
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ, ಶಾಶ್ವತ ಅಂಗವೈಕಲ್ಯ, ಭಾಗಶಃ ಗಾಯಗೊಂಡವರಿಗೆ, ಆಸ್ತಿ-ಪಾಸ್ತಿ ನಷ್ಟಕ್ಕೆ ನೀಡುವ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸುವ ಮೂಲಕ ಅರಣ್ಯ ಇಲಾಖೆ ಜನರ ಬಹುದಿನಗಳ ಬೇಡಿಕೆಗೆ ಮನ್ನಣೆ ನೀಡಿದೆ.
ಇತ್ತೀಚಿನ ವರ್ಷಗಳಲ್ಲಿ ಆನೆ, ಚಿರತೆ, ಕರಡಿಗಳ ದಾಳಿಯಿಂದ ಜನ ಗಾಯಗೊಳ್ಳುವುದು, ಮೃತಪಡುವ ಪ್ರಕರಣಗಳು ಕಂಡುಬರುತ್ತಿದೆ. ಇಂತಹ ಪ್ರಕರಣಗಳಲ್ಲಿ ಗಾಯಗೊಂಡವರಿಗೆ, ಅಂಗವಿಕಲತೆ ಹೊಂದಿದವರಿಗೆ, ಮರಣ ಹೊಂದಿದವರಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಜನರು ಅರಣ್ಯ ಇಲಾಖೆಯನ್ನು ಒತ್ತಾಯಿಸುತ್ತಲೇ ಬಂದಿದ್ದರು. ಇದಕ್ಕೆ ಸ್ಪಂದಿಸಿರುವ ಇಲಾಖೆ ಈಗ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.  ಜಿಲ್ಲೆಯಲ್ಲೂ ಆನೆ, ಕರಡಿ, ಚಿರತೆ ದಾಳಿಗಳು ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ಯಾವ ಹಾನಿಗೆ ಎಷ್ಟು ಪರಿಹಾರ?ಈ ಹಿಂದೆ ಆನೆ ಸೇರಿ ಇತರ ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ಪ್ರಾಣ ಹಾನಿಗೆ ಕೊಡುತ್ತಿದ್ದ 7.50 ಲಕ್ಷ ರೂ. ಪರಿಹಾರ ಮೊತ್ತವನ್ನು ಈಗ 15 ಲಕ್ಷ ರೂ. ಗಳಿಗೆ. ಶಾಶ್ವತ ಅಂಗವೈಕಲ್ಯ ಹೊಂದಿದವರಿಗೆ ನೀಡುತ್ತಿದ್ದ 5 ಲಕ್ಷ ರೂ. ಗಳನ್ನು 10 ಲಕ್ಷ ರೂ.ಗೆ, ಭಾಗಶಃ ಅಂಗವಿಕಲತೆಗೆ 2.50 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ, ಗಾಯಾಳುಗಳಿಗೆ ನೀಡುತ್ತಿದ್ದ 30 ಸಾವಿರ ರೂ.ಗಳನ್ನು 60 ಸಾವಿರ ರೂ., ಆಸ್ತಿ ನಷ್ಟಕ್ಕೆ 10 ಸಾವಿರ ರೂ.ಗಳಿಂದ 20 ಸಾವಿರ ರೂ.ಗಳಿಗೆ ಏರಿಸಲಾಗಿದೆ.
ಮಾಸಾಶನವೂ ಹೆಚ್ಚಳ
ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರದ ಜತೆಗೆ 5 ವರ್ಷಗಳವರೆಗೆ ನೀಡುತ್ತಿದ್ದ 2 ಸಾವಿರ ರೂ. ಮಾಸಾಶನವನ್ನು 4 ಸಾವಿರ ರೂ.ಗಳಿಗೆ ಏರಿಸಲಾಗಿದೆ. ಮಾನವ ಪ್ರಾಣ ಹಾನಿಗೆ ನೀಡುವ ಪರಿಹಾರವನ್ನು ಘಟನೆ ಸಂಭವಿಸಿದ ತಕ್ಷಣ ಉಪ ಅರಣ್ಯಾಧಿಕಾರಿಗಳ ಮಟ್ಟದಲ್ಲಿಯೇ 5 ಲಕ್ಷ ರೂ. ನೀಡಬೇಕು ಹಾಗೂ ಉಳಿದ 10 ಲಕ್ಷ ರೂ. ಗಳನ್ನು ಉನ್ನತ ಅಧಿಕಾರಿಗಳ ಹಂತದಲ್ಲಿ ವಿಚಾರಣೆ ಖಚಿತಪಡಿಸಿಕೊಂಡ ನಂತರ ವಾರಸುದಾರರಿಗೆ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವನ್ಯಪ್ರಾಣಿಯಿಂದ ಹತ್ಯೆಯಾದ ವ್ಯಕ್ತಿ ಅರಣ್ಯ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲ ಹಾಗೂ ಮರಣೋತ್ತರ ಪರೀಕ್ಷಾ ವರದಿಯಲ್ಲಿ ವ್ಯಕ್ತಿ ವನ್ಯಪ್ರಾಣಿಯಿಂದ ಮೃತನಾಗಿದ್ದಾನೆ ಎಂದು ದೃಢಪಟ್ಟರೆ ಮಾತ್ರ ಪರಿಹಾರ ಸಿಗಲಿದೆ.    ಪ್ರಮಾಣಪತ್ರ ಆಧರಿಸಿ ಪರಿಹಾರ  ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ವ್ಯಕ್ತಿಗೆ ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಪರಿಹಾರ ಹಣದ ಜತೆಗೆ ಪ್ರತಿ ತಿಂಗಳು 5 ವರ್ಷಗಳವರೆಗೆ 4 ಸಾವಿರ ರೂ. ಮಾಸಾಶನ ಸಿಗಲಿದೆ.
ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಈ ಹಿಂದೆ ಕಾಡು ಪ್ರಾಣಿಗಳ ಹಾವಳಿಯಿಂದ ಆದ ಬೆಳೆ ನಷ್ಟಕ್ಕೆ ಡಿಸೆಂಬರ್ 15, 2022ರಂದು ಹೆಚ್ಚಿನ ಪರಿಹಾರ ನಿಗದಿ ಮಾಡಿ ಆದೇಶ ನೀಡಿತ್ತು. ಅದೇ ಆದೇಶಕ್ಕೆ ಸೇರ್ಪಡೆಗೊಳಿಸಿ ಮೇ 24ರಂದು ಸರ್ಕಾರದ ಅಧೀನ ಕಾರ್ಯದರ್ಶಿಗಳು ವನ್ಯಜೀವಿ ಪ್ರಾಣಹಾನಿ ಪ್ರಕರಣಗಳಿಗೆ ಹೆಚ್ಚಿನ ಪರಿಹಾರ ಆದೇಶ ನೀಡಿದ್ದಾರೆ.
ಜಿಲ್ಲೆಯಲ್ಲಿಆನೆಗಳಉಪಟಳಹೆಚ್ಚಿದೆ.ಅವುಗಳದಾಳಿಯಿಂದಎರಡುವರ್ಷದಲ್ಲಿನಾಲ್ಕುಮಂದಿಮೃತಪಟ್ಟಿದ್ದಾರೆ.ಕರಡಿ,ಚಿರತೆದಾಳಿಗಳಿಂದಲೂಹಲವರುಗಾಯಗೊಂಡಿದ್ದಾರೆ.ಪ್ರಸ್ತುತಅರಣ್ಯಇಲಾಖೆಪರಿಹಾರಮೊತ್ತಹೆಚ್ಚಳಮಾಡಿರುವುದುನೊಂದಕುಟುಂಬಗಳಜೀವನನಿರ್ವಹಣೆಗೆಸಹಕಾರಿಯಾಗುತ್ತದೆ.
ವಾಸುಪುಟ್ಟಮಾಸ್ತಿಗೌಡ,ರೈತಮುಖಂಡ,ಕೃಷ್ಣಾಪುರದೊಡ್ಡಿ
ವನ್ಯಪ್ರಾಣಿದಾಳಿಗೆಒಳಗಾದವರಿಗೆಇಲಾಖೆನಿಗದಿಪಡಿಸಿದಮಾನದಂಡದಲ್ಲಿಯೇಸೂಕ್ತಪರಿಹಾರನೀಡಲಾಗುತ್ತಿದೆ.ಪರಿಹಾರಹೆಚ್ಚಳಮಾಡುವಂತೆಸಾರ್ವಜನಿಕರುಇಲಾಖೆಯನ್ನುಒತ್ತಾಯಿಸುತ್ತಲೇಬಂದಿದ್ದರು.ಜಿಲ್ಲೆಯಲ್ಲಿಮಾನವವನ್ಯಪ್ರಾಣಿಸಂಘರ್ಷತಪ್ಪಿಸಲುಅಗತ್ಯಕ್ರಮಕೈಗೊಳ್ಳಲಾಗಿದೆ.
ದೇವರಾಜು,ಡಿಎಫ್​ಒ,

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
