ಬೆಂಗಳೂರು:ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಲ್ಲಿ ಖಾಲಿ ಇರುವ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಸೇರಿದಂತೆ 13,415 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
KSRTCಯಲ್ಲಿ ಖಾಲಿ ಇರುವ 3,745 ವಾಲನಾ, 726 ತಾಂತ್ರಿ ಸಿಬ್ಬಂದಿಯೆ ನೇಮಕಾತಿಗೆ ಈಗಾಗಲೇ ಕರೆಯಲಾಗಿರುವ ಜಾಹೀರಾತು ಪ್ರಕ್ರಿಯೆಯನ್ನು ಮುಂದುವರೆಸಲಾಗುವುದು. ಇದರ ಹೊರತಾಗಿ KSRTCಗೆ ಹೊಸದಾಗಿ 1,433 ಚಾಲನಾ, 2,738 ತಾಂತ್ರಿಕ ಸಿಬ್ಬಂದಿ, ಬಿಎಂಟಿಸಿಗೆ 2,000 ನಿರ್ವಾಹಕರು, 1,000 ಮಂದಿ ಚಾಲಕ ಕಂ ನಿರ್ವಾಹಕರು ಬೇಕಾಗಿದ್ದಾರೆ.
ಇದನ್ನೂ ಓದಿ:ನ್ಯಾಯಾಲಯದ ಆದೇಶ ಜಾರಿಗೆ 1.5ಲಕ್ಷ ರೂ. ಲಂಚಕ್ಕೆ ಬೇಡಿಕೆ; ಪೀಣ್ಯ ಠಾಣೆಯ ಹೆಡ್​ಕಾನ್ಸ್​ಟೇಬಲ್​ ಲೋಕಾಯುಕ್ತ ಬಲೆಗೆ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 1,773 ನಿರ್ವಾಹಕರ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು. ನಾಲ್ಕು ನಿಗಮಗಳ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಆದಾಯ ಗಳಿಕೆಗಾಗಿ KSRTC ಖಾಲಿ ನಿವೇಶನದಲ್ಲಿ 10 ಔಟ್​ಲೆಟ್​ ಹಾಗೂ 36 ಪೆಟ್ರೋಲ್​ ಬಂಕ್​ಗಳನ್ನು ತೆರಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಲಾಜಿಸ್ಟಿಕ್​ ಯೋಜನೆಗೆ ಸಂಬಂಧಿಸಿದಂತೆ 6ಟನ್​ ಸಾಮರ್ಥ್ಯದ 20 ಲಾರಿಗಳನ್ನು ಖರೀದಿಸಲಾಗುವುದು. ಎಸಿ 4, ನಾನ್​ ಎಸಿ 44 ಸ್ಲೀಪರ್​ ಬಸ್​ ಖರೀದಿಗೆ ಕ್ರಮಕೈಗೊಳ್ಳಲಾಗುವುದು. NWKRTCಯಲ್ಲಿ ಎಸಿ 4, ನಾನ್​ ಎಸಿ 20 ಸ್ಲೀಪರ್​ ಬಸ್​ ಹಾಗೂ KKRTCಯಲ್ಲಿ ಹವಾನಿಯಂತ್ರಣ ರಹಿತ 6 ಬಸ್​ಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
