ರಾಮನಗರ:ಇತ್ತೀಚೆಗೆ ನಾಗರೀಕ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ. ಊರಿಗೊಂದು ವೃದ್ದಾಶ್ರಮದ ಬದಲಿಗೆ ಗಲ್ಲಿಗೊಂದು ತಲೆಯೆತ್ತಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಮನಗರದ ಯುವತಿ, ಇದೀಗ ಮಹತ್ವದ ಸಂದೇಶವನ್ನು ಸಾರಲು ದೊಡ್ಡ ಪ್ರಯಾಣವನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ:ನೂತನ ಶಿಕ್ಷಣ ನೀತಿ ಮುಂದುವರಿಸುವಂತೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ
ಹೆತ್ತವರನ್ನು ಹೊರಗಟ್ಟುವ ಮಕ್ಕಳ ಮನಸ್ಥಿತಿಯನ್ನು ಬದಲಾಯಿಸಲು ಹಾಗೂ ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕ್ಷಿಣಿಸಿ, ಎಲ್ಲಾ ವೃದ್ಧ ಪೋಷಕರೂ ತಮ್ಮ ಮಕ್ಕಳೊಂದಿಗೆ ಜೀವಿಸುವಂತಾಗಲಿ ಎಂಬ ಮಹತ್ವದ ಉದ್ದೇಶದೊಂದಿಗೆ ರಾಮನಗರ ತಾಲೂಕಿನ, ಕೃಷ್ಣಾಪುರದೊಡ್ಡಿ ಗ್ರಾಮದ ಯುವತಿ ಚಿತ್ರಾ ರಾವ್ ಎಂಬ ಯುವತಿ ಒಂಟಿಯಾಗಿ ಮೋಟಾರ್ ಬೈಕ್ ಸವಾರಿಯನ್ನು ಕೈಗೊಂಡಿದ್ದಾರೆ.
ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಚಿತ್ರಾ ರಾವ್, ಹಿರಿಯ ನಾಗರಿಕರ ಮಹತ್ವದ ಜಾಗೃತಿ ಮೂಡಿಸಲು ಏಕಾಂಗಿಯಾಗಿ ಮೋಟಾರ್ ಬೈಕ್​ ರೈಡ್​​ ಕೈಗೊಂಡಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದವರೆಗೆ ಸುಮಾರು 7,180 ಕಿ.ಮೀ ಬೈಕ್‌ ಪ್ರಯಾಣ ಮಾಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ:ಕಾವೇರಿ ಜಲವಿವಾದ; ತಮಿಳುನಾಡು ಮನವಿ ನಿರಾಕರಿಸಿದ ಸುಪ್ರೀಂ ಕೋರ್ಟ್​
20 ದಿನಗಳ ಕಾಲ ಬೈಕ್‌ನಲ್ಲಿ ಪ್ರಯಾಣಿಸಲಿರುವ ಚಿತ್ರಾ ರಾವ್, ಎಂಟು ರಾಜ್ಯಗಳಲ್ಲಿನ ಕೆಲ ಶಾಲಾ ಕಾಲೇಜುಗಳಲ್ಲಿ ಹಿರಿಯ ನಾಗರಿಕರ ಮಹತ್ವದ ಜಾಗೃತಿ ಭಾಷಣ ಮಾಡಲಿದ್ದಾರೆ. ಜಾಗೃತಿ ಅಭಿಯಾನದ ಬೈಕ್ ರೈಡ್​​ಗೆ ಹೊರಟಿರುವ ಯುವತಿಗೆ ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ಸ್ಥಳೀಯರೆಲ್ಲರೂ ಶುಭಹಾರೈಸಿದ್ದಾರೆ.
ಒಟಿಟಿಗೆ ಲಗ್ಗೆಯಿಟ್ಟ ಪವನ್​ ಕಲ್ಯಾಣ್​ ನಟನೆಯ ‘ಬ್ರೋ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + seven =
Remember me
