ಬೆಳಗಾವಿ:ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ 17 ಶಾಸಕರು ಸಂತೋಷದಿಂದ ಇದ್ದಾರೆ. ಯಾರೂ ಕಾಂಗ್ರೆಸ್​ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸಚಿವ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.
ನಗರದ ಸಿಪಿಇಡಿ ಮೈದಾನದಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಘಟಕ ಭಾನುವಾರ ಹಮ್ಮಿಕೊಂಡಿದ್ದ ಗ್ರಾಪಂ ನೂತನ ಸದಸ್ಯರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರೇ. ಅವರೊಂದಿಗೆ ಉತ್ತಮ ಸಂಬಂಧವಿದೆ. ಆದರೆ, ಕಾಂಗ್ರೆಸ್​ಗೆ ಹೋಗಲ್ಲ. ಕಾಂಗ್ರೆಸ್​ನಲ್ಲಿ ಐವರು ಶಾಸಕರು ಈಗಾಗಲೇ ರಾಜೀನಾಮೆ ನೀಡಲು ಸಿದ್ಧವಿದ್ದಾರೆ. ಅವರ ಹೆಸರು ಕೇಳಿದರೆ ನೀವೂ ಗಾಬರಿಯಾಗುತ್ತೀರಿ. ನಾನು ಮನಸ್ಸು ಮಾಡಿದರೆ ಇಪ್ಪತ್ನಾಲ್ಕೇ ಗಂಟೆಗಳಲ್ಲಿ ಅವರನ್ನು ಬಿಜೆಪಿಗೆ ಕರೆತರುತ್ತೇನೆ ಎಂದರು.
ಮುಂದಿನ ಸಲ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು 60 ಸಾವಿರ ಲೀಡ್​ನೊಂದಿಗೆ ಬಿಜೆಪಿ ತೆಕ್ಕೆಗೆ ಪಡೆಯಲಾಗುವುದು. ನಮ್ಮದು ಸುಸಂಸ್ಕೃತ ರಾಷ್ಟ್ರ. ಮಹಿಳೆಯರಿಗೆ ನಾವೂ ಪೂಜ್ಯನೀಯ ಸ್ಥಾನ ನೀಡಿದ್ದೇವೆ. ರಾಜಕೀಯವಾಗಿ ಮಾತ್ರ ವಿರೋಧಿಸಬೇಕು. ವೈಯಕ್ತಿಕ ಟೀಕೆ ಬೇಡ. ಇತಿಮಿತಿಯಲ್ಲೇ ಮಾತನಾಡಬೇಕು ಎಂದು ಹೆಬ್ಬಾಳ್ಕರ್ ವಿರುದ್ಧ ಹರಿಹಾಯ್ದರು.
‘ಯಾವ ಭಾರತೀಯನೂ ಈ ದಿನವನ್ನು ಮರೆಯಲು ಸಾಧ್ಯವಿಲ್ಲ’ : ಪುಲ್ವಾಮಾ ಸೈನಿಕರಿಗೆ ಮೋದಿ ನಮನ

ಸರ್ಕಾರಿ ಆಸ್ಪತ್ರೆ ಮೆನುವಿನಲ್ಲಿ ಚಿಕನ್​ ಸಾಂಬಾರ್: ಆದ್ರೆ ಈ ರೋಗಿಗಳಿಗೆ ಮಾತ್ರ!

ಕ್ಯಾಪಿಟಲ್‌ಹಿಲ್‌ ಹಿಂಸಾಚಾರ; ಮಾಜಿ ಅಧ್ಯಕ್ಷ ಟ್ರಂಪ್‌ಗೆ ಕ್ಲೀನ್‌ ಚಿಟ್‌- ಖುಲಾಸೆಗೊಳಿಸಿದ ಸೆನೆಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
