ಬೆಂಗಳೂರು:ಜೆಡಿಎಸ್ ಪರಮೋಚ್ಚ ನಾಯಕ ದೇವೇಗೌಡರು ಅದೃಷ್ಟವಂತ ರಾಜಕಾರಣಿ. ಮಗ ಎಚ್.ಡಿ.ಕುಮಾರಸ್ವಾಮಿ 38 ಶಾಸಕರನ್ನು ಇಟ್ಟುಕೊಂಡು ಮುಖ್ಯಮಂತ್ರಿಯಾದರೆ, ದೇವೇಗೌಡರು ಕೇವಲ 34 ಶಾಸಕ ಬಲದ ಮೇಲೆಯೇ ರಾಜ್ಯಸಭೆ ಪ್ರವೇಶಿಸಲಿದ್ದಾರೆ.
ಒಟ್ಟು 222 ಸದಸ್ಯ ಬಲದ ವಿಧಾನಸಭೆಯಲ್ಲಿ ಒಂದು ರಾಜ್ಯಸಭೆ ಸ್ಥಾನದ ಆಯ್ಕೆಗೆ 46 ಶಾಸಕರ ಮತ ಅನಿವಾರ್ಯ. ಆದರೆ 34 ಸದಸ್ಯ ಬಲವಿದ್ದರೂ ಬಿಜೆಪಿ ಮೂರನೇ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಕಣಕ್ಕಿಳಿಸದ ಹಾಗೆ ಕರಾಮತ್ತು ಮಾಡಿ ಚುನಾವಣಾ ಗೆಲುವಿಗೆ ರಹದಾರಿ ರೂಪಿಸಿಕೊಂಡಿದ್ದಾರೆ. ಯಾವುದೇ ಪಕ್ಷದ ಜತೆ ಮೈತ್ರಿ, ಕೊಡುಕೊಳ್ಳುವಿಕೆ ಇಲ್ಲದೆ ಗೆಲುವು ಸಾಧಿಸಲು ಬೇಕಾದ ತಂತ್ರಗಾರಿಕೆ ಸದ್ದಿಲ್ಲದೇ ಮಾಡಿ ಮುಗಿಸಿದ್ದಾರೆ.
ಚುನಾವಣೆ ಘೋಷಣೆಯಾದ ಆರಂಭದ ದಿನಗಳಲ್ಲಿ ಕಾಂಗ್ರೆಸ್ ತನ್ನ ಹೆಚ್ಚುವರಿ ಮತಗಳನ್ನು ರಾಜ್ಯಸಭೆಯಲ್ಲಿ ದೇವೇಗೌಡರಿಗೆ ನೀಡುವುದು, ಅದಕ್ಕೆ ಪ್ರತಿಯಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಶಾಸಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಕುರಿತು ಪ್ರಸ್ತಾಪವಾಗಿತ್ತು. ಆದರೆ, ದೇವೇಗೌಡರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ಮಾಡಿ, ‘ನೀವು ಕಣಕ್ಕಿಳಿಯಿರಿ, ನಾವು ಎರಡನೇ ಅಭ್ಯರ್ಥಿ ಕಣಕ್ಕಿಳಿಸುವುದಿಲ್ಲ’ ಎಂಬ ಭರವಸೆ ನೀಡಿದರೆ, ಇತ್ತ ಬಿಜೆಪಿ ಸಹ ಮೂರನೇ ಅಭ್ಯರ್ಥಿ ಕಣಕ್ಕೆ ಇಳಿಸದಿರುವ ನಿರ್ಣಯ ಮಾಡಿದ್ದರಿಂದ ಜೆಡಿಎಸ್​ಗೆ ಡಬಲ್ ಧಮಾಕಾ ಸಿಕ್ಕಿದೆ. ಯಾವುದೇ ಕೊಡುಕೊಳ್ಳುವಿಕೆ ಇಲ್ಲದೆ ಇತ್ತ ರಾಜ್ಯಸಭೆ, ಅತ್ತ ವಿಧಾನಪರಿಷತ್ ಸ್ಥಾನ ಗೆಲ್ಲುವ ಅವಕಾಶ ಲಭಿಸಿದೆ. ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ದೇವೇಗೌಡರ ಚಾಣಾಕ್ಷ ನಡೆಗೆ ಇದು ಸಾಕ್ಷಿ ಎಂದು ಜೆಡಿಎಸ್​ನಲ್ಲಿ ವ್ಯಾಖ್ಯಾನಿಸಲಾಗುತ್ತದೆ.ಇದನ್ನೂ ಓದಿ:ನಿದ್ರಿಸುತ್ತಿದ್ದ ದಲಿತ ಯುವಕನನ್ನು ಗುಂಡಿಕ್ಕಿ ಕೊಂದ ಮೇಲ್ವರ್ಗದ ಯುವಕರು…
ಬಿಜೆಪಿಯಲ್ಲಿ 27, ಪಕ್ಷೇತರರು 2, ಬಿಎಸ್​ಪಿ 1 ಸೇರಿ ಬರೋಬ್ಬರಿ 30 ಹೆಚ್ಚುವರಿ ಮತಗಳಿದ್ದರೂ ಮೂರನೇ ಅಭ್ಯರ್ಥಿ ಕಣಕ್ಕಿಳಿಸದಂತೆ ದೇವೇಗೌಡರು ತಂತ್ರಗಾರಿಕೆ ನಡೆಸಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ನಾಮಪತ್ರ ಸಲ್ಲಿಕೆ ಇಂದು:ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂ.9 ಕೊನೆಯ ದಿನ. ದೇವೇಗೌಡ ಮಂಗಳವಾರ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಲಿದೆ. ಬಿಜೆಪಿ ಮೂರನೇ ಅಭ್ಯರ್ಥಿ ನಿಲ್ಲಿಸದೆ ಕೇವಲ 2 ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಿದೆ. ಹೀಗಾಗಿ ನಾಲ್ವರು ಅಭ್ಯರ್ಥಿಗಳಷ್ಟೇ ಕಣದಲ್ಲಿರುವ ಕಾರಣ ಅವಿರೋಧ ಆಯ್ಕೆ ನಡೆಯಲಿದೆ.
ರಾಜ್ಯಸಭೆಗೆ ಇಬ್ಬರನ್ನು ಕಳುಹಿಸುವ ಅವಕಾಶ ಇದ್ದಾಗಲೆಲ್ಲ ಬಿಜೆಪಿ, ಕೇಂದ್ರದಿಂದ ಒಬ್ಬರನ್ನು ಕಳುಹಿಸುವ ಸಂಪ್ರದಾಯ ಈ ಬಾರಿ ಮುರಿದಿದೆ. ಹಿಂದೆ ವೆಂಕಯ್ಯ ನಾಯ್ಡು, ಹೇಮಮಾಲಿನಿ, ನಿರ್ಮಲಾ ಸೀತಾರಾಮನ್. ಹೀಗೆ ಬೇರೆ ರಾಜ್ಯದವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಿದೆ. ಆದರೆ ಈ ಬಾರಿ ರಾಜ್ಯದಿಂದಲೇ ಇಬ್ಬರನ್ನು ಕಳುಹಿಸುತ್ತಿದೆ.
ನಮ್ಮ ಉತ್ಪನ್ನಗಳು ಇಲ್ಲದೆ ಭಾರತೀಯರ ಜೀವನ ದುಸ್ಸಾಧ್ಯ ಎಂದ ಚೀನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
