ರಾಮನಗರ:ಅಮಾಯಕರ ಎಟಿಎಂನಿಲ್ಲಿ ಹಣ ದೋಚುತ್ತಿದ್ದ ಆರೋಪಿಯೊಬ್ಬನನ್ನು ಕನಕಪುರ ತಾಲೂಕಿನ ಸಾತನೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮಧು(32) ಬಂಧಿತ ಆರೋಪಿ. ಹಲಗೂರು ಬಳಿಯ ಚಿಕ್ಕಎಲಚೆಗೆರೆ ಗ್ರಾಮದ ನಿವಾಸಿಯಾದ ಈತ ಕೂಲಿ ಕೆಲಸ ಮಾಡುವ ಹಾಗೂ ಅಶಿಕ್ಷಿತ ಜನರನ್ನು ಗುರಿಯಾಗಿಸಿಕೊಳ್ಳುತ್ತಿದ್ದ. ಅದರಲ್ಲೂ ಎಟಿಎಂನಿಂದ ಹಣ ಡ್ರಾ ಮಾಡಲು ಬರದ ಮುಗ್ಧ ಜನರೇ ಆರೋಪಿಯ ಪ್ರಮುಖ ಟಾರ್ಗೆಟ್​.
ಇದನ್ನೂ ಓದಿ:ಪತಿಯ ಮರ್ಮಾಂಗವನ್ನೇ ಕಡಿದ ಪತ್ನಿ: ಇದಕ್ಕೆ ಕಾರಣ ಇಲಿಯ ಕಿತಾಪತಿ…!
ಹಣ ತೆಗೆದುಕೊಡುವ ನೆಪದಲ್ಲಿ ಎಟಿಎಂ ಪಡೆದು ಪಾಸ್​ವರ್ಡ್ ಅನ್ನು ಗೊತ್ತಿಲ್ಲದಂತೆ ರೆಕಾರ್ಡ್​ ಮಾಡಿಕೊಳ್ಳುತ್ತಿದ್ದ. ಹಣ ಪಡೆದ ಬಳಿಕ ಅದೇ ರೀತಿಯ ಮತ್ತೊಂದು ಎಟಿಎಂ ಕಾರ್ಡ್​ ಅನ್ನು ಮುಗ್ಧ ಜನರಿಗೆ ನೀಡಿ ಯಾಮಾರಿಸುತ್ತಿದ್ದ. ಹಣ ಪಡೆದ ಖುಷಿಯಲ್ಲಿ ಜನರು ಹೋಗುತ್ತಿದ್ದಂತೆ ಎಟಿಎಂನಲ್ಲಿ ಹಣವನ್ನು ಎಗರಿಸುತ್ತಿದ್ದ. ಈತನಿಂದ ಹಣ ಕಳೆದುಕೊಂಡ ಬಹುತೇಕರು ಗ್ರಾಮೀಣ ಭಾಗದ ರೈತರು ಹಾಗೂ ಹಾಲು ಉತ್ಪಾದಕರೇ ಆಗಿದ್ದಾರೆ.
ಈ ಬಗ್ಗೆ ಪ್ರತ್ಯೇಕ ಮೂರು ಪ್ರಕರಣಗಳು ಸಾತನೂರು ಠಾಣೆಯಲ್ಲಿ ದಾಖಲಾಗಿದ್ದವು. ತನಿಖೆ ಕೈಗೊಂಡ ಪಿಎಸ್ಐ ಮುರಳಿ ತಂಡ ಆರೋಪಿ ಬಂಧಿಸಿದೆ. ಆತನಿಂದ 6 ಎಟಿಎಂ ಕಾರ್ಡ್, 28 ಸಾವಿರ ರೂ. ಹಣ, ಒಂದು ಬೈಕ್ ಅನ್ನು ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:30-35 ಸಾವಿರ ರೂ. ಸಂಬಳ, ರಾಗಿಣಿಗಾಗಿ ಖರ್ಚು ಮಾಡ್ತಿದ್ದು 1 ಲಕ್ಷ: ಸಿಸಿಬಿ ಮುಂದೆ ರವಿಶಂಕರ್​ ಹೇಳಿದ್ದೇನು?
ಕೊಹ್ಲಿ-ಅನುಷ್ಕಾ ದಂಪತಿಯ ಮಗುವಿನ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 2 =
Remember me
