ಬಳ್ಳಾರಿ:ಜಿಲ್ಲೆಯ ಒಬ್ಬ ಶಾಸಕರ ಸ್ವಾರ್ಥಕ್ಕಾಗಿ ವಿಜಯನಗರ ಜಿಲ್ಲೆ ರಚನೆಯಾಗುತ್ತಿದೆ. ಸರ್ಕಾರವೂ ಶಾಸಕರ ಸ್ವಾರ್ಥಕ್ಕೆ ಬೆಂಬಲವಾಗಿ ನಿಂತಿದೆ ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೆಸರು ಹೇಳದೆ ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ನೆರವು ನೀಡಿದ್ದಕ್ಕೆ ವಿಜಯನಗರ ಜಿಲ್ಲೆಯ ಉಡುಗೊರೆ ನೀಡಲಾಗುತ್ತಿದೆ. ವಿಜಯನಗರ ಜಿಲ್ಲೆ ರಚನೆಗೆ ಯಾವುದೇ ಆಡಳಿತಾತ್ಮಕ ಕಾರಣಗಳಿಲ್ಲ. ಬಳ್ಳಾರಿ ನಗರದ ಹೊರವಲಯದಲ್ಲಿ ಆಂಧ್ರ ಗಡಿ ಇದೆ. ಭಾಷಾ ವಿವಾದ ಇರಬಾರದು ಎಂಬ ಕಾರಣಕ್ಕೆ ಬಳ್ಳಾರಿ ಕೇಂದ್ರ ಸ್ಥಾನವನ್ನಾಗಿ ಮಾಡಿ ದೊಡ್ಡ ಜಿಲ್ಲೆ ರಚಿಸಲಾಗಿತ್ತು. ಬಿಜೆಪಿ ಸರ್ಕಾರ ಅಂದಿನ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಇದನ್ನೂ ಓದಿ:ಕೋವಿಡ್ ಲಸಿಕೆ ವಿತರಣಾ ತಂತ್ರಗಾರಿಕೆ – ಸಿಎಂಗಳ ಜತೆಗೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್
ವಿಜಯನಗರ ಸಾಮ್ರಾಜ್ಯ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಬೃಹತ್ ವ್ಯಾಪ್ತಿ ಒಳಗೊಂಡಿತ್ತು. ಇತಿಹಾಸ ತಿಳಿಯದವರು ಹಂಪಿ ಸುತ್ತಮುತ್ತಲಿನ ಪ್ರದೇಶವನ್ನೇ ವಿಜಯನಗರ ಸಾಮ್ರಾಜ್ಯ ಎಂದುಕೊಂಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲೆಯ ಶಾಸಕರು, ಸಂಸದರ ಸಭೆ ಕರೆದಿದ್ದಾಗ ಬಿಜೆಪಿ ಶಾಸಕರನ್ನು ಒಳಗೊಂಡಂತೆ ಶೇ.90 ಜನಪ್ರತಿನಿಧಿಗಳು ಜಿಲ್ಲೆ ವಿಭಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಬಳ್ಳಾರಿ ಜಿಲ್ಲೆಗೇ ವಿಜಯನಗರ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಲಾಗಿತ್ತು.
ಇದನ್ನೂ ಓದಿ:ಫೇಕ್ ಟಿಆರ್​ಪಿ ಹಗರಣ- ಚಾರ್ಜ್​ಶೀಟ್ ಸಲ್ಲಿಸಿದ ಮುಂಬೈ ಪೊಲೀಸ್
ಇದೀಗ ಯಾವುದೇ ಚರ್ಚೆ ಇಲ್ಲದೆ ವಿಜಯನಗರ ಜಿಲ್ಲೆ ಘೋಷಿಸಲಾಗಿದೆ. ಸರ್ಕಾರದ ತೀರ್ಮಾನಕ್ಕೆ ನಮ್ಮ ವಿರೋಧ ಇದೆ. ಅಖಂಡ ಜಿಲ್ಲೆ ಇರಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಹಂಪಿ ಹಾಗೂ ತುಂಗಭದ್ರಾ ಜಲಾಶಯ ಬಿಟ್ಟುಕೊಡಲು ಸಾಧ್ಯವೇ ಇಲ್ಲ. ಬಿಜೆಪಿ ಶಾಸಕರು ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಸೈಯದ್ ನಾಸೀರ್ ಹುಸೇನ್ ಆಗ್ರಹಿಸಿದರು.
ಇದನ್ನೂ ಓದಿ:ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ ಮುಕ್ತಾಯ: ಕರೊನಾ ಲಸಿಕೆ ಬಗ್ಗೆ ಗುಡ್​ ನ್ಯೂಸ್​!
ಕೆಪಿಸಿಸಿ ಮಾಧ್ಯಮ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಮಾತನಾಡಿ, ಜನಾಭಿಪ್ರಾಯದ ಮೇರೆಗೆ ಬಳ್ಳಾರಿ ಆಂಧ್ರ ಪ್ರದೇಶಕ್ಕೆ ಸೇರ್ಪಡೆಯಾಗದೆ ಕರ್ನಾಟಕದಲ್ಲಿ ಉಳಿದಿದೆ. ಬಿಜೆಪಿ ಸರ್ಕಾರ ಜಿಲ್ಲೆ ವಿಭಜನೆಗೆ ಜನಾಭಿಪ್ರಾಯ ಪಡೆದಿದೆಯಾ. ಜಿಲ್ಲೆ ವಿಭಜನೆಗೆ ಅಭಿವೃದ್ಧಿಯೇ ಕಾರಣ ಎನ್ನುವುದಾದರೆ ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆಗೆಯಲು, ಸಮನಾಂತರ ಜಲಾಶಯ ನಿರ್ಮಾಣಕ್ಕೆ ಯಾಕೆ ಆದ್ಯತೆ ನೀಡಿಲ್ಲ. ಜಲಾಶಯದ ಹೂಳು ತೆಗೆಯಲು, ಹಂಪಿ ಅಭಿವೃದ್ಧಿಗೆ ಆನಂದ ಸಿಂಗ್ ಪ್ರಯತ್ನವೇನು ಎಂದು ಪ್ರಶ್ನಿಸಿದರು.ಬಿಜೆಪಿಯವರು ರಾಜಕೀಯ ಮಾಡುವುದಾದರೆ ವಿಧಾನಸಭೆ ಉಪ ಚುನಾವಣೆಗಳಂತೆ ಸ್ಥಳಿಯ ಸಂಸ್ಥೆಗಳ ಚುನಾವಣೆ ನಡೆಸಲು ಕ್ರಮಕೈಗೊಳ್ಳಬೇಕೆಂದು ಉಗ್ರಪ್ಪ ಒತ್ತಾಯಿಸಿದರು.
ಕರೊನಾದಿಂದಾಗಿ ಶುಕ್ರಯಾನ ಮುಂದಕ್ಕೆ – 2023ರಲ್ಲಿ ಯಾತ್ರೆ ಸಾಧ್ಯತೆ ಕಡಿಮೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − fourteen =
Remember me
