|ಜಗದೀಶ ಹೊಂಬಳಿಬೆಳಗಾವಿ
ಸಾಂಸ್ಕೃತಿಕ ಶ್ರೀಮಂತಿಕೆಗೆ ಹೆಸರಾಗಿರುವ ಕುಂದಾನಗರಿ ಬೆಳಗಾವಿಯಲ್ಲಿ ಈ ಬಾರಿ ಅದ್ದೂರಿಯಾಗಿ ನಡೆದ ಕರ್ನಾಟಕ ರಾಜ್ಯೋತ್ಸವ ಎಲ್ಲ ವರ್ಷಗಳ ದಾಖಲೆ ಮುರಿದಿದೆ. ನಾಡು-ನುಡಿಗೆ ಸಂಬಂಧಿಸಿದಂತೆ ರಾಜ್ಯೋತ್ಸವದಲ್ಲಿ ಸುಮಾರು 100 ರೂಪಕಗಳ ಸಮೇತ 12 ಗಂಟೆಗಳ ಕಾಲ ಮೆರವಣಿಗೆ ಜರುಗಿತು. ಸಂಭ್ರಮದ ಆಚರಣೆಗೆ ಅನುದಾನ ನೀಡುವಂತೆ ಇಲ್ಲಿಯ ಕನ್ನಡಪರ ಸಂಘಟನೆಗಳು ಸರ್ಕಾರವನ್ನು ಕೋರಿದ್ದರೂ ಸ್ಪಂದನೆ ಸಿಗಲಿಲ್ಲ. ಆದರೆ, ಕನ್ನಡಪರ ಸಂಘಟನೆ, ಕನ್ನಡಾಭಿಮಾನಿಗಳೇ ಸುಮಾರು 10 ಕೋಟಿ ರೂ. ಸಂಗ್ರಹಿಸಿ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು, ವ್ಯಾಪಾರಸ್ಥರು, ಗುತ್ತಿಗೆದಾರರು, ಹೋಟೆಲ್ ಮಾಲೀಕರು ಹಣ ನೀಡಿ ಸಹಕಾರ ನೀಡಿದ್ದಾರೆ.
ಇನ್ನು ಹುಕ್ಕೇರಿ ಹಿರೇಮಠದಿಂದ ರಾಜ್ಯೋತ್ಸವದಂದು ಊಟದ ವ್ಯವಸ್ಥೆ ಮಾಡಲಾಗಿತ್ತು. ಅದನ್ನು ಹೊರತುಪಡಿಸಿ, ಇಷ್ಟೊಂದು ಪ್ರಮಾಣದಲ್ಲಿ ಹಣ ಹೊಂದಿಸಿ ಕನ್ನಡದ ಹಬ್ಬ ಆಚರಣೆ ಮಾಡಿದ್ದು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಮೆರವಣಿಗೆ ಮುಗಿದು ಐದಾರು ದಿನಗಳಾದರೂ ಕುಂದಾನಗರಿ ಮಾತ್ರ ರಾಜ್ಯೋತ್ಸವ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿವೆ.
4 ಲಕ್ಷ ಜನರು ಭಾಗಿ, 50 ಡಾಲ್ಬಿ ಬಳಕೆ:ರಾಜ್ಯೋತ್ಸವ ಆಚರಣೆಯಲ್ಲಿ ಬೇರೆ ಬೇರೆ ಜಿಲ್ಲೆಗಳ ಕನ್ನಡಾಭಿಮಾನಿಗಳು ಸೇರಿ ಸುಮಾರು 4 ಲಕ್ಷ ಜನರು ಭಾಗವಹಿಸಿದ್ದರು ಎಂದು ಬಂದೋಬಸ್ತ್ ಕಲ್ಪಿಸಿದ್ದ ಪೊಲೀಸರು ಹೇಳಿದ್ದಾರೆ. ಒಂದೊಂದು ರೂಪಕಗಳಿಗೆ ಅಂದಾಜು 10 ಸಾವಿರ ರೂ. ನಿಂದ 40 ಸಾವಿರ ರೂ. ಖರ್ಚು ಮಾಡಲಾಗಿದೆ. 50ಕ್ಕೂ ಹೆಚ್ಚು ಬೃಹದಾಕಾರದ ಡಾಲ್ಬಿ ಬಳಸಲಾಗಿದೆ. ಒಂದೊಂದು ಡಾಲ್ಬಿಗೆ ಅಂದಾಜು 3-4 ಲಕ್ಷ ರೂ. ವರೆಗೆ ಖರ್ಚು ಮಾಡಲಾಗಿದೆ. ವಿವಿಧ ಕನ್ನಡಪರ ಸಂಘಟನೆಗಳಿಂದ 70-80 ರೂಪಕ ಸಿದ್ಧಪಡಿಸಿ ಮೆರವಣಿಗೆ ಮಾಡಲಾಗಿದೆ. ಭುವನೇಶ್ವರಿ, ಮರಳಿನ ರಾಯಣ್ಣ ಮೂರ್ತಿ, ಚನ್ನಮ್ಮನ ಕಾಕತಿ ಕೋಟೆ, ಪುನೀತ್​ರಾಜಕುಮಾರ್ ರೂಪಕಗಳು, ರೇಣುಕಾ ಯಲ್ಲಮ್ಮ ದೇವಿ ಮೂರ್ತಿ, ಹಂಪಿ ರೂಪಕ, ಸಂಗೊಳ್ಳಿ ರಾಯಣ್ಣ, ಚನ್ನಮ್ಮ, ಚಿತ್ರದುರ್ಗ ಕೋಟೆ-ವೀರಮದಕರಿ ರೂಪಕ, ಮಹಿಷಾಸುರ, ಕಂಬಳ ರೂಪಕಗಳು ಜನರ ಗಮನಸೆಳೆದವು.
ಬೆಂಗಳೂರಿಗೆ ಬೆಣ್ಣೆ ಬೆಳಗಾವಿಗೆ ಸುಣ್ಣ:ರಾಜ್ಯೋತ್ಸವ ಆಚರಣೆಗೆ ಬೆಂಗಳೂರಿನಲ್ಲಿ ಎರಡೇ ಎರಡು ಸಂಘಟನೆಗಳಿಗೆ ಸರ್ಕಾರ 1.75 ಕೋಟಿ ರೂ. ಅನುದಾನ ನೀಡಿದೆ. ಆದರೆ, ಗಡಿಜಿಲ್ಲೆ ಬೆಳಗಾವಿಯಲ್ಲಿ ವಿಶೇಷವಾಗಿ ಆಚರಿಸಲಾಗುವ ರಾಜ್ಯೋತ್ಸವಕ್ಕೆ ಅನುದಾನ ನೀಡದೆ ನಿರ್ಲಕ್ಷ್ಯ ತೋರಿತು. ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿಸದಿರುವುದಕ್ಕೆ ಇಲ್ಲಿನ ಜನಪ್ರತಿನಿಧಿಗಳ ಮೇಲೆ ಕನ್ನಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
‘ಕೆಜಿಎಫ್’​, ‘ಕಾಂತಾರ’ದಂತೆ ‘ವಿಜಯಾನಂದ’ ಕೂಡ ಪ್ಯಾನ್​ ಇಂಡಿಯಾ ಸದ್ದು ಮಾಡಲಿ: ಹರ್ಷಿಕಾ ಪೂಣಚ್ಚ

‘ಗಂಧದಗುಡಿ’ಯಿಂದ ಸಿಹಿಸುದ್ದಿ: ಪುನೀತ್ ಮಹತ್ವಾಕಾಂಕ್ಷೆಯ ಸಿನಿಮಾ ಟಿಕೆಟ್​ ದರದಲ್ಲಿ ಭಾರಿ ಇಳಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
