ಉಡುಪಿ:ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಲ್ಲಿ ಸದಸ್ಯತ್ವ ಸಿಕ್ಕಿರುವುದು ಗುರುಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ರಾಮಜನ್ಮಭೂಮಿ ಕುರಿತು ಮಾಡಿದ ಸೇವೆಗೆ ಸಂದ ಗೌರವ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತ ರಾಜ್ಯಗಳ ಸಂತರ ಅಭಿಪ್ರಾಯ ಸಂಗ್ರಹಿಸಿ ಮಂದಿರ ನಿರ್ಮಾಣ ಬಗ್ಗೆ ಸಲಹೆ ಸೂಚನೆ ನೀಡುತ್ತೇನೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮಠದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸದಸ್ಯರಿಗೂ ಒಪ್ಪಿಗೆ ಸೂಚಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ನಂತರ ಟ್ರಸ್ಟ್ ಅಸ್ತಿತ್ವಕ್ಕೆ ಬರಲಿದ್ದು, ಪ್ರಥಮ ಸಭೆ ನಡೆಯಬಹುದು. ದಕ್ಷಿಣ ಭಾರತದ ಏಕೈಕ ಪ್ರತಿನಿಧಿಯಾಗಿ ಈ ಜವಾಬ್ದಾರಿ ನಿರ್ವಹಿಸಲು ಎಲ್ಲರ ಸಹಕಾರ, ಬೆಂಬಲ ಅಗತ್ಯ. ಕೇಂದ್ರ ಸರ್ಕಾರಕ್ಕೆ ಸ್ವೀಕೃತಿ ಮತ್ತು ಒಪ್ಪಿಗೆ ಪತ್ರವನ್ನು ಗುರುವಾರ ಕಳುಹಿಸಿಕೊಡಲಾಗಿದೆ ಎಂದರು. ಐತಿಹಾಸಿಕ ಕ್ಷೇತ್ರ ಆಗಿರುವುದರಿಂದ ಮಂದಿರವೂ ಭವ್ಯವಾಗಿರಬೇಕು. ಇದ್ದ ವ್ಯವಸ್ಥೆಗಳನ್ನು ಬಲಾಯಿಸೋದು ಕಷ್ಟ. ಆದರೆ, ಹೊಸ ವ್ಯವಸ್ಥೆ ಸೃಷ್ಟಿಸುವಾಗ ಉತ್ತಮವಾಗಿ ರೂಪಿಸಬಹುದು. ಯಾತ್ರಾರ್ಥಿಗಳ ಅನುಕೂಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ಟ್ರಸ್ಟ್​ನಲ್ಲಿ ಗುರುಗಳ ಸ್ಥಾನ ಖಚಿತವಾಗಿತ್ತು. ವಯಸ್ಸಿನ ಕಾರಣದಿಂದ ನನಗೆ ಮುಂದುವರಿಯುವಂತೆ ಆದೇಶ ಕೊಟ್ಟಿದ್ದರು. ಅದರಂತೆ ಒಪ್ಪಿಗೆ ಸೂಚಿಸಿದ್ದೇನೆ ಎಂದರು.
ರಾಮಚಂದ್ರನ ಕಾರ್ಯ ದಲ್ಲಿ ಹನುಮಂತನ ಪಾತ್ರ ದೊಡ್ಡದು. ಆಂಜನೇಯನ ಅವತಾರ ಜಾಗ ಕರ್ನಾಟಕ. ಮಧ್ವರು ವಾಯುದೇವರ 3ನೇ ಅವತಾರ ಎಂಬ ನಂಬಿಕೆ ಇದ್ದು, ಈ ಪರಂಪರೆಯಲ್ಲಿ ಬಂದ ಯತಿಗಳಿಗೆ ರಾಮನ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿರá-ವುದು ದೊಡ್ಡ ಭಾಗ್ಯ.
| ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
