ಬೆಂಗಳೂರು:ಇಂದು ಬೆಳಗ್ಗೆಯಿಂದಲೇ ರಾಜ್ಯಸಭೆ ಚುನಾವಣೆ‌ಗೆ ವೋಟಿಂಗ್ ಆರಂಭಗೊಂಡಿದ್ದು, ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ‌ಮೊದಲ ಮತದಾನ ಮಾಡಿದರು. ತದನಂತರ ಬಂದ ಶಾಸಕರು ತಮ್ಮ ಗುಂಪಿನ ಜತೆಗೆ ಬಂದು ಮತ ಚಲಾಯಿಸುತ್ತಿದ್ದಾರೆ. ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ಪ್ರಕ್ರಿಯೆ ಶುರುವಾಗಿದೆ.
ಇದನ್ನೂ ಓದಿ:ಹನುಮ ವಿಹಾರಿ ಆಂಧ್ರ ಕ್ರಿಕೆಟ್ ಟೀಮ್ ತೊರೆಯಲು ಸಿಎಂ ಜಗನ್​ ಕಾರಣ: ತೆಲುಗು ದೇಶಂ ಪಕ್ಷ ನೇರ ಆರೋಪ
ಬಿಜೆಪಿಯ ಸದಸ್ಯರು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಇನ್ನು ಕಾಂಗ್ರೆಸ್​ ನಾಯಕರು ಮತಹಾಕಲು ಬಸ್​ನಲ್ಲಿ ಬಂದಿದ್ದು, ತಮ್ಮ ಅಭ್ಯರ್ಥಿಗಳ ಪರವಾಗಿ ಮತದಾನ ಮಾಡಲು ಒಟ್ಟಾಗಿ ಎಂಟ್ರಿ ಕೊಟ್ಟರು. ಸದ್ಯ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್​ ಶಾಸಕರು ವೋಟಿಂಗ್ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
“ನಮ್ಮ ಶಾಸಕರು ಬದ್ಧತೆ ಉಳಿಸಿಕೊಂಡಿದ್ದಾರೆ. ನಮ್ಮಲ್ಲಿರುವ ಒಟ್ಟು 19 ಶಾಸಕರಲ್ಲಿ ಒಗ್ಗಟ್ಟಿದೆ” ಎಂದು ಎಚ್​.ಡಿ. ಕುಮಾರಸ್ವಾಮಿ ಹೇಳಿದರು. ಇನ್ನು ಮತ ಚಲಾಯಿಸಲು ಬಂದ ಸಿಎಂ ಸಿದ್ದರಾಮಯ್ಯ, “ಬಿಜೆಪಿ, ಜೆಡಿಎಸ್ ಮತಗಳೇ ನಮಗೆ ಬರಲಿವೆ. ನಮ್ಮ ಮೂವರು ಅಭ್ಯರ್ಥಿಗಳು ಜಯ ಸಾಧಿಸುತ್ತಾರೆ. ನಮ್ಮ ಶಾಸಕರಿಗೆ ಆಸೆ, ಆಮಿಷ ಒಡ್ಡುತ್ತಿದ್ದಾರೆ. ಹೀಗಾಗಿ ಎಫ್​ಐಆರ್ ಹಾಕಲಾಗಿದೆ. ಎಲ್ಲರೂ ಗೆಲ್ಲಬೇಕು ಅಂತಾ ಅಭ್ಯರ್ಥಿ ಹಾಕುತ್ತಾರೆ. ಆತ್ಮಸಾಕ್ಷಿ ಮತ ಅನ್ನೋದು ಇದ್ಯಾ” ಎಂದು ಹೇಳಿದರು.
ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಲು ಈ ಡ್ರೈ ಫ್ರೂಟ್​ಗಳನ್ನು ಸೇವಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
