ಚನ್ನಪಟ್ಟಣ
ನವಿಲು ನಮ್ಮ ದೇಶದ ರಾಷ್ಟ್ರಪಕ್ಷಿ. ನವಿಲಿನ‌‌ ನರ್ತನಕ್ಕೆ ಮನಸೋಲದವರಿಲ್ಲ. ಆದರೆ, ತನ್ನ ಮೇಲೆ ಹಲ್ಲೆ ಮಾಡಿರುವ ನವಿಲೊಂದರ ಮೇಲೆ ಮಹಿಳೆಯೊರ್ವರು ಅರಣ್ಯ ಇಲಾಖೆಗೆ ದೂರು ನೀಡಿರುವ ಅಪರೂಪದ ಪ್ರಸಂಗವೊಂದು ತಾಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಅರಳಾಳುಸಂದ್ರ ಗ್ರಾಮದ ಲಿಂಗಮ್ಮ ದೂರು‌ ನೀಡಿರುವ ಮಹಿಳೆ. ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಜೂ ೨೮ ರಂದು ಈ ಮಹಿಳೆ ನವಿಲೊಂದರ ಮೇಲೆ ಲಿಖಿತ ದೂರು ಸಲ್ಲಿಸಿದ್ದಾರೆ. ನವಿಲಿನ ಮೇಲೆ ಕ್ರಮಜರುಗಿಸುವಂತೆ ಒತ್ತಾಯ ಮಾಡಿರುವ ಈ ದೂರಿಗೆ ಕೆಲ ಗ್ರಾಮಸ್ಥರು ಸಹ ಸಹಿ ಮಾಡಿದ್ದಾರೆ.
ದೂರಿನಲ್ಲಿ ಏನಿದೆ?
ಕಳೆದ ನಾಲ್ಕೈದು ದಿನಗಳಿಂದ ನವಿಲೊಂದು‌ ನಮ್ಮ ಮನೆ ಬಳಿ ವಾಸ ಮಾಡುತ್ತಿದ್ದು, ಜೂ.೨೬ ರಂದು ನಮ್ಮ ಮನೆಯ ಹಿಂದೆ ಕೆಲಸ ಮಾಡುತ್ತಿದ್ದಾಗ, ಆ ನವಿಲು ನನ್ನ ಮೇಲೆ ಏಕಾಏಕಿ ದಾಳಿ ಮಾಡಿ ಮಾರಣಾಂತಿಕ ಹಾಗೂ ಗಂಭೀರ ಗಾಯ ಮಾಡಿದೆ ಎಂದು ಲಿಂಗಮ್ಮ ಅರಣ್ಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯಾದಾಗ ಸಂಜೆಯಾದ ಕಾರಣ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮರುದಿನ ಬಿ.ವಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುತ್ತೇನೆ. ನನ್ನ‌ಮೇಲೆ ಮಾರಣಾಂತಿಕ ದಾಳಿ ಮಾಡಿರುವ ನವಿಲಿನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆಯನ್ನು ದೂರಿನಲ್ಲಿ ಕೋರಿದ್ದಾರೆ. ಅರಣ್ಯ ಇಲಾಖೆ ದೂರು ಸ್ವೀಕೃತ ಮಾಡಿದ್ದಾರೆ.
ಅರಳಾಳುಸಂದ್ರ ಭಾಗದಲ್ಲಿ ಇಷ್ಟುದಿನ ಕಾಡಾನೆ ಹಾವಳಿಯ ದೂರುಗಳನ್ನು ಕೇಳುತ್ತಿದ್ದ ಅರಣ್ಯ ಇಲಾಖೆಗೆ ಇದೀಗ, ಹೊಸದಾದ ದೂರು ಇದಾಗಿದೆ ಎನ್ನಬಹುದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 2 =
Remember me
