ಬೆಂಗಳೂರು:‘ನನ್ನ ಸಹೋದರನ ಮನದಲ್ಲಿ ಏನಿದೆಯೆಂದು ನಾನು ಬಲ್ಲೆ’ ಎಂದಿರುವ ಸಚಿವ ಬಿ.ಶ್ರೀರಾಮುಲು, ‘ನಾವಿಬ್ಬರೂ ಸಹೋದರರು. ಒಟ್ಟಾಗಿ ಮಂದಿರಕ್ಕೆ ಹೋಗಿ ಬರೋಣ ಬನ್ನಿ’ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿಯನ್ನು ಕರೆದಿದ್ದಾರೆ.
‘ರಾಮಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ ಮತ್ತು ಕೊಡದವರ ಮನೆ ಗುರುತು ಮಾಡಲಾಗುತ್ತಿದೆ…’ ಎಂದು ಮೊನ್ನೆ ಟ್ವೀಟ್​ ಮೂಲಕ ಕುಮಾರಸ್ವಾಮಿ ಕಿಡಿಕಾರಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಶ್ರೀರಾಮುಲು, ಪಬ್ಲಿಸಿಟಿಗಾಗಿ ಹೇಳಿಕೆ ಎಂದು ಟೀಕಿಸಿದ್ದರು. ಇದೀಗ, ‘ನನ್ನ ಸಹೋದರನ(ಎಚ್​ಡಿಕೆ) ಮನದಲ್ಲಿ ಏನಿದೆಯೆಂದು ನಾನು ಬಲ್ಲೆ’ ಎಂದಿದ್ದಾರೆ.ಇದನ್ನೂ ಓದಿರಿಪಾಸ್​ಪೋರ್ಟ್- ಬೋರ್ಡಿಂಗ್​ ಪಾಸ್​ ಕೊಟ್ಟು ಮದ್ವೆಗೆ ಆಹ್ವಾನಿಸಿದ ನವಜೋಡಿ! ಸಖತ್​ ವೈರಲ್​ ಆಗ್ತಿದೆ ಈ ಮದ್ವೆ
‘ಪಬ್ಲಿಸಿಟಿಗಾಗಿ ಹೇಳಿಕೆ ಕೊಟ್ಟಿದ್ದಾರೆ’ ಎಂದಿದ್ದ ಶ್ರೀರಾಮುಲು ವಿರುದ್ಧ ಟ್ವೀಟ್​ ಮೂಲಕ ಕಿಡಿಕಾರಿದ್ದ ಎಚ್​ಡಿಕೆ, ‘ಪಬ್ಲಿಸಿಟಿಗೆ ನಾನು ಈ ಹೇಳಿಕೆ ಕೊಟ್ಟಿದ್ದೇನೆ ಎಂದು ಸೋದರ ಶ್ರೀರಾಮುಲು ಹೇಳಿದ್ದಾರೆ. ಪಾಪ ಅವರು ಮುಗ್ಧರು. ದೈವಬಲ, ಜನಾSIರ್ವಾದದಿಂದ 2 ಬಾರಿ ಸಿಎಂ ಆದ ನಾನು ಇನ್ನು ಯಾವ ಪಬ್ಲಿಸಿಟಿ ಪಡೆಯಬೇಕಿದೆ? ನನಗೆ ಅದರ ಅಗತ್ಯವೇನಿದೆ? ರಾಮ ಮಂದಿರ ಆಗಬೇಕೆಂದು ಕುಮಾರಸ್ವಾಮಿ ಅವರ ಮನಸ್ಸಲ್ಲೂ ಇದೆ ಎಂಬ ಅವರ ಮಾತನ್ನು ಮಾತ್ರ ಅನುಮೋದಿಸುತ್ತೇನೆ’ ಎಂದಿದ್ದರು. ಇದಕ್ಕೆ ರೀ ಟ್ವೀಟ್​ ಮಾಡಿರುವ ಶ್ರೀರಾಮುಲು, ‘ನನ್ನ ಸಹೋದರನ ಮನಸ್ಸಲ್ಲಿ ಏನಿದೆಯೆಂದು ನಾನು ಬಲ್ಲೆ.‌ ನೀವೇ ಒಪ್ಪಿದಂತೆ ನಿಮಗೆ ರಾಮ‌ ಮಂದಿರ ನಿರ್ಮಾಣವಾಗಲಿ ಎಂದಿದೆ. ದೇಣಿಗೆಯನ್ನೂ ಕೊಡುತ್ತೇನೆಂದು ಹೇಳಿದ್ದೀರಿ. ಇನ್ನೇನು ಸಮಸ್ಯೆ? ಕೇವಲ ಒಂದು ವರ್ಗವನ್ನು ಓಲೈಸಲು ಇಷ್ಟೆಲ್ಲ ಹೇಳಿಕೆಗಳ ಅಗತ್ಯವಿರಲಿಲ್ಲ. ಬನ್ನಿ ನಾವು ಸಹೋದರರು ಒಟ್ಟಾಗಿ ಮಂದಿರಕ್ಕೆ ಹೋಗಿ ಬರೋಣ. ಜನ-ಮತ ಆಮೇಲೆ’ ಎಂದು ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ.
ನನ್ನ ಸಹೋದರನ ಮನಸ್ಸಲ್ಲಿ ಏನಿದೆಯೆಂದು ನಾನು ಬಲ್ಲೆ.‌ನೀವೇ ಒಪ್ಪಿದಂತೆ ನಿಮಗೆ ರಾಮ‌ ಮಂದಿರ ನಿರ್ಮಾಣವಾಗಲಿ ಎಂದಿದೆ.‌ ದೇಣಿಗೆಯನ್ನೂ ಕೊಡುತ್ತೇನೆಂದು ಹೇಳಿದ್ದೀರ. ಇನ್ನೇನು ಸಮಸ್ಯೆ?ಕೇವಲ ಒಂದು ವರ್ಗವನ್ನು ಓಲೈಸಲು ಇಷ್ಟೆಲ್ಲ ಹೇಳಿಕೆಗಳ ಅಗತ್ಯವಿರಲಿಲ್ಲ.ಬನ್ನಿ ನಾವು ಸಹೋದರರು ಒಟ್ಟಾಗಿ ಮಂದಿರಕ್ಕೆ ಹೋಗಿ ಬರೋಣ. ಜನ,‌ ಮತ ಆಮೇಲೆ.‌https://t.co/G1AGlc1ZbD
— B Sriramulu (@sriramulubjp)February 17, 2021

ಇದಕ್ಕೂ ಮುನ್ನ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಎಚ್​ಡಿಕೆ, ‘ರಾಮ ಮಂದಿರ ನಿರ್ಮಾಣಕ್ಕೆ ನನ್ನ ಕಡೆಯಿಂದ ಯಾವುದೇ ವಿರೋಧವಿಲ್ಲ. ಆದ್ರೆ ಧಾರ್ಮಿಕ ಭ್ರಷ್ಟಾಚಾರ ಸಹಿಸಲ್ಲ’ ಎಂದಿದ್ದರು. ಅಲ್ಲದೆ, ‘ರಾಮಮಂದಿರ ನಿರ್ಮಾಣಕ್ಕಾಗಿ ದೇಣಿ ಕೊಡುವಂತೆ ಅಧಿಕೃತ ವ್ಯಕ್ತಿ ಬಂದು ಕೇಳಿದರೆ ನಾನು ಖಂಡಿತ ಹಣ ಕೊಡುತ್ತೇನೆ. ಒಂದು ಬಾರಿ ಅಲ್ಲದಿದ್ರೆ, ಎರಡು ಬಾರಿ ಕೊಡ್ತೀನಿ’ ಎಂದೂ ಹೇಳಿದ್ದರು.
ರಾಮ ಮಂದಿರಕ್ಕೆ ಒಂದಲ್ಲ-ಎರಡು ಬಾರಿ ದೇಣಿಗೆ ಕೊಡ್ತೀನಿ, ಆದ್ರೆ ಅಧಿಕೃತ ವ್ಯಕ್ತಿ ಬಂದು ಕೇಳಲಿ: ಎಚ್​ಡಿಕೆ

3 ಮಕ್ಕಳ ತಾಯಿ ಜತೆ ಯುವಕನ ಕಾಮಪುರಾಣ: ತ್ರೀಕೋನ ವಿವಾಹೇತರ ಸಂಬಂಧಕ್ಕೆ ಇಬ್ಬರು ಬಲಿ

ಮೊನ್ನೆ ನಾಯಿ ಮೇಲೆ ಅತ್ಯಾಚಾರ, ನಿನ್ನೆ ಭಿಕ್ಷುಕಿ ಮೇಲೆ ಕಾಮುಕರ ಅಟ್ಟಹಾಸ

ರಾಮ ಮಂದಿರ ಹೆಸ್ರಲ್ಲಿ ಯಾರ‍್ಯಾರೋ ಹಣ ಲೂಟಿ ಮಾಡ್ತಾರೆ, ನನ್ನ ಮನೆಗೂ ಬಂದು ಬೆದರಿಕೆ ಹಾಕಿದ್ರು: ಎಚ್​ಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
