ರಮೇಶ ದೊಡ್ಡಪುರಬೆಂಗಳೂರು:ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಾಲನೆ ನೀಡಿದ್ದು, ಈವರೆಗೆ ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.
ಪ್ರತಿವರ್ಷ ನವೆಂಬರ್ 1ಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಇಲಾಖೆ ಅಳವಡಿಸಿಕೊಂಡಿರುವ ನಿಯಮಾವಳಿಯಂತೆ ಈ ವರ್ಷ 65 ಸಾಧಕರನ್ನು ಗೌರವಿಸಲಾಗುತ್ತದೆ. ಅಕ್ಟೋಬರ್ ಕೊನೇ ವಾರದಲ್ಲಿ 1:2 ಅನುಪಾತದಲ್ಲಿ ಅರ್ಹರ ಹೆಸರನ್ನು ಮುಖ್ಯಮಂತ್ರಿಗಳ ನೇತೃತ್ವದ ಆಯ್ಕೆ ಸಮಿತಿಗೆ ಸಲ್ಲಿಕೆ ಮಾಡಲು ಪ್ರಶಸ್ತಿ ಸಲಹಾ ಸಮಿತಿ ಗುರುವಾರ ನಡೆದ ಮೊದಲ ಸಭೆಯಲ್ಲಿ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.
ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಎರಡು ಹಂತದ ಪ್ರಕ್ರಿಯೆ ನಡೆಯುತ್ತದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆ ಹಾಗೂ ಇಲಾಖೆ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುವ 25 ಜನರ ಸಲಹಾ ಸಮಿತಿಯನ್ನು ಇತ್ತೀಚೆಗೆ ಸರ್ಕಾರ ರಚಿಸಿದೆ. ಕೆಲ ಅಕಾಡೆಮಿಗಳ ಸದಸ್ಯರೂ ಸೇರಿ ವಿವಿಧ ಕ್ಷೇತ್ರಗಳ ತಜ್ಞರನ್ನು ಸೇರ್ಪಡೆ ಮಾಡಲಾಗಿದ್ದು, ಕುಮಾರ ಕೃಪಾ ಆವರಣದಲ್ಲಿ ಗುರುವಾರ ಮೊದಲ ಸಭೆ ನಡೆಸಿದೆ. ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಬಹುತೇಕ ಅಭ್ಯರ್ಥಿಗಳೇ ಸಲ್ಲಿಕೆ ಮಾಡಿದ್ದು, ಕೆಲವು ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದ್ದಾರೆ. ಪ್ರತಿ ಅರ್ಜಿಯ ಕುರಿತೂ ಪರಿಶೀಲನೆ ನಡೆಸಬೇಕು.
ಇದನ್ನೂ ಓದಿ:ಕರೊನಾ ಎಫೆಕ್ಟ್: ಪ್ರಥಮ ಪಿಯು ವಿದ್ಯಾರ್ಥಿಗಳೆಲ್ಲರೂ ಪಾಸ್!
ಮಾರ್ಗಸೂಚಿಯಲ್ಲಿರುವಂತೆ, ಪ್ರತಿ ಜಿಲ್ಲೆಗೆ ಕನಿಷ್ಠ ಒಂದು ಪ್ರಾತಿನಿಧ್ಯ ಇರಲೇಬೇಕು. ಜತೆಗೆ 60 ವರ್ಷ ದಾಟಿರಬೇಕು. 2019ರಲ್ಲಿ ಜಾನಪದ ಕ್ಷೇತ್ರದಿಂದ ಆಯ್ಕೆಯಾಗಿದ್ದ ಉಸ್ಮಾನ್ ಸಾಬ್ ಅವರಿಗೆ 42 ವರ್ಷ ಎಂಬುದು ಕೊನೆಯ ಕ್ಷಣದಲ್ಲಿ ತಿಳಿದು ಪ್ರಶಸ್ತಿ ಪ್ರದಾನದ ದಿನ ಹೆಸರನ್ನು ಕೈಬಿಡಲಾಗಿತ್ತು. ಈ ಹಿಂದೆ ಪ್ರಶಸ್ತಿ ಪಡೆದಿದ್ದಾರೆಯೇ ಎಂಬುದನ್ನೂ ಗಮನಿಸಿಕೊಂಡು ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಸಚಿವ ಸಿ.ಟಿ. ರವಿ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆದಿದೆ.
ಇದನ್ನೂ ಓದಿ:‘ಛೋಟಾ ತೆಲಗಿ’ ಎಂಬ ಈ ಖತರ್ನಾಕ್ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದೇ ರೋಚಕ…
ಕರೊನಾ ವಾರಿಯರ್ ಚರ್ಚೆ :ವಿಶ್ವವನ್ನೆ ಆವರಿಸಿರುವ ಕರೊನಾ ಸಂಕಷ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ಪೊಲೀಸರು, ಪೌರ ಕಾರ್ವಿುಕರೂ ಸೇರಿ ಕರೊನಾ ವಾರಿಯರ್​ಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬಹುದೇ ಎಂಬ ಕುರಿತು ಚರ್ಚೆ ನಡೆದಿದೆ. ಆದರೆ ಹಾಲಿ ಸರ್ಕಾರಿ ನೌಕರರಿಗೆ ಹಾಗೂ 60 ವರ್ಷದೊಳಗಿನವರಿಗೆ ಪ್ರಶಸ್ತಿ ನೀಡಲು ಅವಕಾಶವಿಲ್ಲ. ಹೈಕೋರ್ಟ್​ನಲ್ಲೆ ಒಪ್ಪಿ ಈ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಲಾಗಿದೆ, ಮೀರಲು ಸಾಧ್ಯವಿಲ್ಲ. ಕರೊನಾ ವಾರಿಯರ್​ಗಳನ್ನು ಬೇರೆ ಸ್ವರೂಪದಲ್ಲಿ ಗೌರವಿಸಲು ಚಿಂತನೆ ನಡೆಸಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರಿ ಮಳೆ! ಯಾವ್ಯಾವ ಭಾಗದಲ್ಲಿ? ಇಲ್ಲಿದೆ ಮಾಹಿತಿ…
ಕಾರ್ಯಕ್ರಮದ ಸ್ವರೂಪ ಅಂತಿಮವಾಗಿಲ್ಲ:ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಲಾಗುತ್ತದೆ. ಈ ವರ್ಷವೂ ನ.1ಕ್ಕೆ ದಿನಪೂರ್ತಿ ರವೀಂದ್ರ ಕಲಾಕ್ಷೇತ್ರವನ್ನು ಕಾಯ್ದಿರಿಸಲಾಗಿದೆ. ಆದರೂ ಕಾರ್ಯಕ್ರಮದ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಅ.21ರಿಂದ ಒಳಾಂಗಣ ಕಾರ್ಯಕ್ರಮಗಳನ್ನು ನಡೆಸಬಹುದು ಎಂದು ಇತ್ತೀಚೆಗೆ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಿದೆ.ಇದನ್ನೂ ಓದಿ:ಶಿರಾದಲ್ಲಿ ಜೆಡಿಎಸ್‌ಗೆ ಸ್ಥಳೀಯ ನಾಯಕರ ಗುಡ್‌ಬೈ: ಬಿಜೆಪಿ-ಕಾಂಗ್ರೆಸ್‌ನತ್ತ ದೌಡು!
ಆದರೆ ನ.1ರ ವೇಳೆಗೆ ಯಾವ ಮಾರ್ಗಸೂಚಿ ಇರಲಿದೆ ಎಂಬುದು ತಿಳಿದಿಲ್ಲ. 65 ಪ್ರಶಸ್ತಿ ಪುರಸ್ಕೃತರು, ಅವರ ಜತೆಗೆ ತಲಾ ಒಬ್ಬರು, ಆಹ್ವಾನಿತ ಗಣ್ಯರು ಸೇರಿ ಕನಿಷ್ಠ 200 ಜನರ ಒಳಾಂಗಣ ಕಾರ್ಯಕ್ರಮ ನಡೆಸಲು ನಿಯಮಾವಳಿಯಲ್ಲಿ ಅವಕಾಶವಿದ್ದರೆ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಇಲ್ಲವಾದರೆ, ಮುಂದಿನ ದಿನದಲ್ಲಿ ಪ್ರಶಸ್ತಿ ನೀಡಬೇಕೆ, ಹಂತಹಂತವಾಗಿ ನೀಡಬೇಕೆ ಎಂಬ ವಿಚಾರಗಳಲ್ಲಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ನಾಗರಹೊಳೆಯಲ್ಲಿ ಏಳು ತಿಂಗಳಿಂದ ಸ್ಥಗಿತಗೊಂಡಿದ್ದ ಸಫಾರಿ ಪುನರಾರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 8 =
Remember me
