ಬೆಂಗಳೂರು: ಹಠಾತ್ ಬೆಳವಣಿಗೆಯಲ್ಲಿ ಹೊಸ ತಿರುವು ಪಡೆದುಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಯಾರಿಗೆ ಉರುಳಾಗುತ್ತದೆಂಬ ಕುತೂಹಲ ಸೃಷ್ಟಿಯಾಗಿದೆ. ಸಿಡಿಯಲ್ಲಿರುವುದು ನಾನೇ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಯಿಂದ ಯುವತಿ ಹಾಗೂ ತಲೆಮರೆಸಿಕೊಂಡಿರುವ ನರೇಶ್ ಗೌಡ, ಶರಣ್​ಗೆ ಹನಿಟ್ರಾ್ಯಪ್ ಉರುಳು ಸುತ್ತಿಕೊಳ್ಳುವ ಸಾಧ್ಯತೆ ಇದೆ. ಇನ್ನೊಂದೆಡೆ ಯುವತಿ ಹೇಳಿಕೆಯನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದರೆ ರಮೇಶ್ ಜಾರಕಿಹೊಳಿಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ.
ಸಿಡಿಯಲ್ಲಿರುವ ಯುವತಿ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ಕೊಟ್ಟ ಕೇಸ್​ಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್​ಐಟಿ) ಈಗಾಗಲೆ ರಮೇಶ್ ಜಾರಕಿಹೊಳಿ ಹಾಗೂ ಯುವತಿಯ ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಜಾರಕಿಹೊಳಿ ಸಹಮತದಿಂದ ಇಬ್ಬರೂ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಹೇಳಿದರೂ, ಯುವತಿ ಮಾತ್ರ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದಾಳೆ.
ಮತ್ತೊಂದೆಡೆ ಮೊಬೈಲ್ ವಾಟ್ಸ್ ಆಪ್​ಗೆ ಅಶ್ಲೀಲ ವಿಡಿಯೋದ 2 ತುಣುಕು ಕಳುಹಿಸಿ ಹಣಕ್ಕೆ ಯುವತಿ ಬೇಡಿಕೆ ಇಟ್ಟಿದ್ದಾಗಿ ರಮೇಶ್ ಜಾರಕಿಹೊಳಿ ಎಸ್​ಐಟಿ ವಿಚಾರಣೆ ವೇಳೆ ಹೇಳಿದ್ದಾರೆ ಎಂದು ಗೊತ್ತಾಗಿದೆ. ಹಣ ಕೊಡಲು ಒಪ್ಪದೆ ಇದ್ದಾಗ ವಿಡಿಯೋ ಬಹಿರಂಗಗೊಳಿಸಿದ್ದಾಳೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಗೆ ಕೊಟ್ಟಿರುವ ದೂರಿನಲ್ಲೂ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆಂದು ಆರೋಪ ಮಾಡಿದ್ದರು. ಸದ್ಯ ಆ ಪ್ರಕರಣದ ವಿಚಾರಣೆ ಇನ್ನೂ ಕೈಗೆತ್ತಿಕೊಂಡಿಲ್ಲ.
ತನಿಖೆ ಆರಂಭವಾದರೆ ಈ ಪ್ರಕರಣದಲ್ಲಿ ಸಿಡಿ ಯುವತಿ ಹಾಗೂ ಪ್ರಕರಣದಲ್ಲಿ ಶಾಮೀಲಾಗಿ ನಾಪತ್ತೆಯಾಗಿರುವ ಕಿಂಗ್​ಪಿನ್ ನರೇಶ್ ಗೌಡ, ಹ್ಯಾಕರ್ ಶ್ರವಣ್ ಮತ್ತು ಗ್ರೖೆನೈಟ್ ಉದ್ಯಮಿ ಶಿವಕುಮಾರ್​ನನ್ನು ಆರೋಪಿಯಾಗಿಸುವ ಸಾಧ್ಯತೆ ಹೆಚ್ಚಾಗಿದೆ. ನಾಪತ್ತೆಯಾದ ಶಂಕಿತರ ಮೂಲಕವೇ ಸಿಡಿ ಬಹಿರಂಗಗೊಂಡಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯ ಎಸ್​ಐಟಿ ಕೈ ಸೇರಿದೆ. ಹೀಗಾಗಿ ಈ ಪ್ರಕರಣವು ಮುಂದೆ ಹನಿಟ್ರಾ್ಯಪ್ ರೂಪ ಪಡೆದುಕೊಳ್ಳಬಹುದು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
– ಪದೇಪದೆ ಹಣಕ್ಕೆ ಬೇಡಿಕೆ?
ಯುವತಿ ವಾಟ್ಸ್​ಆಪ್​ನಲ್ಲಿ ಅಶ್ಲೀಲ ವಿಡಿಯೋ ಕಳುಹಿಸಿ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಳು. ಮರ್ಯಾದೆಗೆ ಅಂಜಿ ಹಣ ಕೊಟ್ಟಿದ್ದೆ. ಪದೇ ಪದೆ ಹಣಕ್ಕೆ ಒತ್ತಾಯಿಸಿದ್ದಾಗ ನಿರಾಕರಿಸಿದೆ. ಕೆಲ ದಿನಗಳ ಬಳಿಕ ಆಕೆಯ ಪರವಾಗಿ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತ ಅಂತ ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಆಗಲೂ ಹಣ ನೀಡಲು ಒಪ್ಪದಿದ್ದಾಗ ಅಶ್ಲೀಲ ವಿಡಿಯೋಗಳು ಬಹಿರಂಗ ಮಾಡಿದ್ದಾರೆ. ರಾಜಕೀಯವಾಗಿ ನನ್ನನು ಮುಗಿಸಲು ದೊಡ್ಡ ಪಿತೂರಿ ಎಂದು ಮಾಜಿ ಸಚಿವರು ಆರೋಪಿಸಿದ್ದಾರೆ ಎಂದು ಎಸ್​ಐಟಿ ಮೂಲಗಳು ತಿಳಿಸಿವೆ.
– ಅತ್ಯಾಚಾರ ದೂರು
ಉದ್ಯೋಗದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಯುವತಿ ದಾಖಲೆ ಸಮೇತ ದೂರು ಕೊಟ್ಟಿದ್ದಾಳೆ. ಈ ಬಗ್ಗೆ ಕೋಟ್​ನಲ್ಲಿ ನ್ಯಾಯಾಧೀಶರ ಮುಂದೆಯೂ ಹೇಳಿಕೆ ಕೊಟ್ಟಿದ್ದಾಳೆ. ಕಬ್ಬನ್​ಪಾರ್ಕ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಮಾಜಿ ಸಚಿವರು ಹೇಳಿಕೆ ಬದಲಾಯಿಸಿದ ಪರಿಣಾಮ ತನಿಖೆಗೆ ಸಹಾಯವಾಗಬಹುದು. ಆದರೆ, ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಪರಿಗಣಿಸಲು ಆಗುವುದಿಲ್ಲ. ಹೀಗಾಗಿ ಜಾರಕಿಹೊಳಿಗೂ ಮುಂದೆ ಬಂಧನ ಭೀತಿ ತಪ್ಪಿದ್ದಲ್ಲ ಎಂದೂ ಹೇಳಲಾಗುತ್ತಿದೆ.
– ಯುವತಿ ಪದವಿ ಪೂರೈಸಿಲ್ಲ
ಸಿಡಿಯಲ್ಲಿರುವ ಯುವತಿ ಇಂಜಿನಿಯರಿಂಗ್ ಪದವಿಯನ್ನೇ ಪೂರೈಸಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಆಕೆ ಇಂಜಿನಿಯರಿಂಗ್ ಪದವಿಗೆ ಸೇರಿದರೂ 20ಕ್ಕೂ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಾಳೆ. ಹೀಗಾಗಿ ಬೆಂಗಳೂರಿನಲ್ಲಿ ಟೆಲಿಕಾಲರ್ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಪದವಿ ಪಡೆಯದಿದ್ದರೂ ಸರ್ಕಾರಿ ಕೆಲಸದ ನೆಪದಲ್ಲಿ ಸಚಿವರನ್ನು ಭೇಟಿಯಾಗಿದ್ದಳು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
