ರಾಮನಗರ:ಆಸ್ತಿಗಾಗಿ ಹೆತ್ತ ತಂದೆಯನ್ನೇ ಮನೆಯಿಂದ ಹೊರ ಹಾಕಿದ ದುಷ್ಟ ಮಗನನ್ನು ರಾಮನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತನನ್ನು ಕುಮಾರ್​ ಎಂದು ಗುರುತಿಸಲಾಗಿದೆ. ರಾಮನಗರ ಪುರ ಠಾಣೆಯ ಸಿಪಿಐ ಮೋಹನ್ ಕುಮಾರ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ರಾಮನಗರದ ಸಿಂಗ್ರಿಬೋವಿದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಸ್ತಿಗಾಗಿ ಹೆತ್ತ ತಂದೆಯನ್ನೇ ಮಗ ಕುಮಾರ್​ ಮನೆಯಿಂದ ಹೊರಗೆ ಎಸೆದು ಅಮಾನವೀಯವಾಗಿ ವರ್ತಿಸಿದ್ದ. ಕೆಎಸ್ಆರ್​ಟಿಸಿ ಚಾಲಕನಾಗಿರುವ ಕುಮಾರ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಕುಮಾರ್​ ತಂದೆ ತಿಮ್ಮಯ್ಯ ಅವರು ಇದೀಗ ಬೇರೆಯವರ ಆಶ್ರಯದಲ್ಲಿದ್ದಾರೆ.
ಪ್ರಕರಣ ಸಂಬಂಧ ಸ್ವಯಂಚಾಲಿತವಾಗಿ ದೂರು ದಾಖಲಿಸಿಕೊಂಡ ರಾಮನಗರ ಪುರ ಠಾಣಾ ಪೊಲೀಸರು ಪಾಪಿ ಪುತ್ರನನ್ನು ಬಂಧಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಜು.20ರೊಳಗೆ ದ್ವಿತೀಯ ಪಿಯು ಫಲಿತಾಂಶ ಬಿಡುಗಡೆಗೆ ನಿರ್ಧಾರ: ಎಸ್ಸೆಸ್ಸೆಲ್ಸಿ-ಪಿಯು ಅಂಕ ಪರಿಶೀಲನೆಗೆ ಅವಕಾಶ

ಬಿಎಂಪಿಗೆ ಪ್ರತ್ಯೇಕ ಮಕ್ಕಳ ತಜ್ಞರ ಸಲಹಾ ಸಮಿತಿ: ಸದಸ್ಯರ ಪಟ್ಟಿ ಬಿಡುಗಡೆ

ಚಲನ್ ತಿದ್ದಿ ಸರ್ಕಾರಕ್ಕೆ ನಷ್ಟ ಮಾಡಿದ್ದ ಐವರು ಸಬ್ ರಿಜಿಸ್ಟ್ರಾರ್ ಸೇರಿ 9 ಮಂದಿ ಸೇವೆಯಿಂದ ವಜಾ

Sign in to your account
Please enter an answer in digits:3 − one =
Remember me
