ಯಾದಗಿರಿ: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಗಿರಿಜಿಲ್ಲೆಯ ಹಿರಿಯ ಸಾಹಿತಿ, ಸಂಶೋಧಕ, ನಿವೃತ್ತ ಚಿತ್ರಕಲಾ ಶಿಕ್ಷಕ ಡಿ.ಎನ್.ಅಕ್ಕಿ ಭಾಜನರಾಗಿದ್ದಾರೆ.  ಸಾಹಿತ್ಯ ಕ್ಷೇತ್ರದಲ್ಲಿ ಅಕ್ಕಿ ಸಲ್ಲಿಸಿದ ಗಣನೀಯ ಸಾಧನೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಮೂಲತಃ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಡಿ.ಎನ್.ಅಕ್ಕಿ ಅವರಿಗೆ 76 ವರ್ಷ. ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರು. ಮಣ್ಣಲ್ಲಿ ಅಡಗಿದ್ದ ಯಾದಗಿರಿ ಜಿಲ್ಲೆಯ ಪುರಾತನ ಗತ ವೈಭವಗಳನ್ನು ಹೊರತೆಗೆಯುವಲ್ಲಿ ಶ್ರಮಿಸಿದವರು.ಈಗಲೂ ಸಹ ಸಂಶೋಧನೆಯನ್ನೇ ಜೀವನವನ್ನಾಗಿಸಿಕೊಂಡು, ಚಾಲುಕ್ಯ, ರಾಷ್ಟ್ರಕೂಟರಂಥ ರಾಜಮನೆತನಗಳ ಶಾಸನಗಳನ್ನು ತಮ್ಮ ಪುಸ್ತಕಗಳಲ್ಲಿ ಉಲ್ಲೇಖಿಸಿ, ನಾಡಿನ ಗತ ಇತಿಹಾಸವನ್ನು ಪರಿಚಯಿಸುವಲ್ಲಿ ಶ್ರಮಿಸುತ್ತಿದ್ದಾರೆ. ಸುಮಾರು 20 ಹೆಚ್ಚು ಸಂಶೋಧನಾ ಕೃತಿಗಳನ್ನು ಬರೆದಿದ್ದಾರೆ.
ಸಂಶೋಧನಾ ಗ್ರಂಥಗಳಾದ ಸಗರನಾಡ ಸಿರಿ, ಹೆಕ್ಕಲು ತೆನೆ, ಜೈನ ಪರಂಪರೆ ಅಕ್ಕಿಯವರು ಪ್ರಮುಖ ಕೃತಿಗಳು. ‘ಬಾನರಂಗ’ ಕಲಬುರಗಿ ಬಾನೂಲಿ ಕೇಂದ್ರದಲ್ಲಿ ಪ್ರಸಾರವಾದ ನಾಟಕ.  ರಾಷ್ಟ್ರಪತಿ ಪ್ರಶಸ್ತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಇವರ ಸಾಧನೆ ಗುರುತಿಸಿ ಗೌರವಿಸಿವೆ. ಅಕ್ಕಿ ಅವರನ್ನು ಈ ಬಾರಿ ರಾಜ್ಯ ಸರ್ಕಾರ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.
ಭಾರತೀಯ ವಾಯುಪಡೆಗೆ ಆನೆಬಲ: ನ.5ರಂದು ಮತ್ತೆ ಮೂರು ರಫೇಲ್​ ಯುದ್ಧವಿಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 4 =
Remember me
