ಬೆಂಗಳೂರು:ಸಿಡಿ ಕೇಸ್​ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ರಾಜ್ಯ ಸರ್ಕಾರವನ್ನ ಕಾಂಗ್ರೆಸ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಅತ್ಯಾಚಾರ ಪ್ರಕರಣವೊಂದೇ ಸಾಕು ಬಿಜೆಪಿ ಆಡಳಿತದ ನಿಜಬಣ್ಣ ತಿಳಿಯಲು. ದೂರು ನೀಡಿದ ಸಂತ್ರಸ್ತೆಯನ್ನು ಆರೋಪಿಯಂತೆ ಸತತವಾಗಿ ವಿಚಾರಣೆ ನಡೆಸಲಾಗುತ್ತಿದೆ. ಅತ್ಯಾಚಾರ ಆರೋಪಿಯನ್ನು ರಾಜಮರ್ಯಾದೆಯಲ್ಲಿ ನೆಪಮಾತ್ರದ ವಿಚಾರಣೆ ನಡೆಸಲಾಗಿದೆ. ಈ ಪ್ರಕರಣದಿಂದ ಚಳಿ ಜ್ವರ ಬಂದಿರುವ ಅತ್ಯಾಚಾರ ಆರೋಪಿಗೆ ನಿಜಕ್ಕೂ ಅನಾರೋಗ್ಯವೋ ಅಥವಾ ತಲೆಮರೆಸಿಕೊಳ್ಳುವ ತಂತ್ರವೋ? ಆರೋಪಿ ತಲೆಮರೆಸಿಕೊಳ್ಳುವ ಬಗ್ಗೆ ಪೊಲೀಸರೂ ತಲೆ ಕೆಡಿಸಿಕೊಂಡಿಲ್ಲ. ಆರೋಪಿಯ ಮೊಬೈಲ್‌ ಅನ್ನು ಹಲವು ದಿನಗಳವರೆಗೆ ಪೊಲೀಸರು ವಶಪಡಿಸಿಕೊಂಡಿಲ್ಲ. ಸಾಕ್ಷ್ಯ ನಾಶಕ್ಕೆ ಸಾಕಷ್ಟು ಸಮಯ ಬೇಕಿತ್ತೋ ಏನೋ? ಎಂದು ಕಾಂಗ್ರೆಸ್​ ಕಿಡಿಕಾರಿದೆ.ಇದನ್ನೂ ಓದಿರಿರಮೇಶ್​ ಜಾರಕಿಹೊಳಿಗೆ ಕರೊನಾ ಪಾಸಿಟಿವ್​, ಕಾಂಗ್ರೆಸ್​ ಕಿಡಿ
ಆರೋಪಿ ಮಾಜಿ ಮಂತ್ರಿಯನ್ನು ವಿಚಾರಣೆಗೆ ಕರೆಸಿ ಹಿಂಬಾಗಿಲ ಮೂಲಕ ಕಳಿಸಿಕೊಡುತ್ತಾರೆ. ಸಂತ್ರಸ್ತೆಗೆ ವಿಶ್ರಾಂತಿಯೂ ನೀಡದಂತೆ ಸತತ ವಿಚಾರಣೆ ನಡೆಸುತ್ತಾರೆ. ಆರೋಪಿಯನ್ನು ಕರೆದುಕೊಂಡು ಹೋಗಿ ಮಹಜರು ಮಾಡುವ ಬದಲಿಗೆ ಸಂತ್ರಸ್ತೆಯನ್ನು ಕಾಡಿಸಿ ಮಹಜರು ನಡೆಸಲಾಗುತ್ತಿದೆ. ಆರೋಪಿಯ ಕುಟುಂಬ, ಆರೋಪಿ ವಾಸಿಸುತ್ತಿದ್ದ ಸ್ಥಳ, ಬಳಸುತ್ತಿದ್ದ ಮೊಬೈಲ್ ಮುಂತಾದವುಗಳನ್ನು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಇಲ್ಲಿ ಎಲ್ಲವೂ ಉಲ್ಟಾ, ದೂರು ನೀಡಿದ ಸಂತ್ರಸ್ತೆಯನ್ನೇ ಆರೋಪಿ ಎನ್ನುವಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್​, ಸಂತ್ರಸ್ತೆಯ ಪರವಾಗಿ ನಿಂತಿದೆ.ಇದನ್ನೂ ಓದಿರಿಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ
ಆರೋಪಿಯ ಕುಟುಂಬದ ವಿಚಾರಣೆ ಮಾಡದೆ ಸಂತ್ರಸ್ತೆಯ ಕುಟುಂಬದ ವಿಚಾರಣೆ ನಡೆಸುತ್ತಿದೆ. ಆರೋಪಿಯ ದೂರಿನಲ್ಲಿ ಸಂತ್ರಸ್ತೆಯ ಹೆಸರಿಲ್ಲದಿದ್ದರೂ ಯುವತಿಯೇ ಆರೋಪಿ ಎಂಬಂತೆ ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತೆಯ ದೂರಿನಲ್ಲಿ ಆರೋಪಿ ಹೆಸರು ನೇರವಾಗಿ ಉಲ್ಲೇಖವಿದೆ. ಆದ್ರೂ ಬಂಧನವಿಲ್ಲ, ಸಮರ್ಪಕ ವಿಚಾರಣೆಯೂ ಇಲ್ಲ. ಆರೋಪಿಯನ್ನ ಬಂಧಿಸದೆ ಚುನಾವಣಾ ಪ್ರಚಾರಕ್ಕೆ ಸ್ವತಃ ಸಿಎಂ ಕರೆಯುತ್ತಾರೆ. ಅವರದ್ದು ತಪ್ಪಿಲ್ಲ ಎಂದು ಕ್ಲೀನ್ ಚಿಟ್ ನೀಡುತ್ತಾರೆ ಎಂದು ಸರಣಿ ಟ್ವೀಟ್​ ಮೂಲಕ ಕಾಂಗ್ರೆಸ್​ ಕಿಡಿಕಾರಿದೆ.
ನಾವೆಲ್ಲ ಆರೋಪಿ ಬೆಂಬಲಕ್ಕಿದ್ದೇವೆ ಎಂದು ಹಲವು ಸಚಿವರು ಹೇಳುತ್ತಾರೆ. ಇದೆಲ್ಲವೂ ಆರೋಪಿಯನ್ನು ಬಿಜೆಪಿ ರಕ್ಷಿಸುತ್ತಿದೆ ಎಂಬುದಕ್ಕೆ ನಿದರ್ಶನ. ಮುಖ್ಯಮಂತ್ರಿಯವರೇ ಅತ್ಯಾಚಾರ ಆರೋಪಿಯದ್ದು ತಪ್ಪಿಲ್ಲ, ಷಡ್ಯಂತ್ರ ನಡೆಸಲಾಗಿದೆ ಎಂದು ಹೇಳಿದ್ದಾರೆ. ಸಿಎಂ ಅವರೇ ನಿಮಗೆ ಹೇಗೆ ಅದು ಷಡ್ಯಂತ್ರ ಅನಿಸಿತು? ತಮ್ಮಲ್ಲಿ ಅದಕ್ಕಿರುವ ಸಾಕ್ಷ್ಯಗಳೇನು ಎನ್ನುವುದನ್ನ ಎಸ್​ಐಟಿ ಮುಂದೆ ಹಾಜರಾಗಿ ತಿಳಿಸಿಬಿಡಿ ಸ್ವಾಮಿ. ಪ್ರಕರಣ ಇತ್ಯರ್ಥವಾಗಿಬಿಡಲಿ ಎಂದು ರಾಜ್ಯ ಸರ್ಕಾರ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಕೊರಗಜ್ಜನ ಕ್ಷೇತ್ರದಲ್ಲಿ ಮೂತ್ರ ವಿಸರ್ಜಿಸಿದವ ರಕ್ತಕಾರಿ ಸತ್ತ ಬೆನ್ನಲ್ಲೇ ಕೊಂಡಾಣದಲ್ಲಿ ಮತ್ತೊಂದು ಹೀನ ಕೃತ್ಯ ಬಯಲು

2004ರಲ್ಲಿ ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಕುಮಾರಸ್ವಾಮಿ ಇವತ್ತು ತುಂಬಿದ ಕೊಡ! ಅಂದಿನ ಹಣದ ರಹಸ್ಯ ಕೆದಕಿದ ಜಮೀರ್

ಸಿಡಿ ಕೇಸ್​ಗೆ ಟಕ್ಕರ್​ ಕೊಟ್ಟ ವಕೀಲೆ ಮೀರಾ ರಾಘವೇಂದ್ರ!

ಸುಳ್ಳು‌ ದೂರಿಗೆ ನನ್ನಿಂದ ಹೆಂಡತಿ‌-ಮಕ್ಕಳು ದೂರವಾದರು: ಆರ್​. ಅಶೋಕ್​ ವಿರುದ್ಧ ಸಿಡಿ ಲೇಡಿ ವಕೀಲ ಜಗದೀಶ್​ ವಾಗ್ದಾಳಿ

ಬೆಂಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
