ರುದ್ರಣ್ಣ ಹರ್ತಿಕೋಟೆಬೆಂಗಳೂರು :ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗದ ಬೇಡಿಕೆ ಕೊನೆಗೂ ಈಡೇರುವ ಕಾಲ ಬಂದಿದೆ. ಕಳೆದ ಹಲವು ವರ್ಷಗಳ ಬೆಳವಣಿಗೆಯಿಂದಾಗಿ ಖಾಸಗಿ ವಲಯದ ಉದ್ಯೋಗ ಮರೀಚಿಕೆ ಎಂಬ ಭಾವನೆ ಮೂಡಿತ್ತಾದರೂ ಕನ್ನಡಿಗರ ನಿರೀಕ್ಷೆಯನ್ನು ವಾಸ್ತವಗೊಳಿಸುವ ನಿಟ್ಟಿನಲ್ಲಿ ಹೊಸ ಬೆಳವಣಿಗೆಗಳು ನಡೆದಿವೆ. ಈ ನಿಟ್ಟಿನಲ್ಲಿ ವಿಧೇಯಕವೂ ಸಿದ್ಧವಾಗಿದೆ.
ಕಾಯ್ದೆಯ ಅಂಶ
*ಯಾವುದೇ ಖಾಸಗಿ ವಲಯದಲ್ಲಿ್ಲ ಎ ಮತ್ತು ಬಿ ಹುದ್ದೆ ಶೇ.80 ಹಾಗೂ ಸಿ ಮತ್ತು ಡಿ ಹುದ್ದೆ ಶೇ. 100 ಕನ್ನಡಿಗರಿಗೆ ಇರಬೇಕು.*ಯಾವುದೇ ಉದ್ದಿಮೆಯಲ್ಲಿ 100 ಉದ್ಯೋಗಗಳಿಗೆ ನೇಮಕಾತಿ ನಡೆದರೆ ರಾಜ್ಯದ ಪ್ರತಿನಿಧಿ ಇರಬೇಕು*ಯಾವುದೇ ಹುದ್ದೆಗೆ ಅರ್ಹ ಕನ್ನಡಿಗರು ಇಲ್ಲದ ಸಂದರ್ಭದಲ್ಲಿ ಮಾತ್ರ ಸರ್ಕಾರದ ಗಮನಕ್ಕೆ ತಂದು ಒಪ್ಪಿಗೆ ಪಡೆದು ಬೇರೆಯವರನ್ನು ನೇಮಕ ಮಾಡಬಹುದು*ಸರ್ಕಾರದ ಸೌಲಭ್ಯಗಳನ್ನು ಪಡೆದ ಉದ್ದಿಮೆಗಳು 15 ವರ್ಷ ಕರ್ನಾಟಕದಲ್ಲಿ ವಾಸವಾಗಿರುವವರನ್ನು ಕನ್ನಡಿಗರೆಂದು ಪರಿಗಣಿಸಬೇಕು. ಸೌಲಭ್ಯ ಪಡೆಯದೇ ಇರುವವರು 10 ವರ್ಷ ವಾಸವಾಗಿರುವವರನ್ನು ಕನ್ನಡಿಗರೆಂದು ಪರಿಗಣಿಸಬಹುದು. ಆದರೆ ಕನ್ನಡ ಓದಲು, ಬರೆಯಲು ಬರಬೇಕು
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೆಲವು ವರ್ಷಗಳಿಂದ ಸರ್ಕಾರದ ಮೇಲೆ ನಿರಂತರ ಒತ್ತಡ ತಂದು, ಸರೋಜಿನಿ ಮಹಿಷಿ ವರದಿ ಜಾರಿಗೆ ಪ್ರಯತ್ನ ಮಾಡಿತ್ತು. ಇದೀಗ ಅವಶ್ಯಕತೆಗೆ ತಕ್ಕಂತೆ ವರದಿಯನ್ನು ಪರಿಷ್ಕರಿಸಿಕೊಟ್ಟಿದೆ. ಜತೆಗೆ ವಿಧೇಯಕ ಸಿದ್ಧಪಡಿಸುವುದಕ್ಕಿದ್ದ ಹಲವು ವಿಘ್ನಗಳನ್ನು ಬಗೆಹರಿಸಲಾಗಿದೆ ಎಂದು ಕಾರ್ವಿುಕ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.
ಬಜೆಟ್ ಭರವಸೆ:2014ರಲ್ಲಿ ಸರ್ಕಾರ ರೂಪಿಸಿದ್ದ ಕೈಗಾರಿಕಾ ನೀತಿ ಹಾಗೂ 2017ರ ಬಜೆಟ್​ನಲ್ಲಿ ಕನ್ನಡಿಗರಿಗೆ ಉದ್ಯೋಗದ ಘೋಷಣೆ ಮಾಡಲಾಗಿತ್ತು. ಆಗಿನಿಂದ ಇಲಾಖೆಗಳ ನಡುವೆ ಚರ್ಚೆಗಳು ನಡೆದಿದ್ದವು.

ಅಧಿಸೂಚನೆ ಹಾದಿಯಲ್ಲಿ:ಕಾರ್ವಿುಕ ಇಲಾಖೆ ಇತ್ತೀಚೆಗೆ ಕರ್ನಾಟಕ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶ) ನಿಯಮ 1961ಕ್ಕೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿತ್ತು. ಆದರೆ ಅಧಿಸೂಚನೆಯಿಂದ ಉಪಯೋಗವಿಲ್ಲವೆಂಬ ಕಾರಣಕ್ಕೆ ಕಾಯ್ದೆಯನ್ನೇ ರೂಪಿಸಬೇಕೆಂದು ಒತ್ತಡ ಬಂದ ಹಿನ್ನೆಲೆಯಲ್ಲಿ ಇದೀಗ ಅಧಿಸೂಚನೆ ಹಾದಿಯಲ್ಲಿಯೇ ವಿಧೇಯಕ ಸಿದ್ಧಪಡಿಸಲಾಗಿದೆ.
ಆಂಧ್ರಪ್ರದೇಶ ಮಾದರಿ :ಆಂಧ್ರಪ್ರದೇಶ ಸರ್ಕಾರ ಕಾಯ್ದೆ ರೂಪಿಸಿರುವ ಹಿನ್ನೆಲೆಯಲ್ಲಿ ಅದನ್ನೇ ಆಧಾರವಾಗಿಟ್ಟುಕೊಂಡು ಅಧ್ಯಯನ ನಡೆಸಿ ಕಾಯ್ದೆ ರೂಪಿಸಿರುವುದಾಗಿ ಮೂಲಗಳು ತಿಳಿಸಿವೆ.
ಸುಗ್ರೀವಾಜ್ಞೆ ಮೂಲಕ ಜಾರಿ?:ಹೊಸ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಬೇಕೋ ಅಥವಾ ತಕ್ಷಣ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಬೇಕೋ ಎಂಬ ಜಿಜ್ಞಾಸೆ ಇದೆ. ಈ ಕಾಯ್ದೆಯನ್ನು ಕಾರ್ವಿುಕ ಇಲಾಖೆ ಮಾತ್ರ ಜಾರಿಗೆ ತರಲು ಸಾಧ್ಯವಿಲ್ಲ. ಕೈಗಾರಿಕಾ ಇಲಾಖೆ ನೆರವು ಸಹ ಅಗತ್ಯ. ಆದ್ದರಿಂದ ಚುನಾವಣಾ ನೀತಿಸಂಹಿತೆ ಮುಗಿದ ನಂತರ ಅಂದರೆ ನ.10 ರ ನಂತರ ಈ ಎರಡು ಇಲಾಖೆಯ ಸಚಿವರಾದ ಜಗದೀಶ ಶೆಟ್ಟರ್ ಹಾಗೂ ಶಿವರಾಮ ಹೆಬ್ಬಾರ್ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ನಂತರ ಸಿಎಂ ಜತೆ ರ್ಚಚಿಸಿ ಸಂಪುಟದ ಮುಂದೆ ಮಂಡಿಸಲಾಗುತ್ತದೆ. ಸಂಪುಟದಲ್ಲಿ ಒಪ್ಪಿದರೆ ತಕ್ಷಣ ಸುಗ್ರೀವಾಜ್ಞೆ ಹೊರಡಿಸಲಾಗುತ್ತದೆ. ಇಲ್ಲದಿದ್ದರೆ ಮುಂದಿನ ಅಧಿವೇಶನದ ತನಕ ಕಾಯಲಾಗುತ್ತದೆ.
ಕಡ್ಡಾಯವಲ್ಲ, ಆದ್ಯತೆ :ಕನ್ನಡಿಗರಿಗೆ ‘ಕಡ್ಡಾಯ ಉದ್ಯೋಗ’ ಎಂದು ವಿಧೇಯಕದಲ್ಲಿ ಸೇರಿಸಿದರೆ ನ್ಯಾಯಾಲಯದಲ್ಲಿ ಬಿದ್ದುಹೋಗುವ ಅಪಾಯ ಇರುವುದರಿಂದ ‘ಆದ್ಯತೆ’ ಎಂದು ಸೇರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಏನಿರುತ್ತದೆ ಶಿಕ್ಷೆ?:ಕನ್ನಡಿಗರಿಗೆ ಉದ್ಯೋಗ ನೀಡದವರಿಗೆ ಸೌಲಭ್ಯ ಬಂದ್ ಮಾಡುವ ಅಥವಾ ದಂಡ ಹಾಕುವ ಬಗ್ಗೆಯೂ ಚರ್ಚೆ ನಡೆದಿದೆ. ಸಚಿವ ಜಗದೀಶ ಶೆಟ್ಟರ್ ಜತೆ ನಡೆಯುವ ಸಭೆಯಲ್ಲಿ ಈ ವಿಚಾರ ಅಂತಿಮವಾಗಲಿದೆ. ಏಕೆಂದರೆ ಹೂಡಿಕೆಗಳು ಬರದಿದ್ದರೆ ಎಂಬ ಭಯವೂ ಇದೆ. ಆಂಧ್ರಪ್ರದೇಶದಲ್ಲಿ ನಿಯಮ ಮೀರಿದವರಿಗೆ ದಂಡ ವಿಧಿಸಲಾಗುತ್ತದೆ.
ಒಂಬತ್ತು ಗಂಟೆ ವಿಚಾರಣೆ ಎದುರಿಸಿದ್ರೂ ಒಂದು ಕಪ್ ಟೀ ಕೂಡ ಕುಡಿದಿರಲಿಲ್ಲ ನಮೋ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + sixteen =
Remember me
