
ರಾಮನಗರ:ನರೇಗಾದಡಿ ನಿರ್ಮಾಣವಾಗಿದ್ದ ಕೊಟ್ಟಿಗೆ ಬಿಲ್ ಕೊಡಲಿಲ್ಲ ಎಂದು ಬೇಸತ್ತ ರಯತರೊಬ್ಬರು ಗ್ರಾಮ ಪಂಚಾಯಿತಿ ಕಚೇರಿಯನ್ನೇ ಕೊಟ್ಟಿಗೆ ಮಾಡಿಕೊಂಡು ಕುರಿಗಳನ್ನು ಕಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಮೈಲನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ರವಿ ಕಳೆದ ಒಂದು ವರ್ಷದ ಹಿಂದೆ ನರೇಗಾ ಅಡಿಯಲ್ಲಿ ಕೊಟ್ಟಿಗೆ ನಿರ್ಮಾಣ ಮಾಡಿದ್ದರು. ಇದರ ಎಂಸಿ ಬಿಲ್ ಮೊತ್ತ ಸುಮಾರು 40 ಸಾವಿರ ರೂ.ಗಳು ಇನ್ನೂ ಪಾವತಿ ಆಗಿರಲಿಲ್ಲ. ಇದಕ್ಕಾಗಿ ಒಂದು ವರ್ಷದಿಂದಲೂ ನಿರಂತರವಾಗಿ ಗ್ರಾಪಂ ಕಚೇರಿಗೆ ಅಲೆದಿದ್ದಾರೆ. ಆದರೆ ಇದಕ್ಕೆ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಉತ್ತರ ಬಾರದ ಕಾರಣ ಗ್ರಾ.ಪಂ ಕಚೇರಿಯಲ್ಲಿ ಕುರಿ, ಮೇಕೆಗಳನ್ನ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಈ ವಿಷಯ ತಿಳಿಯುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ ತಾಪಂ ಇಓ ಶಿವಕುಮಾರ್, ಸ್ಥಳಕ್ಕೆ ಬಂದು ಸಮಸ್ಯೆ ಪರಿಹಾರ ಮಾಡಿಕೊಡುವ ಭರವಸೆ ಪೊಲೀಸರ ಮೂಲಕ ತಿಳಿಸಿದ ಹಿನ್ನೆಲೆಯಲ್ಲಿ, ಸ್ಪಂಧಿಸಿದ ರೈತ ರವಿ, ನಂತರ ಮೇಕೆ ಕುರಿಗಳನ್ನು ಗ್ರಾಪಂ ಕಚೇರಿಯಿಂದ ವಾಪಾಸ್ ಕರೆದುಕೊಂಡು ಹೋದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
