ರಾಮನಗರ:ಮನೆಯಲ್ಲಿ ಮಲಗಿದ್ದ 3 ವರ್ಷದ ಗಂಡು ಮಗುವನ್ನು ಚಿರತೆಯೊಂದು ಹೊತ್ತೊಯ್ದು ಕೊಂದು ತಿಂದು ಹಾಕಿರುವ ಘಟನೆ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಚಿರತೆ ದಾಳಿಗೆ ತುತ್ತಾದ ಮಗುವಿನ ಹೆಸರು ಹೇಮಂತ್. ತಂದೆ ಚಂದ್ರಪ್ಪ ಹಾಗೂ ತಾಯಿ ಮಂಗಳಗೌರಮ್ಮ ಅವರ ಪ್ರೀತಿಯ ಪುತ್ರನಾಗಿದ್ದ. ಮಂಗಳಗೌರಮ್ಮ ತಾಯಿ ಮನೆ ಕದರಯ್ಯನಪಾಳ್ಯವಾಗಿದ್ದು, ವಾರದ ಹಿಂದಷ್ಟೇ ಊರಿಗೆ ಆಗಮಿಸಿದ್ದರು.
ಇದನ್ನೂ ಓದಿ:ವಿಚಿತ್ರ ಕಾಯಿಲೆಯಿಂದ ಪ್ರತಿನಿತ್ಯ ನೋವುಂಡು ಬದುಕುತ್ತಿರೋ ವ್ಯಕ್ತಿಯ ಕಣ್ಣೀರ ಕತೆಯಿದು!
ಸೆಕೆಯು ಹೆಚ್ಚಾಗಿದ್ದರಿಂದ ಬಾಗಿಲನ್ನು ತೆರೆದು ಮಲಗಿದ್ದರು. ಈ ವೇಳೆ ಬಂದ ಚಿರತೆ ಮಗುವನ್ನು ಹೊತ್ತೊಯ್ದಿದೆ. ಕತ್ತಲೆಯಲ್ಲಿ ಹುಡುಕಾಡಿದಾಗ ಮನೆಯಿಂದ ಸುಮಾರು ಅರವತ್ತು ಮೀಟರ್ ದೂರದ ಪೊದೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ .
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ‌ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:VIDEO| ಭಾರತದಲ್ಲಿ ಎರಡು ತಲೆ ಹಾವು ಪತ್ತೆ: ಇದರ ವಿಶೇಷತೆ ಕೇಳಿದ್ರೆ ಶಾಕ್ ಆಗ್ತೀರಾ!
ಒಂದು ಹಾವು ಕಚ್ಚಿದ್ರೂ ಬಚಾವ್​, ಆದ್ರೆ ಮತ್ತೊಂದು ಬೆಡ್​ರೂಮ್​ಗೇ ನುಗ್ಗಿತ್ತು..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × four =
Remember me
