ರಾಮನಗರ:ಕಂಚುಗಲ್​ ಬಂಡೇಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾವಿನ ಪ್ರಕರಣ ತಿರುವು ಪಡೆಯುತ್ತಲೇ ಇದೆ. ಸಾವಿಗೂ ಮುನ್ನ ಬಸವಲಿಂಗ ಶ್ರೀಗಳು ಬರೆದದ್ದು 3 ಪುಟಗಳ ಡೆತ್​ನೋಟ್​ ಅಲ್ಲ, 6 ಪುಟ ಎಂದು ಗೊತ್ತಾಗಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮನಗರ ಎಸ್ಪಿ ಸಂತೋಷ್ ಬಾಬು, ಶ್ರೀಗಳು ಪೊಲೀಸರಿಗೆ ಅಡ್ರೆಸ್ ಮಾಡಿ 3 ಪುಟಗಳ ಡೆತ್​ನೋಟ್ ಬರೆದಿದ್ದಾರೆ. ಭಕ್ತರು ಮತ್ತು ಇತರ ಶ್ರೀಗಳಿಗೆ ಅಡ್ರೆಸ್ ಮಾಡಿ ಮತ್ತೆ 3 ಪುಟಗಳ ಡೆತ್​ನೋಟ್ ಬೆರೆದಿದ್ದಾರೆ. ಮೊದಲು ಒಂದು ಪುಟ ಬರೆದು ಅದನ್ನ ಹರಿದು ಕಿಟಕಿಯಲ್ಲಿ ಬಿಸಾಡಿದ್ದಾರೆ. ಒಂದೇ ವಿಷಯ ಎರಡೂ ಪತ್ರದಲ್ಲೂ ಉಲ್ಲೇಖ ಆಗಿದೆ. ಸದ್ಯ ಎಲ್ಲವನ್ನೂ ಪತ್ರವನ್ನೂ ವಶಕ್ಕೆ ಪಡೆಯಲಾಗಿದೆ. ಮೊದಲು ಮಠದ ಸಿಬ್ಬಂದಿಗೆ ಈ ಲೆಟರ್ ಸಿಕ್ಕಿತ್ತು. ಆ ಬಳಿಕ ಅದನ್ನ ವಶಕ್ಕೆ ಪಡೆದಿದ್ದೇವೆ‌. ಪ್ರಕರಣ ಸಂಬಂಧ ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿದೆ ಎಂದರು.
ಈಗಾಗಲೇ ಕೇಸ್ ಅನ್ನು ಕುದೂರು ಪೋಲಿಸ್ ಠಾಣೆಯಿಂದ ಮಾಗಡಿಗೆ ವರ್ಗಾವಣೆ ಮಾಡಲಾಗಿದೆ. 20ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಲಾಗಿದೆ. ಕೆಲವರನ್ನು ಠಾಣೆಗೆ ಕರೆಸಲಾಗಿದೆ, ಕೆಲವರನ್ನು ಅವರ ಮನೆ ಬಳಿಯೇ ಹೋಗಿ ವಿಚಾರಿಸಲಾಗಿದೆ. ಇದುವರೆಗೂ ಯಾರನ್ನೂ ವಶಕ್ಕೆ ಪಡೆದಿಲ್ಲ. ಶ್ರೀಗಳ ವಿಡಿಯೋ ವೈರಲ್ ಬಗ್ಗೆಯೂ ತನಿಖೆ ಮಾಡಲಾಗುವುದು. ಬೇರೆ ಇನ್ನೊಂದು ಡೆತ್ ನೋಟ್ ಇರುವ ಸಾಧ್ಯತೆ ಇದೆ. ಬೇರಯವರಿಗೆ ಅಡ್ರೆಸ್ ಮಾಡಿರುವ ಸಾಧ್ಯತೆ ಇದೆ. ಇಂದು ಸಂಜೆ ವೇಳೆ ಆ ಡೆತ್​ನೋಟ್ ಸಿಗುವ ಸಾಧ್ಯತೆ ಇದೆ. ಶ್ರೀಗಳ ಸಾವಿನಲ್ಲಿ ಯಾರೇ ಇದ್ರೂ ತನಿಖೆ ಮಾಡಲಾಗುತ್ತೆ. ಶ್ರೀಗಳ ಫೋನ್​ನಲ್ಲಿದ್ದ ಕಾಲ್ ಡಿಟೇಲ್ಸ್​ ಮುಖಾಂತರ ವಿಚಾರಣೆ ನಡೆಸಲಾಗುವುದು ಎಂದರು.
ಕಂಚುಗಲ್ ಬಂಡೇ ಮಠದ ಜವಾಬ್ದಾರಿ ವಹಿಸಿಕೊಂಡ ಗುರುವಣ್ಣ ಮಠದ ಶ್ರೀಗಳು

ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್​: ಮುಂದಿನ ವರ್ಷವೇ ದೇವಿಯ ದರ್ಶನ ಸಿಗೋದು

ನಮ್ಮ ಸಮುದಾಯಕ್ಕೆ ಸರಸ್ವತಿ ಒಲಿದಿದ್ದಾಳೆ, ಆದರೆ ಲಕ್ಷ್ಮೀ ಒಲಿಯಲಿಲ್ಲ… ಎನ್ನುತ್ತಲೇ ಸಿದ್ದರಾಮಯ್ಯರನ್ನ ಗುಣಗಾನ ಮಾಡಿದ ರಘು ಆಚಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 14 =
Remember me
