ಗಂಗಾಧರ್ ಬೈರಾಪಟ್ಟಣ ರಾಮನಗರರಾಜ್ಯದಿಂದ ಆಯ್ಕೆಯಾದ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಲೋಕಸಭೆ ಚುನಾವಣೆ ಹತ್ತಿರ ಇರುವಾಗಲೇ ವೈರಾಗ್ಯದ ಮಾತುಗಳನ್ನು ಆಡುತ್ತಿದ್ದಾರೆ.
ಸಹೋದರ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ಕಸನು ಕಟ್ಟಿಕೊಂಡು, ಹಗಲಿರುಳು ದುಡಿದ ಸುರೇಶ್, ಈಗ ಹೋದ ಕಡೆಯಲ್ಲೆಲ್ಲ ರಾಜಕಾರಣ ಮಾಡಬೇಕಾ, ಬೇಡವಾ ಎನ್ನುವ ಪ್ರಶ್ನೆ ಕಾಡುತ್ತಿದೆ ಎನ್ನುವ ಮಾತುಗಳನ್ನು ಕಾರ್ಯಕರ್ತರ ಮುಂದಿಡುವ ಮೂಲಕ ರಾಜಕಾರಣದ ವೈರಾಗ್ಯದ ಮುನ್ಸೂಚನೆ ನೀಡುತ್ತಿದ್ದಾರೆ.
ಇತ್ತೀಚೆಗೆ ಚನ್ನಪಟ್ಟಣ, ಕುಣಿಗಲ್‌ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಡಿ.ಕೆ.ಸುರೇಶ್, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಂಬಂಧ ತೀರ್ಮಾನ ಮಾಡಿಲ್ಲ, ಗೊಂದಲದಲ್ಲಿಯೇ ಇದ್ದೇನೆ. ರಾಜಕಾರಣ ಬೇಕೋ ಬೇಡವೋ ಎನ್ನುವ ಹಂತಕ್ಕೆ ಬಂದಿದ್ದೇನೆ ಎಂದು ಬೇಸರದ ನುಡಿಗಳನ್ನು ಆಡಿದ್ದರು. ಅಷ್ಟೇ ಅಲ್ಲದೆ, ಚುನಾವಣೆಗಳು ದುಬಾರಿ ಆಗುತ್ತಿರುವ ಬಗ್ಗೆಯೂ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದ ಸುರೇಶ್, ನಮ್ಮನ್ನು ಭ್ರಷ್ಟರನ್ನಾಗಿಸಬೇಡಿ, ಒಂದು ಹಂತದಲ್ಲಿ ಕೈ ಭ್ರಷ್ಟವಾದರೆ ತಡೆದುಕೊಳ್ಳಬಹುದು, ಆದರೆ ಮನಸ್ಸೂ ಭ್ರಷ್ಟವಾದರೆ ತಡೆದುಕೊಳ್ಳುವುದು ಕಷ್ಟ ಎಂದು ಹೇಳುವ ಮೂಲಕ ಪ್ರಸ್ತುತ ರಾಜಕೀಯ ವ್ಯವಸ್ಥೆ ಬಗ್ಗೆ ತಿಳಿಸಿದ್ದರು.
ಕ್ಷೇತ್ರ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ
2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆಲುವು ಸಾಧಿಸಿದ ಏಕೈಕ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ನಿರಾಶಾದಾಯಕ ಪ್ರದರ್ಶನ ನೀಡಿದ್ದರೂ ಕ್ಷೇತ್ರದ ಜನತೆ ಡಿ.ಕೆ.ಸುರೇಶ್ ಕೈ ಹಿಡಿದಿದ್ದರು. ಅಂದು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಡಿ.ಕೆ.ಸುರೇಶ್ ಬಿಜೆಪಿ ಅಭ್ಯರ್ಥಿ ಎದುರು ನಿರೀಕ್ಷಿತ ಅಂತರದ ಗೆಲುವು ಸಾಧಿಸಲಿಲ್ಲವಾದರೂ, ಅವರಿಗೆ ಸಿಕ್ಕ ಗೆಲುವು ಕಾಂಗ್ರೆಸ್ ಪಾಲಿಗೆ ಮತ್ತು ಡಿ.ಕೆ.ಶಿವಕುಮಾರ್ ಅವರ ಪಾಲಿಗೆ ಅಮೂಲ್ಯದ್ದಾಗಿತ್ತು.
ಈ ಬಾರಿ ಮತ್ತೆ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಡಿ.ಕೆ.ಶಿವಕುಮಾರ್ ಅವರಿಗೆ ಇದ್ದು, ಇದರ ನಡುವೆ ಡಿ.ಕೆ.ಸುರೇಶ್ ವೈರಾಗ್ಯದ ಮಾತು ಅಚ್ಚರಿಗೆ ಕಾರಣವಾಗಿದೆ.
ಸಿದ್ಧಗೊಳ್ಳುತ್ತಿದೆ ವ್ಯೂಹರಾಮನಗರ ಜಿಲ್ಲೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಸಂಸದ ಡಿ.ಕೆ.ಸುರೇಶ್ ಅವರು ನಡೆಸಿದ ತಂತ್ರಗಾರಿಕೆಯೇ ಕಾರಣ ಎಂದು ಸಿಡಿದೆದ್ದಿರುವ ಜೆಡಿಎಸ್ ಕಾರ್ಯಕರ್ತರು, ಈ ಬಾರಿ ಅವರಿಗೆ ಪಾಠ ಕಲಿಸಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಈಗಾಗಲೇ ಕೇಂದ್ರ ಮಟ್ಟದಲ್ಲಿಯೇ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾತುಕತೆ ನಡೆದಿದೆ ಎನ್ನುವ ಗುಸುಗುಸು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಸುರೇಶ್ ಅವರನ್ನು ಸೋಲಿಸಲು ಬೇಕಾದ ಸಿದ್ಧತೆಯನ್ನು ಈಗಾಗಲೇ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಪಕ್ಷದ ನಾಯಕರೂ ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಆದ ಎಡವಟ್ಟುಗಳನ್ನು ಸರಿಪಡಿಸಿಕೊಳ್ಳುವ ಕೆಲಸದಲ್ಲಿ ಮಗ್ನರಾಗಿದ್ದಾರೆ.
ಸಿಪಿವೈ ಸ್ಪರ್ಧೆ?ಎಚ್.ಡಿ.ಕುಮಾರಸ್ವಾಮಿ ಎದುರು ಸೋಲು ಕಂಡ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ಅವರನ್ನು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿಸಲು ತಯಾರಿ ನಡೆದಿದೆ ಎಂದು ಹೇಳಲಾಗಿದೆ. ಡಿಕೆಶಿ ಸಹೋದರರಿಗೆ ಪ್ರತಿರೋಧ ಒಡ್ಡಬಲ್ಲ ಶಕ್ತಿ ಇರುವ ಸಿ.ಪಿ.ಯೋಗೇಶ್ವರ್ ಅವರನ್ನೇ ಕಣಕ್ಕೆ ಇಳಿಸಬೇಕು ಎನ್ನುವ ಒತ್ತಡವೂ ಕೇಳಿ ಬಂದಿದೆ. ಒಂದು ವೇಳೆ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟರೆ ಯೋಗೇಶ್ವರ್ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಇದು ನಿಜವೇ ಆದರೆ ಡಿ.ಕೆ.ಸುರೇಶ್ ಗೆಲುವಿಗಾಗಿ ಹೆಚ್ಚಿನ ಬೆವರನ್ನೇ ಹರಿಸಬೇಕಿದೆ.ಈ ಎಲ್ಲ ಬೆಳವಣಿಗೆಗಳೂ ಡಿ.ಕೆ.ಸುರೇಶ್ ರಾಜಕಾರಣದ ಬಗ್ಗೆ ಬೇಸರದ ನುಡಿಗಳನ್ನಾಡಲು ಕಾರಣ ಎಂದೂ ಹೇಳಲಾಗುತ್ತಿದೆ.
ರಾಜಕಾರಣ ಬೇಕೋ ಬೇಡವೋ ಎಂದು ಅನ್ನಿಸಿಬಿಟ್ಟಿದೆ. ಸ್ಪರ್ಧೆ ಮಾಡುವ ಸಂಬಂಧ ಇನ್ನೂ ತೀರ್ಮಾನ ಮಾಡಿಲ್ಲ, ಗೊಂದಲದಲ್ಲಿ ಇದ್ದೇನೆ. ನೀವು ನಮ್ಮನ್ನು ಭ್ರಷ್ಟರನ್ನಾಗಿಸಬೇಡಿ. ಕೈಯನ್ನು ಭ್ರಷ್ಟಗೊಳಿಸಿದರೆ ತಡೆದುಕೊಳ್ಳಬಹುದು, ಮನಸ್ಸನ್ನು ಭ್ರಷ್ಟಗೊಳಿಸಿದರೆ ತಡೆದುಕೊಳ್ಳುವುದು ಕಷ್ಟ.ಡಿ.ಕೆ.ಸುರೇಶ್, ಸಂಸದ (ಕುಣಿಗಲ್ ಸಭೆಯಲ್ಲಿ ಹೇಳಿದ್ದು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 8 =
Remember me
