ಬೆಂಗಳೂರು:ರಾಮಮಂದಿರ ನಿರ್ಮಾಣಕ್ಕಾಗಿ ದೇಣಿ ಕೊಡುವಂತೆ ಅಧಿಕೃತ ವ್ಯಕ್ತಿ ಬಂದು ಕೇಳಿದರೆ ನಾನು ಖಂಡಿತ ಹಣ ಕೊಡುತ್ತೇನೆ. ಒಂದು ಬಾರಿ ಅಲ್ಲದಿದ್ರೆ, ಎರಡು ಬಾರಿ ಕೊಡ್ತೀನಿ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದರು.
ರಾಮಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ ಮತ್ತು ಕೊಡದವರ ಮನೆ ಗುರುತು ಮಾಡಲಾಗುತ್ತಿದೆ… ಎಂದು ಮೊನ್ನೆಯಷ್ಟೇ ಟ್ವೀಟ್​ ಮೂಲಕ ಎಚ್​ಡಿಕೆ ಅಸಮಾಧಾನ ಹೊರಹಾಕಿದ್ದರು. ಈ ವಿವಾದಿತ ಟ್ವೀಟ್​ ದೇಶಾದ್ಯಂತ ಗೊಂದಲ ಮೂಡಿಸಿತ್ತು. ಮಾಜಿ ಮುಖ್ಯಮಂತ್ರಿಗಳ ಟ್ವೀಟ್ ಬಾಲಿಶ ಹಾಗೂ ಬೇಜವಾಬ್ದಾರಿಯಿಂದ ಕೂಡಿದೆ ಎಂದು ವಿಎಚ್​ಪಿ(ವಿಶ್ವ ಹಿಂದು ಪರಿಷತ್​) ಕಿಡಿಕಾರಿತ್ತು. ಈ ಕುರಿತು ಇಂದು(ಬುಧವಾರ) ಸುದ್ದಿಗೋಷ್ಠಿ ನಡೆಸಿದ ಎಚ್​ಡಿಕೆ, ನಾನು ಸಾರ್ವಜನಿಕವಾಗಿ ಜನರ ದಾರಿ ತಪ್ಪಿಸೋ ಕೆಲಸ ಮಾಡ್ತಿಲ್ಲ. ಯಾವುದೇ ಸಂಸ್ಥೆ ಹೆಸರೇಳದೆ ನನ್ನ ಬಳಿಯೂ ಕೆಲವರು ದೇಣಿಗೆ ಕೇಳಿದ್ರು. ಆ ತಂಡದಲ್ಲಿದ್ದ ಒಬ್ಬ ಹೆಣ್ಣುಮಗಳು ಬೆದರಿಸುವ ರೀತಿಯಲ್ಲಿ ಕೇಳಿದ್ರು. ದೇವರ ಹೆಸರಲ್ಲಿ ಪಾರದರ್ಶಕತೆ ಇಲ್ಲದೆ, ಬೀದಿ ಬೀದಿಗಳಲ್ಲಿ ದೇಣಿಗೆ ಸಂಗ್ರಹ ಮಾಡೋದು ಸರಿಯಲ್ಲ. ಯಾರ್ಯಾರೋ ವಸೂಲಿ ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ಅಧಿಕೃತ ವ್ಯಕ್ತಿಗಳು ಬಂದು ಹಣ ಸಂಗ್ರಹಿಸಲಿ ಎಂದರು.ಇದನ್ನೂ ಓದಿರಿಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ
ರಾಮ ಮಂದಿರ ನಿರ್ಮಾಣಕ್ಕೆ ಐದು ಸಾವಿರ ಕೋಟಿ ಹಣ ಸಂಗ್ರಹ ಮಾಡಿಕೊಳ್ಳಿ. ಇದಕ್ಕೆ ನನ್ನ ಬೆಂಬಲ ಇದೆ. ಆದ್ರೆ ರಾಮನ ಹೆಸ್ರಲ್ಲಿ ಯಾರ್ಯಾರೋ ಹಣ ಲೂಟಿ ಮಾಡೋದು ಬೇಡ ಅನ್ನೋದಷ್ಟೇ ನನ್ನ ಆಗ್ರಹ. ಇಂದು ಡಿಜಿಟಲ್​ ಮಯ ಆಗಿದೆ. ಜನ್ ಧನ್ ಹೆಸರಲ್ಲಿ ಅಕೌಂಟ್ ತೆರೆಯಲಾಗಿದೆ. ಆನ್ ಲೈನ್‌ನಲ್ಲಿ ಹಣ ಸಂಗ್ರಹ ಮಾಡಿಕೊಳ್ಳಿ. ಜನಸಾಮಾನ್ಯರ ನಂಬಿಕೆಗೆ ದ್ರೋಹ ಆಗಬಾರದು ಎಂದು ಕುಮಾರಸ್ವಾಮಿ ಹೇಳಿದರು. ಅಧಿಕೃತ ವ್ಯಕ್ತಿ ಬಂದು ದೇಣಿಗೆ ಕೇಳಿದ್ರೆ ನಾನೂ ಕೊಡುವೆ ಎಂದರು.
ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ಪಕ್ಷದವರೂ ದೇಣಿಗೆ ನೀಡಿದ್ದಾರೆ. ದೇವಸ್ಥಾನ ಕಟ್ಟಲು ಹಳ್ಳಿ‌ಹಳ್ಳಿಯಿಂದ ಬರ್ತಾರೆ. ದೇವೇಗೌಡರು ಪ್ರಧಾನಿ ಆದಾಗ ಮತ್ತು ಇಳಿದಾಗಲೂ ದೇವರ ಇಚ್ಛೆ ಅಂತ ಶೃಂಗೇರಿ‌ ಶ್ರೀಗಳ ಬಳಿ‌ ಹೇಳಿದ್ದಾರೆ. ನಾವು ದೇವರ ಹೆಸರಲ್ಲಿ ಯಾವುದೇ ರಾಜಕೀಯ ಮಾಡೋದಿಲ್ಲ. ದೇವರ ಹೆಸರಲ್ಲಿ ಪಾರದರ್ಶಕತೆ ಇಲ್ಲದೆ, ಬೀದಿ ಬೀದಿಗಳಲ್ಲಿ ಯಾರ್ಯಾರೋ ದೇಣಿಗೆ ಸಂಗ್ರಹ ಮಾಡೋದು ಸರಿಯಲ್ಲ ಎಂದರು.
ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

ರಾಮ ಮಂದಿರ ಹೆಸ್ರಲ್ಲಿ ಯಾರ‍್ಯಾರೋ ಹಣ ಲೂಟಿ ಮಾಡ್ತಾರೆ, ನನ್ನ ಮನೆಗೂ ಬಂದು ಬೆದರಿಕೆ ಹಾಕಿದ್ರು: ಎಚ್​ಡಿಕೆ

ಪತ್ನಿಯ ಕುಟುಂಬಸ್ಥರಿಂದಲೇ ಗಂಡನ ಹತ್ಯೆ! ಪ್ರೀತಿಯ ಗಂಡನ ಬರ್ತ್​ ಡೇ ಸಂಭ್ರಮದಲ್ಲಿದ್ದವಳಿಗೆ ಆಘಾತ…

3 ಮಕ್ಕಳ ತಾಯಿ ಜತೆ ಯುವಕನ ಕಾಮಪುರಾಣ: ತ್ರೀಕೋನ ವಿವಾಹೇತರ ಸಂಬಂಧಕ್ಕೆ ಇಬ್ಬರು ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
