ಬೆಂಗಳೂರು:ಇಂದು ಮಧ್ಯಾಹ್ನ 1 ಗಂಟೆಯಿಂದ ರಾಜ್ಯಾದ್ಯಂತ ಮಹಿಳೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಶಕ್ತಿ ಯೋಜನೆ ಜಾರಿ ವಿಚಾರವಾಗಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು “ಮುಂದಿನ 10 ವರ್ಷವೂ ಕಾಂಗ್ರೆಸ್ ಸರ್ಕಾರ ಇರುತ್ತದೆ. ಇರುವವರೆಗೂ ಯೋಜನೆಗಳು ಜಾರಿಯಲ್ಲಿ ಇರಲಿವೆ” ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಅವರು, “ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯಾದ್ಯಂತ ಮಧ್ಯಾಹ್ನ ಒಂದು ಗಂಟೆಗೆ ಯೋಜನೆಯ ಲಾಭಗಳು ಎಲ್ಲಾ ಮಹಿಳೆಯರಿಗೂ ಲಭ್ಯವಾಗಲಿದೆ. ಯಾವುದೇ ತೊಂದರೆ ಇಲ್ಲದಂತೆ ಯೋಜನೆ ಜಾರಿಗೆ ತರ್ತೀವಿ.
ಮೂರು ತಿಂಗಳ ನಂತರ ಸೇವಾಸಿಂಧುನಲ್ಲಿ ಪಾಸ್ ಸಿಗುವಂತೆ ಮಾಡುತ್ತೇವೆ. ಮೂರು ತಿಂಗಳೊಳಗೆ ಆಗದಿದ್ದಲ್ಲಿ ಬೇರೆ ವ್ಯವಸ್ತೆ ಮಾಡುತ್ತೇವೆ. ಎಲ್ಲರಿಗೂ ಉಚಿತವಾಗಿ ಸ್ಮಾರ್ಟ್ ಕಾರ್ಡ್ ಕೊಡ್ತಿವಿ. ಇದರ ಬಗ್ಗೆ ಜನರಿಗೆ ಯಾವುದೇ ಆತಂಕ ಬೇಡ” ಎಂದಿದ್ದಾರೆ.
ಇದನ್ನೂ ಓದಿ:ಇಂದು ಮಧ್ಯಾಹ್ನದಿಂದ ಎಲ್ಲಾ ಮಹಿಳೆಯರಿಗೂ ಬಸ್ ಫ್ರೀ! ಆದರೆ ಪಾಲಿಸಬೇಕಾದ ನಿಯಮಗಳು ಹೀಗಿವೆ…
ಇದೇ ಸಂದರ್ಭದಲ್ಲಿ ಮಲೆನಾಡು ಶಿವಮೊಗ್ಗ ಭಾಗದಲ್ಲಿ ಸರ್ಕಾರಿ ಬಸ್ ಇಲ್ಲ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, “ಬಿಜೆಪಿಯವರದ್ದು ಬುರುಡೆ ಪಕ್ಷ. ಅವರು ಅಧಿಕಾರದಲ್ಲಿದ್ದಾಗ ಬಸ್ ಬಿಡಬಹುದಿತ್ತಲ್ಲ. ನಾನು ಹಿಂದೆ ಕೊಟ್ಟ ಸರ್ಕಾರಿ ಬಸ್ ಗಳನ್ನ ಕ್ಯಾನ್ಸಲ್ ಮಾಡಿದ್ದಾರೆ. ಈಗ ನಮಗೆ ಪಾಠ ಮಾಡೋಕೆ ಬರ್ತಾರೆ.
ಇದನ್ನೂ ಓದಿ:ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಕ್ಷಣಗಣನೆ: ಹೇಗಿದೆ ತಯಾರಿ? ಇಲ್ಲಿದೆ ಸಂಪೂರ್ಣ ಮಾಹಿತಿ…
ನಾವು ಈ ಯೋಜನೆಯನ್ನು ಕೊಟ್ಟಿದ್ದೇವೆ. 10 ವರ್ಷದವರೆಗೆ ನಮ್ಮದೇ ಸರ್ಕಾರ ಇರುತ್ತೆ. 10 ವರ್ಷವೂ ಈ ಗ್ಯಾರೆಂಟಿಗಳು ಅಸ್ತಿತ್ವದಲ್ಲಿ ಇರ್ತವೆ. ಯಾವುದೇ ಆರ್ಥಿಕ ಸಂಕಷ್ಟ ಇಲ್ಲ. ಎಷ್ಟು ಜನ ಓಡಾಡ್ತಾರೋ ಅಷ್ಟು ಹಣ ಸರ್ಕಾರದಿಂದ ಬರುತ್ತೆ. ಯಾವುದೇ ಆತಂಕ ಸಿಬ್ಬಂದಿ ವಲಯದಲ್ಲಿಲ್ಲ. ನಾವು ಎಲ್ಲವನ್ನೂ ನಿಭಾಯಿಸುತ್ತೇವೆ” ಎಂದು ಶಕ್ತಿ ಯೋಜನೆ ಜಾರಿಗೂ ಮುನ್ನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + 7 =
Remember me
