ಮಂಡ್ಯ:ಜಿಲ್ಲೆಯ ಇಬ್ಬರು ಸಾಧಕರಿಗೆ ರಾಜ್ಯ ಸರ್ಕಾರ 2020ನೇ ಸಾಲಿನ ಸಂಕೀರ್ಣ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಹಿಂದಿ ವಿರೋಧಿ ಚಳವಳಿಯ ಹೋರಾಟದ ಮುಂದಾಳತ್ವ ವಹಿಸಿಕೊಂಡು ಸಿವಿಲ್ ಉದ್ಯಮದಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ವಿ.ಲಕ್ಷ್ಮೀನಾರಾಯಣ್ ಹಾಗೂ ಅಂಗವಿಕಲರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಡಾ.ಕೆ.ಎಸ್.ರಾಜಣ್ಣ ಅವರಿಗೆ ಪ್ರಶಸ್ತಿಯ ಗರಿ ಮುಡಿಗೇರಿದೆ.ನಾಗಮಂಗಲ ತಾಲೂಕು ಹರದನಹಳ್ಳಿ ಗ್ರಾಮದ ವಿ.ಲಕ್ಷ್ಮೀನಾರಾಯಣ್, ಅತಿ ದೊಡ್ಡ ಕಟ್ಟಡ, ಮೂಲ ಸೌಕರ್ಯದ ಯೋಜನೆ ರೂಪಿಸುವುದರ ಜತೆಗೆ ಅದನ್ನು ನಿರ್ಮಿಸುವ ಮೂಲಕ ಪ್ರಖ್ಯಾತಿ ಪಡೆದರು. ಇವರ ನಿರ್ಮಿಸಿದ ಗುಣಮಟ್ಟದ ಕಾಮಗಾರಿಗೆ ಮಂಡ್ಯದ ದೂರ ಸಂಪರ್ಕ ವಿನಿಮಯ ಕೇಂದ್ರದ ಆಡಳಿತ ಕಚೇರಿ ಕಟ್ಟಡ, ಬೆಂಗಳೂರಿನ ಶೂಲೆ ಪ್ರದೇಶದ ವೃತ್ತಾಕಾರ ಅಂಚೆ ಕಚೇರಿ, ಮೈಸೂರಿನ ಯಾತ್ರಿನಿವಾಸ್ ಕಟ್ಟಡ ಸಾಕ್ಷಿಯಾಗಿದೆ.ಇನ್ನು ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಮಾಜಿ ಆಯುಕ್ತ ಡಾ.ಕೆ.ಎಸ್.ರಾಜಣ್ಣ ಅವರು ಛಲದಂಕಮಲ್ಲ ಎಂದೇ ಖ್ಯಾತನಾಮರಾಗಿದ್ದಾರೆ. ಮದ್ದೂರು ತಾಲೂಕು ಕೊಪ್ಪ ಗ್ರಾಮದಲ್ಲಿ ಜನಿಸಿದರು. ಸುಮಾರು 1500 ನಿರುದ್ಯೋಗಿ ಅಂಗವಿಕಲರಿಗೆ ಸ್ವಯಂ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಸುಮಾರು 150 ಜನ ನಿಗರ್ತಿಕ ಅಂಗವಿಕಲರಿಗೆ 1978ರಲ್ಲಿ ಮಾರುತಿ ಸೇವಾ ನಗರ ಹಾಗೂ 2005ರಲ್ಲಿ ಜೆ.ಪಿ.ನಗರದ ಜಂಬೂ ಸವಾರಿ ದಿಣ್ಣೆಯಲ್ಲಿ ಸರ್ಕಾರದಿಂದ ಉಚಿತ ನಿವೇಶನ ಕೊಡಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇದಲ್ಲದೆ ನೂರಾರೂ ಅಂಗವಿಕಲರಿಗೆ ದೂರವಾಣಿ ಬೂತ್ ಮಂಜೂರಾತಿ ಮಾಡಿಸಿಕೊಟ್ಟಿದ್ದಾರೆ. 1500ಕ್ಕೂ ಹೆಚ್ಚು ಜನರಿಗೆ ಸರ್ಕಾರದಿಂದ ತ್ರಿಚಕ್ರ ಸೈಕಲ್ ಮಂಜೂರು ಮಾಡಿಸಿದ್ದಾರೆ. ಅಂಗವಿಕಲರಿಗೆ ರಾಜಕೀಯ ಶಕ್ತಿ ಅವಶ್ಯಕವೆಂಬ ಘೋಷಣೆಯೊಂದಿಗೆ 2018ರಲ್ಲಿ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಣಕ್ಕಿಳಿದಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
