ಯಸಭೆಗೆ ಅಭ್ಯರ್ಥಿಯಾಗಿ ದೇವೇಗೌಡ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.ಇದನ್ನೂ ಓದಿ:ರಾಜ್ಯಸಭೆ ಚುನಾವಣೆಗೆ ಖರ್ಗೆ ಕಾಂಗ್ರೆಸ್ ಅಭ್ಯರ್ಥಿ: ಎಐಸಿಸಿ ಅಧಿಕೃತ ಘೋಷಣೆ
ಗೌಡರು ಒಪ್ಪಿಗೆ ನೀಡಿಲ್ಲ:ರಾಜ್ಯಸಭೆಗೆ ಸ್ಪರ್ಧಿಸಲು ದೇವೇಗೌಡರು ಇನ್ನೂ ಒಪ್ಪಿಲ್ಲ. ಈ ಚುನಾವಣೆ ಸಂಬಂಧ ಇದುವರೆಗೂ ಕಾಂಗ್ರೆಸ್ ನಾಯಕರ್ಯಾರೂ ನಮ್ಮನ್ನು ಸಂರ್ಪಸಿಲ್ಲ. ಆದರೆ, ಗೌಡರು ಸ್ಪರ್ಧಿಸಿದರೆ ಪಕ್ಷಾತೀತವಾಗಿ ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಕಾಂಗ್ರೆಸ್​ನಿಂದ ಒಬ್ಬ ಅಭ್ಯರ್ಥಿ, ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಳ್ಳಬಹುದು. 3ನೇ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿಗೆ ಹಾಗೂ 2ನೇ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್​ಗೆ ಸಂಖ್ಯಾಬಲ ಕೊರತೆ ಇದೆ. ಎರಡೂ ಪಕ್ಷಗಳಲ್ಲಿ ಉಳಿಯುವ ಹೆಚ್ಚುವರಿ ಮತಗಳನ್ನು ನೋಡಿದಾಗ ನಮ್ಮಲ್ಲಿ ಸಂಖ್ಯೆ ಜಾಸ್ತಿ ಇದೆ ಎಂದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + 3 =
Remember me
