ರಾಮನಗರ:ರೇಷ್ಮೆ ನಗರಿ ರಾಮನಗರದಲ್ಲಿಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿಂದ ಪ್ರಭಾವಿ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ ನೇತೃತ್ವದಲ್ಲಿ ಬೃಹತ್​ ಪಥಸಂಚನ ನಡೆಯಲಿದೆ.
ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ರಾಜಕೀಯ ತಿರುವ ನೀಡಿದ ಕ್ಷೇತ್ರ ಹಾಗೂ ಜೆಡಿಎಸ್​ ಭದ್ರ ಕೋಟೆ ಎಂದೇ ಹೆಸರಾಗಿರುವ ರಾಮನಗರದಲ್ಲಿ ಇಂದು ಕೇಸರಿ ಬಾವುಟಗಳು ರಾರಾಜಿಸಲಿವೆ.
ನಗರದ ಎಂ.ಜಿ.ರಸ್ತೆ, ಬಾಲಗೇರಿ, ಮಾಗಡಿ ರಸ್ತೆ, ಜೂನಿಯರ್ ಕಾಲೇಜು ಸೇರಿದಂತೆ ನಗರದೆಲ್ಲೆಡೆ ಕೇಸರಿ ಬಾವುಟ ಹಾರಾಡಲಿದೆ. 7 ಸಾವಿರಕ್ಕೂ ಹೆಚ್ಚು ಗಣ ವೇಶಧಾರಿಗಳು ಪಥ ಸಂಚಲನದಲ್ಲಿ ಭಾಗಿಯಾಗಲಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಗೆ ಪಥ ಸಂಚಲನ ಆರಂಭವಾಗಲಿದೆ. ಪ್ರಮುಖ ರಸ್ತೆಗಳಾದ ಬಾಲಗೇರಿ, ಎಂ.ಜಿ ರಸ್ತೆ ಹಾಗೂ ಬಸ್ ನಿಲ್ದಾಣ ವೃತ್ತಗಳಲ್ಲಿ ಪಥ ಸಂಚಲನ ನಡೆಯಲಿದೆ. ಸಂಜೆ 5 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕರ್ತರನ್ನು ಉದ್ದೇಶಿಸಿ ಕಲ್ಲಡ್ಕ ಪ್ರಭಾಕರ್ ಮಾತನಾಡಲಿದ್ದಾರೆ. ಜೆಡಿಎಸ್ ಕೋಟೆಯಲ್ಲಿ ಆರ್.ಎಸ್.ಎಸ್ ಒಗ್ಗೂಡಿಸಲು ರಾಮನಗರದಲ್ಲಿ ಮೊದಲ ಕಾರ್ಯಕ್ರಮ ಆಯೋಜಿಸಲಾಗಿದೆ.(ದಿಗ್ವಿಜಯ ನ್ಯೂಸ್​ರಾಮನಗ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × one =
Remember me
