ಉಡುಪಿ:ರಾಮ ಮಂದಿರಕ್ಕೆ ದೇಣಿಗೆ ನೀಡುವ ಕುರಿತಾಗಿ ಮತ್ತೊಮ್ಮೆ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ನನ್ನ ಹೆಸರಲ್ಲೇ ರಾಮನಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ.
ಸೋಮವಾರದಂದು ಉಡುಪಿಯಲ್ಲಿ ಜನಧ್ವನಿ ಪಾದಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, “ನನ್ನ ಹೆಸರೇನು? ಸಿದ್ದರಾಮಯ್ಯ. ನನ್ನ ಹೆಸರಲ್ಲೇ ರಾಮನಿದ್ದಾನೆ. ನಾವು ಮಹಾತ್ಮ ಗಾಂಧಿ ಹಿಂದುತ್ವ ಪಾಲಿಸುತ್ತೇವೆ. ಬಿಜೆಪಿಯವರು ಸಾವರ್ಕರ್ ಹಿಂದುತ್ವ ಪಾಲಿಸುತ್ತಾರೆ. ನಾನು ಅಯೋಧ್ಯೆಯ ರಾಮ ಮಂದಿರಕ್ಕೆ ದುಡ್ಡು ಕೊಡಲ್ಲ. ನಮ್ಮೂರಿನ ರಾಮಮಂದಿರಕ್ಕೆ ದುಡ್ಡು ಕೊಡುತ್ತೇನೆ. ಅಯೋಧ್ಯೆಯಲ್ಲಿ ಕಟ್ಟೋದು ದಶರಥನ ಮಗನದ್ದೇ ದೇಗುಲ ಹಾಗೆಯೇ ನಮ್ಮೂರಲ್ಲಿ ಕಟ್ಟುವ ರಾಮಮಂದಿರ ಕೂಡಾ ದಶರಥನ ಮಗನಿಗೇ” ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಕುರಿತಾಗಿ ಮಾತನಾಡಿದ ಅವರು, “ಮೀಸಲಾತಿ ಕೇಳುವುದು ತಪ್ಪೇನಿಲ್ಲ. ಸಂವಿಧಾನಾತ್ಮಕವಾಗಿ ಅರ್ಹತೆ ಇರುವವರಿಗೆ ಮೀಸಲಾತಿ ಕೊಡಿ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಪರಿಶಿಲಿಸಿ ಶಿಫಾರಸ್ಸು ಮಾಡಬೇಕು. ಹೊಸ ಸೇರ್ಪಡೆ ಮತ್ತು ಮೀಸಲಾತಿ ಕೈಬಿಡುವ ಬಗ್ಗೆ ಆಯೋಗ ಶಿಫಾರಸು ಮಾಡಬೇಕು. ರಾಜ್ಯದಲ್ಲಿ ಪ್ರತಿನಿತ್ಯ ಮೀಸಲಾತಿಗಾಗಿ ಹೋರಾಟಗಳು ನಡೆಯುತ್ತಿದೆ ಸರ್ಕಾರ ಸಂವಿಧಾನಾತ್ಮಕವಾಗಿ ಶೀಘ್ರ ತೀರ್ಮಾನ ಮಾಡಲಿ” ಎಂದು ಸಲಹೆ ಕೊಟ್ಟಿದ್ದಾರೆ.
ಇದೇ ಸಮಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಡಿಯೂರಪ್ಪ ಡೋಂಗಿ ರೈತನ ಮಗ. ಆತ ರೈತರ ಮೇಲೆ ಗೋಲಿಬಾರ್ ಮಾಡಿ ಕೊಂದು ಹಾಕಿದ. ಸಾಲಮನ್ನ ಮಾಡುವ ನೈತಿಕತೆ ಆತನಿಗಿಲ್ಲ. ಹಸಿರು ಶಾಲು ಹಾಕಲು ಅವನಿಗೆ ಯಾವ ನೈತಿಕತೆಯೂ ಇಲ್ಲ. ಡೋಂಗಿ ರೈತನ ಮಗ ಅಕ್ಕಿಯನ್ನು ಎರಡು ಕೆಜಿಗೆ ಇಳಿಸಿದ. ಬಿಜೆಪಿಯನ್ನು ರಾಜ್ಯದ ಜನರು ಕಿತ್ತೊಗೆಯಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 10 ಕೆಜಿ ಉಚಿತ ಅಕ್ಕಿ ಕೊಡಲಿದೆ. ಯಡಿಯೂರಪ್ಪನಷ್ಟು ಲಂಚಕೋರ ಭ್ರಷ್ಟ ಬೇರೆ ಇಲ್ಲ. ಯಡಿಯೂರಪ್ಪ ಚೆಕ್ ಮೂಲಕ ಲಂಚ ತಗೋತಿದ್ದ. ವಿಜಯೇಂದ್ರ ಆರ್ ಟಿ ಜಿ ಎಸ್ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದಾನೆ” ಎಂದು ದೂರಿದ್ದಾರೆ. (ದಿಗ್ವಿಜಯ ನ್ಯೂಸ್​)
ಯೋಗಿ ಸರ್ಕಾರದ ಬಜೆಟ್​ ಮಂಡನೆ; ಶ್ರೀರಾಮ ವಿಮಾನ ನಿಲ್ದಾಣಕ್ಕೆ 101 ಕೋಟಿ ರೂ.

ಪೆಟ್ರೋಲ್ ಬೆಲೆ ತಗ್ಗಿಸಲು ಮುಂದಾದ ಕೇಂದ್ರ ಸರ್ಕಾರ: ಏನ್ ಐಡಿಯಾ ಮಾಡ್ತಿದೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 18 =
Remember me
