ಗೋಕರ್ಣ: ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು ಶುಕ್ರವಾರ ಶಿವಯೋಗ ಪುಣ್ಯ ಕಾಲದಲ್ಲಿ ಮಹಾಗಣಪತಿ ಮತ್ತು ಮಹಾಬಲೇಶ್ವರ ಆತ್ಮಲಿಂಗಕ್ಕೆ ಶಾಸ್ತ್ರೋಕ್ತ ಪೂಜೆ ಕೈಗೊಂಡರು.
ಪಾರಂಪರಿಕ ಮುಖ್ಯ ಅರ್ಚಕ ವೇ. ಶೇಷ ಸುಬ್ರಾಯ ಅಡಿಮೂಳೆ ಅವರು ಪೂಜೆ ನೆರವೇರಿಸಿಕೊಟ್ಟರು. ಮಹಾಬಲೇಶ್ವರ ಮಂದಿರ ವತಿಯಿಂದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಕೋರೆ ಅವರನ್ನು ಶಾಲು ಹೊದಿಸಿ ಗೌರವಿಸಿದರು. ವೇ. ಶಿತಿಕಂಠ ಹಿರೇ ಉದ್ಯಮಿ ನಾಗರಾಜ ಹಿತ್ತಲಮಕ್ಕಿ ಇದ್ದರು.
ಪ್ರಾಧಿಕಾರ ಅಗತ್ಯ: ನಂತರ ಇಲ್ಲಿನ ಓಂ ಹೋಟೆಲ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಭಾಕರ ಕೋರೆ, ನಮ್ಮ ಕುಟುಂಬ ಅನೇಕ ತಲೆಮಾರುಗಳಿಂದ ಶಿವರಾತ್ರಿ ಸಮಯದಲ್ಲಿ ಆತ್ಮಲಿಂಗವನ್ನು ಪೂಜಿಸುವ ಪದ್ಧತಿ ಕಾಪಾಡಿಕೊಂಡು ಬಂದಿದೆ. ಕಳೆದ ಐದು ದಶಕಕ್ಕೂ ಹೆಚ್ಚಿನ ಕಾಲದಿಂದ ನಾನು ಅದನ್ನು ಮುಂದುವರೆಸಿದ್ದೇನೆ. ಆದರೆ, ಕಳೆದ ಹಲವು ವರ್ಷಗಳಲ್ಲಿ ಗೋಕರ್ಣ ಕ್ಷೇತ್ರ ಉಳಿದ ಖ್ಯಾತ ಕ್ಷೇತ್ರಗಳಿಗೆ ಹೋಲಿಸಿದರೆ ಏನೇನೂ ಅಭಿವೃದ್ಧಿ ಕಾಣದಿರುವುದು ವಿಷಾದಕರವಾಗಿದೆ. ಇಲ್ಲಿ ಎಲ್ಲೂ ನೋಡ ಸಿಗದ ಐದು ಪ್ರತ್ಯೇಕ ಬೀಚ್​ಗಳಿವೆ. ಆದರೆ, ವಿಶ್ವದ ಅತ್ಯಂತ ಅಸ್ವಚ್ಛ ಬೀಚ್​ಗಳಲ್ಲಿ ಗೋಕರ್ಣದ ಬೀಚ್ ಸೇರ್ಪಡೆಯಾಗಿದೆ. ಮೂಲ ಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ. ಜೊತೆಗೆ ಗೋಕರ್ಣ ತಾಲೂಕು ಆಗುವ ಅರ್ಹತೆ ಪಡೆದಿದ್ದರೂ ಆ ಬಗ್ಗೆ ಪ್ರಯತ್ನಗಳೇ ಆಗಿಲ್ಲ. ನಗರಸಭೆ ಮಟ್ಟಕ್ಕೆ ಏರಬೇಕಾಗಿದ್ದ ಗೋಕರ್ಣ ಇಂದಿಗೂ ಗ್ರಾಮ ಪಂಚಾಯಿತಿ ಸ್ಥರದಲ್ಲಿ ಇರುವುದರಿಂದ ಅಭಿವೃದ್ಧಿಗೆ ತೀವ್ರ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಗೋಕರ್ಣ ಅಭಿವೃದ್ಧಿಗೆ ಪ್ರತ್ಯೇಕವಾದ ಪ್ರಾಧಿಕಾರ ರಚಿಸುವುದು ಅತ್ಯಂತ ಸೂಕ್ತವಾಗಿದ್ದು ಇದಕ್ಕೆ ಎಲ್ಲ ಬಗೆಯ ಸಹಾಯ, ಸಹಕಾರ ನೀಡುತ್ತೇನೆ ಎಂದು ಅವರು ನುಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − nine =
Remember me
