ರಾಮನಗರ:ಚನ್ನಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನ ಉದ್ಘಾಟನೆಗೆ ಸಿ.ಪಿ.ಯೋಗೇಶ್ವರ್ ಬೆಂಬಲಿಗರ ಅಡ್ಡಿಪಡಿಸಿದ ಆರೋಪ ಕೇಳಿಬಂದಿದೆ.
ಹಾಲಿ ಶಾಸಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ನಡುವೆ ಅಂಬೇಡ್ಕರ್​ ಭವನ ವಿಚಾರ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಕಳೆದ 17 ವರ್ಷಗಳಿಂದ ಅಂಬೇಡ್ಕರ್​ ಭವನ ಉದ್ಘಾಟನೆಯಾಗಿರಲಿಲ್ಲ. ಎಚ್​.ಡಿ.ಕುಮಾರಸ್ವಾಮಿ ಕ್ಷೇತ್ರದ ಶಾಸಕರಾದ ಬಳಿಕ ಭವನದ ಕಾಮಗಾರಿ ಪೂರ್ಣಗೊಂಡಿದ್ದು, ನಾಳೆ ಉದ್ಘಾಟನೆಯಾಗಲಿದೆ.
ಇದನ್ನೂ ಓದಿರಿ:VIDEO: ವಿಐಪಿ ಕಾರ್​ ಬಿಟ್ಟು ಆಟೋದಲ್ಲಿ ಪಾಕ್​ ಪ್ರಧಾನಿ​? ಹೀಗೇಕಾಯ್ತೆಂದು ಪ್ರಶ್ನಿಸ್ತಿದ್ದಾರೆ ಜನ!
ನಾಳೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಂಬೇಡ್ಕರ್​ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಎಚ್​ಡಿಕೆ ವಹಿಸಲಿದ್ದಾರೆ. ಆದರೆ ಭವನ ಉದ್ಘಾಟನೆ ಮಾಡಬಾರದು ಎಂದು ಸಿ.ಪಿ.ಯೋಗೇಶ್ವರ್ ಬೆಂಬಲಿಗರ ಪಟ್ಟು ಹಿಡಿದಿದ್ದಾರೆ.
ಭವನ ಕಾಮಗಾರಿ ಪೂರ್ಣವಾಗಿಲ್ಲ ಎಂದು ಸಿಪಿವೈ ಬೆಂಬಲಿಗರು ಆರೋಪಿಸಿದ್ದಾರೆ. ಆದರೆ, ಭವನ ಕಾಮಗಾರಿ ಪೂರ್ಣವಾಗಿದೆ ಎಂದು ಜೆಡಿಎಸ್ ಮುಖಂಡರು ವಾದಿಸುತ್ತಿದ್ದಾರೆ. ಭವನ ಉದ್ಘಾಟನೆ ಮಾಡಿದರೆ ಹೋರಾಟದ ಎಚ್ಚರಿಕೆಯನ್ನು ಸಿಪಿವೈ ಬೆಂಬಲಿಗರು ಕೊಟ್ಟಿದ್ದಾರೆ. ಏನೇ ಆಗಲಿ ನಾಳೆ ಭವನ ಉದ್ಘಾಟನೆ ಆಗುತ್ತದೆ ಎಂದು ಎಚ್​ಡಿಕೆ ಬೆಂಬಲಿಗರು ಹೇಳಿದ್ದಾರೆ.(ದಿಗ್ವಿಜಯ ನ್ಯೂಸ್​)
ಸರ್ಪ್ರೈಸ್​ ಕೊಡಲು ಮಲಗಿದ್ದ ಗಂಡನನ್ನು ಎಚ್ಚರಿಸಿದ ಪತ್ನಿಗೆ ಕಾದಿತ್ತು ಭಯಾನಕ ಶಿಕ್ಷೆ..!

https://www.vijayavani.net/s-nyayadevate-veeryanu-korateyinda/
ಪೂಜಾಗೆ ಕುದುರಿದ ಲಕ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + four =
Remember me
