ಶಿವಮೊಗ್ಗ:ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, ಆ ಜಿಲ್ಲೆಗಳಲ್ಲಿ ಮುಸ್ಲಿಮರೇ ಹೆಚ್ಚಾಗಿರುವ ಕಾರಣ ಅವರ ಒಲೈಕೆಗೆ ಸರ್ಕಾರ ಮುಂದಾಗಿದೆ. ರಾಮನ ಹೆಸರಿದ್ದ ರಾಮನಗರ ಜಿಲ್ಲೆಯನ್ನೇ ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಬದಲಿಸಿದ್ದು ಇದು ಕಾಂಗ್ರೆಸ್ ಸರ್ಕಾರ ರಾಮನಿಗೆ ಮಾಡಿದ ಅವಮಾನ. ಹಾಗಾಗಿ ತಕ್ಷಣವೇ ರಾಮನಗರ ಎಂದೇ ಹೆಸರು ಬದಲಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಕೋಚಿಂಗ್ ಸೆಂಟರ್‌ನಲ್ಲೇ ಐಎಎಸ್ ಆಕಾಂಕ್ಷಿಗಳ ದುರಂತ ಅಂತ್ಯ, ಬುಲ್ಡೋಜರ್ ಕಾರ್ಯಾಚರಣೆ ಶುರು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಇಲಾಖೆಯ 312 ಕೋಟಿ ರೂ. ಹಿಂಪಡೆದು 1,093 ಕಾಮಗಾರಿಗಳಿಗೆ ಕತ್ತರಿ ಹಾಕಿದೆ. ಸಿಎಂ ಸಿದ್ದರಾಮಯ್ಯ ಆದೇಶ ಮೇರೆಗೆ ಹಿಂಪಡೆದಿರುವುದು ಕಂಡುಬಂದಿದೆ. ಆ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೋ ಅಥವಾ ಇನ್ಯಾವುದಕ್ಕೆ ಬಳಸಿದ್ದಾರೋ ಗೊತ್ತಿಲ್ಲ. ಆದರೆ ಸಾವಿರಾರು ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನುದಾನವನ್ನು ಹಿಂಪಡೆದಿರುವುದು ದುರಾದೃಷ್ಟಕರ ವಾಗ್ದಾಳಿ ನಡೆಸಿದರು.
ಅಹಿಂದ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೇರವಾಗಿ ಅನ್ಯಾಯ ಮಾಡಿದ್ದಾರೆ. ಹಾಗಾಗಿ ತಕ್ಷಣವೇ ಸಿಎಂ ಈ ಬಗ್ಗೆ ಗಮನ ಹರಿಸಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಸರ್ಕಾರವೇ ಜೀವಂತವಾಗಿಲ್ಲ. ಅತಿವೃಷ್ಟಿಯಿಂದ ರೈತರು ತೊಂದರೆಯಲ್ಲಿದ್ದು ಅವರ ಸಂಕಷ್ಟಗಳನ್ನು ಆಲಿಸಿ ಪರಿಹಾರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಗರಣ ಸಿಬಿಐ ತನಿಖೆಗೆ ಕೊಡಲಿ:ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿದೇಶಕ್ಕೆ ಹಣ ವರ್ಗಾವಣೆ ಮಾಡಿದ್ದಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪ ಮಾಡುತ್ತಿದ್ದಾರೆ. ಡಿಕೆಶಿ ಅವರು ಬರೀ ಬೆದರಿಕೆ ತಂತ್ರ ಅನುಸರಿಸುವುದು ಬೇಡ ಎಂದ ಈಶ್ವರಪ್ಪ, ಬಿಜೆಪಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಎಲ್ಲ ಹಗರಣಗಳನ್ನೂ ಸಿಬಿಐ ತನಿಖೆಗೆ ವಹಿಸಲಿ. ಆಗ ಯಾರು ಎಷ್ಟು ಹಗರಣ ಮಾಡಿದ್ದಾರೆ ಎಂಬುದು ಬಹಿರಂಗಗೊಳ್ಳಲಿದೆ ಎಂದರು.
ಮುಡಾ, ವಾಲ್ಮೀಕಿ ಹಗರಣದಲ್ಲಿ ಸಿದ್ದು ಮುಖವಾಡ ಕಳಚಿದೆ:ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅವರು 21 ಪಟ್ಟಿಗಳ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅದೂ ಸೇರಿ ಕಾಂಗ್ರೆಸ್‌ನ ಹಗರಣಗಳನ್ನೂ ಉನ್ನತ ತನಿಖೆಗೆ ಕೊಟ್ಟರೆ ಮುಖವಾಡಗಳು ಕಳಚಲಿವೆ. ಈಗಾಗಲೇ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮೂಡಾ ಹಗರಣದಲ್ಲಿ ಸಿಎಂ ಮತ್ತು ಅವರ ಸರ್ಕಾರದ ಮುಖವಾಡ ಕಳಚಿದೆ ಎಂದು ಲೇವಡಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಟೀಕೆ ಮಾಡುತ್ತಿರುವ ಕಾಂಗ್ರೆಸ್ಸಿಗರ ಭಂಡರು ಎಂದು ಕಿಡಿಕಾರಿದರು.
28 ಸಾವಿರ ಮಕ್ಕಳಿಗಿಲ್ಲ ಸ್ಕಾಲರ್‌ಶಿಪ್:ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ 28 ಸಾವಿರಕ್ಕೂ ಅಧಿಕ ಮಕ್ಕಳಿಗೆ ಕಳೆದ ಎರಡು ವರ್ಷಗಳಿಂದ ಸ್ಕಾಲರ್ ಶಿಪ್ ನೀಡಿಲ್ಲ. ಶಿವಮೊಗ್ಗದಲ್ಲೇ 10,603 ಮಕ್ಕಳು ಸ್ಕಾಲರ್‌ಶಿಪ್‌ಗಾಗಿ ಅಲೆದಾಟ ನಡೆಸಿದ್ದಾರೆ. ಮೃತರು, ವಿವಾಹ, ಬಾಣಾಂತಿಯರ ಅನುದಾನಕ್ಕೂ ಕತ್ತರಿ ಹಾಕಿದ್ದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen − eleven =
Remember me
