ರಾಮನಗರ:ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಜಾಲಮಂಗಲದ ಲಕ್ಷ್ಮೀ ನಾರಾಯಣಸ್ವಾಮಿ ದೇವರಿಗೆ ತಪ್ಪು ಕಾಣಿಕೆ ಸಲ್ಲಿಸಿದರು.ಶುಕ್ರವಾರ ಕುಟುಂಬ ಸಮೇತ ದೇಗುಲಕ್ಕೆ ಬಂದ ಎಚ್​ಡಿಕೆ, 101 ರೂಪಾಯಿಯನ್ನು ತಪ್ಪು ಕಾಣಿಕೆಯಾಗಿ ದೇವರಿಗೆ ಸಮರ್ಪಿಸಿದರು. ಬಳಿಕ ಲಕ್ಷ್ಮೀನಾರಾಯಣಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
5 ವರ್ಷ ಸಂಪೂರ್ಣವಾಗಿ ಅಧಿಕಾರ ನಡೆಸಲು ಸಾಧ್ಯವಾಗದಿರಲು ದೇವರ ಶಾಪವೇ ಕಾರಣ ಎಂದು ತಪ್ಪು ಕಾಣಿಕೆ ಸಲ್ಲಿಕೆ ಸಲ್ಲಿಸಲಾಗಿದೆ.ಇದನ್ನೂ ಓದಿರಿವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್
2004ರ ಚುನಾವಣೆ ವೇಳೆ ದೇವರ ಮುಂದೆ ತಮಗೆ ಯಾವುದೇ ಅಧಿಕಾರ ಬೇಡ ಎಂದಿದ್ದರು. ಆದರೆ, ಅನಿವಾರ್ಯವಾಗಿ ಬಂದೊದಗಿದ ಅವಕಾಶದಲ್ಲಿ ಸಿಎಂ ಆಗಿದ್ದರು. ದೇವರ ಮುಂದೆ ಹೇಳಿದಂತೆ ನಡೆಯದಿದ್ದಕ್ಕೆ ತಮಗೆ ಸಂಪೂರ್ಣ ಅಧಿಕಾರ ನಡೆಸಲು ಆಗಲಿಲ್ಲ. ಈ ಕಾರಣಕ್ಕೆ ದೇವರಿಗೆ ಎಚ್​ಡಿಕೆ ತಪ್ಪೊಪ್ಪಿಗೆ ಕಾಣಿಕೆ ನೀಡಿದ್ದಾರೆ.
ಕುಮಾರಸ್ವಾಮಿ ಜತೆಗೆ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್​ ಕುಮಾರಸ್ವಾಮಿ, ಸೊಸೆ ರೇವತಿ ಅವರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮಾಗಡಿ ಶಾಸಕ ಮಂಜುನಾಥ್​ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಆರ್​ಎಸ್ಎಸ್​ ಕಚೇರಿಗೆ ಮಂಡ್ಯ ಸಂಸದೆ ಸುಮಲತಾ ದಿಢೀರ್​ ಭೇಟಿ!

ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್

ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − eleven =
Remember me
