

ಚನ್ನಪಟ್ಟಣ
ಬಿಜೆಪಿ ಸರ್ಕಾರದ ಕಮಿಷನ್​ ಕಾಟದಿಂದಾಗಿ ರಾಜ್ಯದ ಎಷ್ಟೋ ಕುಟುಂಬಗಳು ಅನಾಥವಾಯಿತು. ನಿಮಗೆ ಬರಬೇಕಾದ ಕಮಿಷನ್​ ನೀಡುತ್ತೇವೆ. ಆದರೆ, ಕಳೆದುಕೊಂಡ ಮಾಂಗಲ್ಯ ಮರಳಿ ಕೊಡುತ್ತೀರಾ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯರನ್ನು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲಾ ಪ್ರಶ್ನಿಸಿದರು.

ತಾಲೂಕಿನ ಕೆಂಗಲ್​ ಬಳಿ ಭಾನುವಾರ ನಡೆದ ಕಾಂಗ್ರೆಸ್​ ಗ್ಯಾರಂಟಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ 40% ಸರ್ಕಾರ ಇದೆ. ಸಿಎಂ ಹೋದ ಕಡೆಯೆಲ್ಲ 40% ಸಿಎಂ ಎಂಬ ಹಣೆಪಟ್ಟಿ ಅಂಟಿಕೊಳ್ಳುತ್ತಿದೆ. ಕರ್ನಾಟಕ ಸಿಎಂ ಪೇಸಿಎಂ ಎಂದು ಖ್ಯಾತರಾಗಿರುವುದು ಮೋದಿಗೆ ನಾಚಿಕೆ ತರಬೇಕು. ರಾಜ್ಯದಲ್ಲಿರುವುದು 40% ಸರ್ಕಾರ ಎಂದು ನಾವು ಹೇಳುತ್ತಿಲ್ಲ, ರಾಜ್ಯದ ಗುತ್ತಿಗೆದಾರರ ಸಂದವರೇ ಹೇಳಿದ್ದಾರೆ. ಈ ಮಧ್ಯೆ ಪ್ರಧಾನಿಗಳು ರಾಜ್ಯಕ್ಕೆ 8 ಬಾರಿ  ಬಂದರು ಸಹ ಇದರ ಬಗ್ಗೆ ಚಕಾರ ಎತ್ತಲಿಲ್ಲ. ಗುತ್ತಿಗೆದಾರರ ಪತ್ರಕ್ಕೆ ಉತ್ತರ ಕೊಡಲಿಲ್ಲ ಎಂದು ಟೀಕಿಸಿದರು.

ರಾಜ್ಯ ಸರ್ಕಾರದ ಕಮಿಷನ್​ ಕಾಟಕ್ಕೆ ಅವರದೇ ಪಕ್ಷದ ಕಾರ್ಯಕರ್ತನೊಬ್ಬ ಬಲಿಯಾದ. ಇನ್ನು ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿದ ಸುರ್ಜೇವಾಲಾ, ಕೇವಲ ಕಾರ್ಯಕರ್ತನೊಬ್ಬನೇ ಅಲ್ಲ ರಾಜ್ಯದ ಹಲವರು ಬಿಜೆಪಿ ಸರ್ಕಾರದ ಕಮಿಷನ್​ ಕಾಟಕ್ಕೆ ಬಲಿಯಾಗಿದ್ದಾರೆ. ಶಾಲೆ ಅನುದಾನಕ್ಕೆ ಕಮಿಷನ್​ ಇರಲಿ, ಇದೀಗ ಮಠದ ಅನುದಾನಕ್ಕೂ ಕಮಿಷನ್​ ಕೇಳುತ್ತಿದ್ದಾರೆ ಎಂದು ಸ್ವಾಮೀಜಿಯೋಬ್ಬರೇ ಆರೋಪಿಸಿದ್ದಾರೆ. ರಾಜ್ಯದ ಮಂತ್ರಿಗಳು ಸೇರಿ 17 ಶಾಸಕರ ವಿರುದ್ಧ ಕಮೀಷನ್​ ಆರೋಪವಿದೆ. ಆದರೆ, ಯಾರ ವಿರುದ್ದವೂ ಕ್ರಮವಿಲ್ಲ ಎಂದರು.

ವರ್ಗಾವಣೆ ಸೇರಿ ಯಾವುದರಲ್ಲೂ ಬಿಜೆಪಿ ಸರ್ಕಾರ ಕಮಿಷನ್​ ಬಿಡುತ್ತಿಲ್ಲ. ಇದೀಗ, ಸೋಪ್​ ಕಾರ್ಖಾನೆಯನ್ನು ತೊಳೆಯಲು ನಿಂತಿದ್ದಾರೆ. 20 ರೂ. ಸಾಬೂನಿನಲ್ಲಿ ಇಷ್ಟು ಹಗರಣ ಮಾಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಇಷ್ಟೆಲ್ಲ ಆರೋಪಗಳಿದ್ದರೂ ಅಮಿತ್​ ಶಾ ಸಾಕ್ಷಿ ಕೇಳುತ್ತಾರೆ. ಜನ ಒಗ್ಗಟ್ಟಾಗದಿದ್ದರೆ ಬಿಜೆಪಿಯವರು ರಾಜ್ಯವನ್ನೇ ಮಾರುತ್ತಾರೆ ಎಂದು ಕುಟುಕಿದರು. ರಾಜ್ಯದಲ್ಲಿ ಇನ್ನೊಂದು ಪಕ್ಷವಿದೆ. ಅದು ಬಿಜೆಪಿ ತೊಡೆ ಮೇಲೆ ಇಷ್ಟ ಬಂದಾಗ ಕೂರುತ್ತದೆ. ಅದು ಬಿಜೆಪಿ ಬಿ ಟೀಂ ಅಲ್ಲ. ಎ ಟು ಝಡ್​ ಟೀಂ. ಕಾಲಕ್ಕೆ ತಕ್ಕಂತೆ ಬದಲಾಗುವ ಪಕ್ಷ. ಜೆಡಿಎಸ್​ ಬೆಂಬಲಿಸಿದರೆ ಮತ್ತೆ ಬಿಜೆಪಿಗೆ ಅಧಿಕಾರ ನೀಡಿದಂತೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್​ ಎಂದಿಗೂ ಜನಪರ
ನೆಹರು ಕಾಲದಿಂದಲೂ ಬಡವರು, ಮಹಿಳೆಯರನ್ನು ಗಮನದಲ್ಲಿಟ್ಡುಕೊಂಡು ಕಾರ್ಯಕ್ರಮ ನೀಡುವುದು ಕಾಂಗ್ರೆಸ್​ ಪಕ್ಷ ಮಾತ್ರ. ಮತಕ್ಕಾಗಿ ಎಂದೂ ಕಾರ್ಯಕ್ರಮ ನೀಡುವುದಿಲ್ಲ. ಜನರ ಹಿತಕ್ಕಾಗಿ ಕಾರ್ಯಕ್ರಮ ನೀಡುತ್ತೇವೆ. ಜನಸಾಮಾನ್ಯರ ಅಭಿವೃದ್ಧಿಯೇ ಕಾಂಗ್ರೆಸ್​ ಪಕ್ಷದ ಧ್ಯೇಯ. ಅದರ ಭಾಗವೇ ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳು. 450 ರೂ. ಇದ್ದ ಗ್ಯಾಸ್​ ಬೆಲೆ ಇಂದು 2200 ರೂ. ಆಗಿದೆ. ರೈತಪರ, ಬಡವರ ಪರ ಎನ್ನುವವರು ಯಾರು ಸಹ ಇದರ ವಿರುದ್ಧ ಧ್ವನಿ ಎತ್ತಲಿಲ್ಲ ಎಂದು ಸಂಸದ ಟಿ.ಕೆ. ಸುರೇಶ್​ ಟೀಕಿಸಿದರು.

ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದೆ. ಬಿಜೆಪಿ, ಜೆಡಿಎಸ್​ ಎರಡೂ ಪಕ್ಷಗಳು ಪ್ರಚಾರಕ್ಕೆ ಹೊರಟಿವೆ. ಜೆಡಿಎಸ್​ ಪಂಚರತ್ನ ಯಾತ್ರೆ ಮಾಡುತ್ತಿದ್ದರೆ, ಬಿಜೆಪಿಯವರು ವಿಜಯಸಂಕಲ್ಪ ಯಾತ್ರೆ ಮೂಲಕ 40% ಸರ್ಕಾರ ಕೊಡುವುದಾಗಿ ಹೊರಟಿದ್ದಾರೆ. ಆದರೆ, ಜನರಿಗೆ ಉತ್ತಮ ಕಾರ್ಯಕ್ರಮ ನೀಡಬೇಕು ಎಂದು ಕಾಂಗ್ರೆಸ್​ ಪ್ರಜಾಧ್ವನಿ ನಡೆಸುತ್ತಿದೆ ಎಂದರು.

ಜಿಲ್ಲೆಯಜನತೆಕೆಂಗಲ್​ಹನುಮಂತಯ್ಯ,ದೇವೇಗೌಡ,ಕುಮಾರಸ್ವಾಮಿಸೇರಿದಂತೆಹಲವರಿಗೆಸಿಎಂಸ್ಥಾನಕೊಡಿಸಿದ್ದೀರಿ.ಈಬಾರಿನಾಲ್ಕೂಸ್ಥಾನಗೆಲ್ಲಿಸುವಮೂಲಕಡಿ.ಕೆ.ಶಿವಕುಮಾರ್​ಅವರನ್ನುಬೆಂಬಲಿಸಬೇಕುಎಂದುಡಿ.ಕೆ.ಸುರೇಶ್​ಮನವಿಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + six =
Remember me
