ಮೈಸೂರು:ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟಿ ರಾಖಿ ಸಾವಂತ್ ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಪತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಅವರನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ ಎಂದು ಹೇಳಿದ್ದಾಳೆ.
ನನಗೆ ನ್ಯಾಯ ಬೇಕು. ಆದಿಲ್‌ ಖಾನ್​ನಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗಬಾರದು. ಹೀಗಾಗಿ ನ್ಯಾಯಾಧೀಶರ ಮುಂದೆ ಬಂದು ಹಾಜರಾಗಿದ್ದೇನೆ. ಆದಿಲ್‌ ಖಾನ್‌ ನನ್ನೊಂದಿಗೆ ಕಾನೂನು ಬದ್ಧವಾಗಿ ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲಾತಿ ನನ್ನ ಬಳಿ ಇದೆ. ಇಂದು ಬೆಳಗ್ಗೆ ಆದಿಲ್ ಖಾನ್ ತಂದೆಯೊಂದಿಗೆ ಮಾತನಾಡಿದ್ದೇನೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಾಳೆ.
ಹಿಂದು ಎಂಬ ಕಾರಣಕ್ಕೆ ಆದಿಲ್ ಖಾನ್ ನನ್ನನ್ನು ಸ್ವೀಕಾರ ಮಾಡುತ್ತಿಲ್ಲ. ಹೀಗಾದರೆ ನಾನು ಏನು ಮಾಡಲಿ? ಆದಿಲ್ ನನ್ನಿಂದ 1.65 ಕೋಟಿ ರೂ. ಹಣ ಪಡೆದಿದ್ದಾನೆ‌. ಈವರೆಗೆ ಒಂದೇ ಒಂದು ರೂಪಾಯಿಯನ್ನೂ ಆತ ಹಿಂತಿರುಗಿಸಿಲ್ಲ. ಅಂದು ಮೈಸೂರಿನ ಜನ ಸರಿ ಇಲ್ಲ. ಹೀಗಾಗಿ ಮುಂಬೈಗೆ ಬರುತ್ತೇನೆ ಎಂದು ನನ್ನಲ್ಲಿ ಹೇಳಿದ್ದ. ಆ ನಂತರ ಮುಂಬೈನಲ್ಲಿ ನನ್ನ ಮೇಲೆ ಸಾಕಷ್ಟು ಬಾರಿ ಹಲ್ಲೆ ಮಾಡಿದ್ದಾನೆ. ಮೈಸೂರಿನ ನ್ಯಾಯಾಲಯದ ಮೇಲೆ ವಿಶ್ವಾಸವಿದ್ದ ನನಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳುತ್ತಾ, ರಾಖಿ ಸಾವಂತ್ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.
ಪತ್ನಿ ರಾಖಿ ಸಾವಂತ್‌ಗೆ ವರದಕ್ಷಿಣಿ ಕಿರುಕುಳ ನೀಡಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದ ಆದಿಲ್‌ ಖಾನ್ ಮೇಲೆ, ಇರಾನ್ ದೇಶದಿಂದ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಿದ್ದ ವಿದ್ಯಾ ರ್ಥಿನಿ ಮೇಲೆ ಅತ್ಯಾಚಾರ, ಬೆದರಿಕೆ, ವಂಚನೆ ಮಾಡಿದ ಆರೋಪದಡಿ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆದಿಲ್ ಖಾನ್​ನನ್ನು ವಿವಿ ಪುರಂ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
