ರಾಮನಗರ:ಆತ ಸ್ನೇಹಿತನ ಪತ್ನಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಆಕೆಯ ಜತೆ ಕಳೆದಿದ್ದ ಸಮಯವನ್ನ ವಿಡಿಯೋ ಮಾಡಿಕೊಂಡು ಸದಾ ಬ್ಲಾಕ್​ಮೇಲ್ ಮಾಡುತ್ತಿದ್ದ. ಇಲ್ಲಿಯವರೆಗೆ ಸುಮಾರು 10 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದಾನೆ. ಆತನ ಕಾಟ ತಡೆಯಲಾಗದೇ ನೊಂದ ಮಹಿಳೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಚನ್ನಪಟ್ಟಣ ತಾಲೂಕಿನ ಮತ್ತಿಕೆರೆಶೆಟ್ಟಿಹಳ್ಳಿ ನಿವಾಸಿ ಸಂತೋಷ್​ ಕುಮಾರ್​ (37) ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಆದರೆ ಬೇರೆ ಹೆಣ್ಣು ಮಕ್ಕಳನ್ನು ಪುಸಲಾಯಿಸಿ ಅವರ ಬಳಿ ಹಣ ಕೀಳುವುದೇ ಕಾಯಕ ಮಾಡಿಕೊಂಡಿದ್ದಾನೆ. ಅದೇ ರೀತಿ ಸಂತೋಷ್ ತನ್ನ ಸ್ನೇಹಿತನ ಪತ್ನಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಈಗ ಆಕೆಗೆ ಲೈಂಗಿಕ ಕಿರುಕುಳ ಕೊಟ್ಟು ಅದನ್ನು ಚಿತ್ರೀಕರಣ ಮಾಡಿ ಮಹಿಳೆಗೆ ಆ ವಿಡಿಯೋಗಳನ್ನ ತೋರಿಸಿ ಲಕ್ಷಾಂತರ ರೂಪಾಯಿ ಹಣ ಪೀಕಿದ್ದಾನೆ.
ಇದನ್ನೂ ಓದಿ:ಪುಲ್ವಾಮಾ ದಾಳಿ ಮಾಡಿಸಿದ್ದು ನಾವಲ್ಲ… ಭಾರತದ ದಾಳಿಗೆ ನಾವೇನೂ ಹೆದರಿಲ್ಲ- ಉಲ್ಟಾ ಹೊಡೆದ ಪಾಕ್​
ಸ್ನೇಹಿತನ ಪತ್ನಿಯನ್ನು ಪುಸಲಾಯಿಸಿ ಮಾಗಡಿ ಬಳಿ ಇರುವ ಸಾವನದುರ್ಗ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದ. ಆಕೆಗೆ ಮತ್ತು ಬರುವ ಔಷಧಿ ಕೊಟ್ಟು ಆಕೆಯ ಜತೆ ಲೈಂಗಿಕ ಸಂಪರ್ಕವನ್ನ ಬಳೆಸಿದ್ದಾನೆ. ನಂತರ ಆಕೆ ಬೆತ್ತಲಾಗಿರುವ ವಿಡಿಯೋ ಚಿತ್ರೀಕರಣ ಮಾಡಿ ಅದನ್ನೇ ಇಟ್ಟುಕೊಂಡು ಹಣ ಪೀಕಿದ್ದಾನೆ. ಹಣ ಕೊಡದಿದ್ದರೆ ವಿಡಿಯೋವನ್ನು ವೈರಲ್ ಮಾಡಿ ಮಾನ ತಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಮನೆಯವರಿಗೆ ವಿಚಾರ ಗೊತ್ತಾದ್ರೆ ನನ್ನನ್ನ ಉಳಿಸುವುದಿಲ್ಲ ಎಂದು ಮನೆಯಲ್ಲಿದ್ದ ಒಡವೆ ಸೇರಿ 10 ಲಕ್ಷ ಹಣವನ್ನು ನೊಂದ ಮಹಿಳೆ ಸಂತೋಷ್​ಗೆ ತಂದು ಕೊಟ್ಟಿದ್ದಾಳಂತೆ.
ಇನ್ನು ಸ್ತ್ರೀ ಶಕ್ತಿ ಸಂಘ ಹಾಗೂ ಕೈ ಸಾಲ ಮಾಡಿಯೂ ಸಂತ್ರಸ್ತ ಮಹಿಳೆ ಸಂತೋಷನಿಗೆ ತಂದು ಕೊಟ್ಟಿದ್ದಾಳೆ. ಇತ್ತೀಚೆಗೆ ಮನೆಯಲ್ಲಿದ್ದ ಒಡೆವೆಗಳು ಕಾಣಿಯಾಗಿದ್ದ ಬಗ್ಗೆ ಮಹಿಳೆಯ ಬಳಿ ಮನೆಯವರು ಪ್ರಶ್ನೆ ಮಾಡಿದಾಗ ಸಂತೋಷನ ಆಟ ಸಂಪೂರ್ಣ ಬಯಲಾಗಿದೆ. ಹೆಣ್ಣು ಮಕ್ಕಳನ್ನು ಪುಸಲಾಯಿಸಿ ಅಮಾಯಕ ಹೆಣ್ಣು ಮಕ್ಕಳ ಜೀವನ ಹಾಳು ಮಾಡುತ್ತಿರುವ ಇಂತಹ ವ್ಯಕ್ತಿಗಳಿಗೆ ಶಿಕ್ಷೆ ಕೊಡಿಸಲೇಬೇಕು ಎಂದು ಮಹಿಳಾ ಸಂಘಟನೆಗಳು ನೊಂದ ಮಹಿಳೆಗೆ ಬೆನ್ನಿಗೆ ನಿಂತಿವೆ.
ಇದನ್ನೂ ಓದಿ:ಕಲರ್​ಫುಲ್​ ಬಿಕಿನಿಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ಬೋಲ್ಡ್​ ಬ್ಯೂಟಿ ಯಾರೆಂದು ಗುರುತಿಸುವಿರಾ?
ಮಹಿಳೆ ದೂರು ಕೊಡಲು ಮುಂದಾದಾಗ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನಗರ ಎಸ್ಪಿ ಕಚೇರಿಯಲ್ಲಿ ಮಹಿಳೆ ದೂರು ನೀಡಿದ ಬಳಿಕ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಏನೇ ಆಗಲಿ ಪರ ಪುರುಷನ ಜತೆ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು ಎಂಬುವುದಕ್ಕೆ ಈ ಘಟನೆಯೇ ಜೀವಂತ ಸಾಕ್ಷಿಯಾಗಿದೆ.(ದಿಗ್ವಿಜಯ ನ್ಯೂಸ್​)

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten − 10 =
Remember me
