ಬಾಳೆಹೊನ್ನೂರು: ರಂಭಾಪುರಿಯಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಧರ್ಮಸಮಾರಂಭ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವಕ್ಕೆ ಮಾ.5ರಂದು ವಿಧ್ಯುಕ್ತ ಚಾಲನೆ ದೊರೆಯಲಿದೆ. 10ರವರೆಗೆ ಯುಗಮಾನೋತ್ಸವ ನಡೆಯಲಿದ್ದು, ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಾನ್ನಿಧ್ಯ ವಹಿಸುವರು.
ಜಗದ್ಗುರುಗಳ ಪ್ರವಾಸ ಪಟ್ಟಿ: ಮಾ.16 ಮತ್ತು 17ರಂದು ಭದ್ರಾವತಿ ತಾಲೂಕು ಎಡೆಹಳ್ಳಿಯಲ್ಲಿ ಧರ್ಮ ಜಾಗೃತಿ ಸಮಾರಂಭ ಹಾಗೂ ಇಷ್ಟಲಿಂಗ ಮಹಾಪೂಜೆ, 18ರಂದು ಸೊರಬ ತಾಲೂಕು ಶಾಂತಪುರ ಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಧರ್ಮ ಸಮಾರಂಭ, 20ರಂದು ಅರಸೀಕೆರೆ ತಾಲೂಕು ಮಾಡಾಳು ಗ್ರಾಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಸಾನ್ನಿಧ್ಯವನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ವಹಿಸುವರು.
22ರಂದು ಆಳಂದದ ಮಾದನಹಿಪ್ಪರಗಿಯಲ್ಲಿ ಧರ್ಮ ಜಾಗೃತಿ ಸಮಾರಂಭ, 23ರಂದು ಬಸವಕಲ್ಯಾಣದ ಗಡಿಗೌಡಗಾಂವದಲ್ಲಿ ಶ್ರೀ ಶಾಂತವೀರ ಶಿವಾಚಾರ್ಯರ ಜನ್ಮ ಸುವರ್ಣಮಹೋತ್ಸವ ಹಾಗೂ ಪಟ್ಟಾಧಿಕಾರದ ರಜತಮಹೋತ್ಸವ, 25ರ ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿಯ ಪಾಲಿಕೊಪ್ಪದಲ್ಲಿ ಶ್ರೀ ಬಸವೇಶ್ವರ ನೂತನ ಶಿಲಾದೇಗುಲ ಉದ್ಘಾಟನೆ, ಸಂಜೆ 4.30ಕ್ಕೆ ತಿರುಮಲಕೊಪ್ಪದ ಶ್ರೀ ಜಗದ್ಗುರು ರೇಣುಕ ಧರ್ಮನಿವಾಸದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವ, ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು. 26ರ ಮಧ್ಯಾಹ್ನ 12.30ಕ್ಕೆ ತಿರುಮಲಕೊಪ್ಪದ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಸಾಮೂಹಿಕ ವಿವಾಹ, ಸಂಜೆ ಹುಬ್ಬಳ್ಳಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ, ಪಾರ್ವತಿ ಮಹಿಳಾ ಮಂಡಳದ ವಾರ್ಷಿಕೋತ್ಸವ, 27ರಂದು ಲಕ್ಷೆ್ಮೕಶ್ವರ ತಾಲೂಕು ಅಡರಕಟ್ಟಿಯಲ್ಲಿ ಸಾಮೂಹಿಕ ವಿವಾಹ, 29ರ ಬೆಳಗ್ಗೆ ಹಾವೇರಿ ತಾಲೂಕು ನೆಗಳೂರು ಹಿರೇಮಠದಲ್ಲಿ ಶ್ರೀ ಗುರುಶಾಂತೇಶ್ವರ ಶ್ರೀ ಪಟ್ಟಾಧಿಕಾರದ ದ್ವಾದಶ ವರ್ಧಂತಿ ಸಮಾರಂಭ, ಸಂಜೆ 5ಕ್ಕೆ ಹುಬ್ಬಳ್ಳಿ ತಾಲೂಕು ಹಳಿಯಾಳದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವದ ಸಾನ್ನಿಧ್ಯ, 30ರಂದು ಹರಿಹರ ತಾಲೂಕು ಮಲೆಬೆನ್ನೂರಿನಲ್ಲಿ ಇಷ್ಟಲಿಂಗ ಮಹಾಪೂಜೆ, 31ರಂದು ಕುಂದಗೋಳ ತಾಲೂಕು ಪಶುಪತಿಹಾಳದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸುವರು ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
