ಕೃಷ್ಣರಾಜ ಕುತ್ಪಾಡಿತನ್ನ ದುಡಿಮೆಯಿಂದ ಬಂದ ಸ್ವತ್ತಿನಲ್ಲಿ ತನ್ನ ಪಾಲನ್ನು ಉಪ ಭೋಗಿಸಲು ಪ್ರತಿಯೊಬ್ಬನಿಗೂ ಅರ್ಹತೆ ಇದೆ. ಬೆವರು ಸುರಿಸದೆ ತಿಂದ ಅನ್ನ ಯಾವ ಕಾರಣಕ್ಕೂ ದಕ್ಕದು. ಅವರವರ ಹೆಸರಿದ್ದಷ್ಟನ್ನೇ ಅವರು ಉಣ್ಣುವುದು ಸಾಧ್ಯ.
ದೇವಸ್ವಂ ಬ್ರಾಹ್ಮಣಸ್ವಂ ವಾ ಲೋಭೇನಾಪಹಿನಸ್ತಿ ಯಃ|ಸ ಪಾಪಾತ್ಮ ಪರೇ ಲೋಕೆ ಗೃಧ್ರೋಚ್ಛಿಷ್ಠೇನ ಜೀವತಿ||
ದೇವತೆಗಳಿಗೆ, ಜ್ಞಾನಿಗಳಿಗೆ, ಋಷಿಗಳಿಗೆ ಸಂಬಂಧಪಟ್ಟ ಅಮೂಲ್ಯ ವಸ್ತುಗಳನ್ನು ಯಾರು ಲೋಭದಿಂದ ತನ್ನ ಸ್ವಾರ್ಥಕ್ಕಾಗಿ ಅಪಹರಿಸುವರೋ ಅವರು ಪಾಪಿಷ್ಟರು. ಇಹದಲ್ಲಿ ಅಲ್ಲದೆ ಪರದಲ್ಲಿಯೂ ಹದ್ದು ಕಿತ್ತು ತಿಂದು ಉಳಿದ ಮಾಂಸವನ್ನೇ ಉಣುವವರಾಗುತ್ತಾರೆ. ಹೀಗೆ ಕರುಳು ಕಿತ್ತು ಹೋಗುವ ಹಸಿವು, ಅಗತ್ಯ ವಸ್ತು ಕೈಗೆ ದಕ್ಕದ ನೋವು ಕಾಡುತ್ತಲೇ ಇರುತ್ತದೆ ಎಂದು ತಿಳಿಯಬೇಕು.
ಸ್ವತಃ ವಿವೇಚನೆ ಇಲ್ಲದೆ ರಾವಣ ಸೀತೆಯನ್ನು ಎಳೆದೊಯ್ದ. ಜಟಾಯು ಎದುರಾದ. ರಾವಣನಿಗೆ ಇನ್ನಿಲ್ಲದಂತೆ ತಿಳಿ ಹೇಳಿದ. ಪಂಚವಟಿಗೆ ಬಂದಾಗಲೇ ರಾಮ ಜಟಾಯುವನ್ನು ಭೇಟಿಯಾಗಿದ್ದ. ದಶರಥನ ಸಖ್ಯವನ್ನು ರಾಮನಲ್ಲೂ ಮುಂದುವರೆಸಿ ಪ್ರಭಾವಿತನಾಗಿದ್ದ. ರಾಮನಿಗಾಗಿ ಜೀವನ ನೀಡಲು ಕೂಡ ಹಿಂಜರಿಯಲಿಲ್ಲ. ‘ರಾಮಸ್ವವನ್ನು ಅಪಹರಿಸಿ ನೀನು ಏನೂ ದಕ್ಕಿಸಿಕೊಳ್ಳಲಾರೆ’
ಯತ್ಕೃತ್ವಾ ನ ಭವೇದ್ಧರ್ಮಃ| ನ ಕೀರ್ತಿರ್ನ ಯಶೋ ಭುವಿ|ಶರೀರಸ್ಯ ಭವೇತ್ ಖೇದಃ | ಕಸ್ತತ್ ಕರ್ಮ ಸಮಾಚರೇತ್||
‘ಮಾಡುವ ಕೆಲಸದಿಂದ ಜೀವನಶೈಲಿ ಉತ್ತಮವಾಗಬೇಕು. ಎಲ್ಲೆಡೆ ಹೆಸರಾಗಬೇಕು. ಸಿದ್ಧಿ ಪಡೆಯಬೇಕು. ಅಂಥ ಯಾವ ಫಲವೂ ಲಭಿಸದೆ ಕೇವಲ ಶರೀರಕ್ಕೆ ಆಯಾಸವಾಗುವುದಾದರೆ ಯಾವ ಬುದ್ಧಿವಂತ ಆ ಕಾರ್ಯದಲ್ಲಿ ತೊಡಗುತ್ತಾನೆ?’
ಜಟಾಯು ಅದನ್ನು ಸುಂದರ ದೃಷ್ಟಾಂತದೊಂದಿಗೆ ರಾವಣನ ಗಮನ ಸೆಳೆಯುತ್ತಾನೆ. ಬೋರ್ಗಲ್ಲಿಗೆ ನೀರೆರೆದರೆ ಮೆತ್ತಗಾದೀತೇ? ನಮಗಂತೂ ಈ ಮಾತು ಎಂದಿಗೂ ಮನನೀಯ.
ಸ ಭಾರಃ ಸೌಮ್ಯ ಭರ್ತವ್ಯಃ ಯೋ ನರಂ ನಾವಸಾದಯೇತ್|ತದನ್ನಮಪಿ ಭೋಕ್ತವ್ಯಂ ಜೀರ್ಯತೇ ಯದನಾಮಯಂ||
‘ತನ್ನನ್ನೇ ಕುಸಿಯುವಂತೆ ಮಾಡುವ ಭಾರವನ್ನು ಯಾರು ತಾನೆ ಎತ್ತಲು ಬಯಸುವನು? ಅಜೀರ್ಣ ರೋಗ ಉಂಟಾಗದಂತೆ ಅಗತ್ಯವಿದ್ದಷ್ಟನ್ನೇ ಉಣಬೇಕು.’ ರಾಮನ ಹೃದಯವನ್ನೇ ಹೊತೆ್ತೊಯ್ಯುವ ಹೃದಯಹೀನನಾದ ನಿನಗೆ ಸೀತೆ ದಕ್ಕುವಳೆ? ಎಂದು ಜಟಾಯು ಎಚ್ಚರಿಸಿದರೂ ರಾವಣ ಕಾಣನಾಗಿದ್ದ. ಏನನ್ನೂ ಕಾಣದಾಗಿದ್ದ. ಪರರ ಸ್ವತ್ತು ಕಿತ್ತುಕೊಂಡರೇನೆ ದಕ್ಕದು. ಇನ್ನು ಪರದ ಸ್ವತ್ತು ದಕ್ಕುವುದೇ?
(ಲೇಖಕರು ಸಂಸ್ಕೃತ ಉಪನ್ಯಾಸಕರು)

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:one × 4 =
Remember me
