ಬೆಂಗಳೂರು:ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿರುವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಕೇಸ್​ನ ‘ಸಂತ್ರಸ್ತ’ ಯುವತಿ ವಸಂತನಗರ ಗುರುನಾನಕ್​ ಭವನದಲ್ಲಿರುವ ಕೋರ್ಟ್​ನ ನ್ಯಾಯಾಧೀಶರ ಮುಂದೆ ನಿನ್ನೆ (ಮಂಗಳವಾರ) ಮಧ್ಯಾಹ್ನ 2.30ಕ್ಕೆ ಹಾಜರ್​ ಆಗಿ ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ನಿನ್ನೆ ಭಾರಿ ಪೊಲೀಸ್​ ಭದ್ರತೆ ನಡುವೆ ಕೊರ್ಟ್​ಗೆ ಹಾಜರಾದ ಯುವತಿ, 164 ಅಡಿಯಲ್ಲಿ ನ್ಯಾಯಾಧೀಶರಿಗೆ ಹೇಳಿಕೆ ದಾಖಲಿಸಿದ್ದಾಳೆ. ಇದಾದ ಬಳಿಕ ಎಸ್​ಐಟಿ ಅಧಿಕಾರಿಗಳು ಸಿಡಿ ಲೇಡಿಯನ್ನು ವಶಕ್ಕೆ ಪಡೆದರು. ಎಸ್​ಐಟಿ ವಿಚಾರಣೆ ವೇಳೆ ರಮೇಶ್​​ ಜಾರಕಿಹೊಳಿ ಪರಿಚಯವಾಗಿದ್ದು ಹೇಗೆ? ಯಾವಾಗ ಪರಿಚಯ? ನಂಬರ್​ ಯಾರು ಕೊಟ್ಟರು? ಬೆಡ್​ ರೂಂ ಮೂವ್​ಮೆಂಟ್​ ಹೇಗಾಯ್ತು? ಎಂಬ ಮುಂತಾದ ಪ್ರಶ್ನೆಗಳ ಜತೆಗೆ ವಿಡಿಯೋ ಹರಿಬಿಟ್ಟವರು ಮತ್ತು ಬಾಯ್​ಫ್ರೆಂಡ್​ ಬಗ್ಗೆ ಸಿಡಿ ಲೇಡಿ ಬಾಯ್ಬಿಟ್ಟಿರುವ ಎಕ್ಸ್​ಕ್ಲೂಸಿವ್ ಮಾಹಿತಿ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದೆ.
ಎಸ್ಐಟಿ ಅಧಿಕಾರಿಗಳ ಪ್ರಶ್ನೆಗೆ ಯುವತಿ ಕೊಟ್ಟ ಉತ್ತರ ಹೀಗಿದೆ…
ಎಸ್ಐಟಿ:ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿಮಗೆ ಹೇಗೆ ಪರಿಚಯ ….?
ಯುವತಿ:ಅಣೆಕಟ್ಟೆಗಳ ಶೂಟಿಂಗ್ ವಿಚಾರವಾಗಿ ಪರಿಚಯವಾಯ್ತು.
ಎಸ್ಐಟಿ:ಯಾವಾಗ ಈ ಪರಿಚಯವಾಗಿದ್ದು?
ಯುವತಿ:ಕಳೆದ ಜುಲೈನಲ್ಲಿ ಪರಿಚಯವಾಯಿತು.
ಎಸ್ಐಟಿ:ಫಸ್ಟ್ ಟೈಂ ಯಾವಾಗ ವಿಧಾನಸೌಧಕ್ಕೆ ಹೇಗೆ ಹೋದ್ರಿ?
ಯುವತಿ:3:30 ಕ್ಕೆ ಪಾಸ್ ಕೊಡ್ತಿದ್ರು, ಅದನ್ನ ತೆಗೆದುಕೊಂಡು ಹೋದೆ.
ಎಸ್ಐಟಿ:ಅವ್ರೆ ನಂಬರ್ ಕೊಟ್ರಾ?
ಯುವತಿ:ಮೊಬೈಲ್ ನಂಬರ್ ಕೊಟ್ಟು ಯಾರಿಗೂ ಹೇಳಬಾರದು ಅಂತಾ ಮಲ್ಲೇಶ್ವರಂ ಪಿಜಿ ಅಂತಾ ಸೇವ್ ಮಾಡಿಸಿದ್ರು.
ಎಸ್ಐಟಿ:ಬೆಡ್ ರೂಂ ಮೂವ್ ಮೆಂಟ್ ಹೇಗೆ ಆಯ್ತು?
ಯುವತಿ:ಸಹಕಾರ ನೀಡ್ಬೇಕು ಅಂತಾ ನನ್ನ ಮೇಲೆ ಎರಡು ಮೂರು ಸಲ ದೈಹಿಕ ಸಂಪರ್ಕ ಬೆಳೆಸಿದ್ರು.
ಎಸ್ಐಟಿ:ನೀವು ಯಾಕೆ ವಿರೋಧ ಮಾಡ್ಲಿಲ್ಲ?
ಯುವತಿ:ನಮ್ಮ ಭಾಗದಲ್ಲಿ ಅವರು ಪ್ರಭಾವಿ ಸಚಿವರು. ಬಾಯಿಗೆ ಬಂದಂಗೆ ಬೈಯೋರು. ಏನಾದ್ರು ಮಾಡ್ತಾರೆ ಅಂತಾ ಭಯಗೊಂಡು ಸುಮ್ಮನಿದ್ದೆ. ಆ ವೇಳೆ ನನಗೆ ನನ್ನ ಮೇಲೆಯೇ ಜಿಗುಪ್ಸೆ, ಭಯ ಕಾಡಿತಿತ್ತು.
ಎಸ್​ಐಟಿ:ಈ ವಿಚಾರವನ್ನ ನಿಮ್ಮ ತಾಯಿಯ ಬಳಿ ಯಾಕೆ ಹೇಳಲಿಲ್ಲ?
ಯುವತಿ:ಹೇಗೆ ಹೇಳೋಕೆ ಸಾಧ್ಯ ಸಾರ್.. ಯಾವ ಮಗಳು ತಾನೆ ತನ್ನ ಪೋಷಕರ ಬಳಿ ಇಂಥಾ ವಿಚಾರ ಹೇಳಿಕೊಳ್ಳೋಕೆ ಸಾಧ್ಯ. ಅದೂ ಅಲ್ಲದೆ ಸಂಭೋಗ ನಡೆಸುವುದನ್ನು ರಮೇಶ್ ಜಾರಕಿಹೊಳಿ ವೀಡಿಯೊ ಮಾಡಿ ಇಟ್ಕೊಂಡಿದ್ದರು.
ಎಸ್ಐಟಿ:ಎಲ್ಲೆಲ್ಲಿ ಕರೆಸಿಕೊಂಡಿದ್ರು?
ಯುವತಿ:ಆಗ್ಗಾಗ್ಗೆ ಕಾಲ್ ಮಾಡಿ ಬರೋಕೆ ಹೇಳ್ತಿದ್ರು. ಭಯಬಿದ್ದು ಹೋಗ್ತಿದ್ದೆ. ಅಲ್ಲದೆ ಅಶ್ಲೀಲವಾಗಿ ಬೈತಿದ್ರು. ನನಗೆ ಹಿಂಸೆಯಾಗಿ ಈ ವಿಚಾರವನ್ನ ಶ್ರವಣ್ ಬಳಿ ಹೇಳಿದೆ.
ಎಸ್ಐಟಿ:ಶ್ರವಣ್ ಹೇಗೆ ಪರಿಚಯ?
ಯುವತಿ:ಶ್ರವಣ್ ನನ್ನ ಕ್ಲಾಸ್​ಮೆಟ್. ವಿಟಿಯು ಪ್ರೊಟೆಸ್ಟ್ ವೇಳೆ ಪರಿಚಯವಾಗಿದ್ದ. ಶ್ರವಣ್ ನರೇಶಣ್ಣನನ್ನ ಪರಿಚಯ ಮಾಡಿಸಿದ್ರು. ನನಗೆ ಆಗ್ತಿರೊ ಹಿಂಸೆ ಬಗ್ಗೆ ಹೇಳಿದ್ದೆ. ಡಾಕ್ಯುಮೆಂಟ್ಸ್ ಇಲ್ಲದೆ ಏನು ಆಗೊಲ್ಲಮ್ಮ ಅಂದ್ರು. ಸೊ ನಾನು ವೀಡಿಯೊ ಮಾಡ್ಕೊಂಡು ಆರ್​ಟಿ ನಗರದ ಪಿಜಿಯಲ್ಲಿ ಇಟ್ಟಿದ್ದೆ. ಇನ್ನೊಂದು ಕಾಪಿ ನರೇಶಣ್ಣನ ಕೈಗೆ ಕೊಟ್ಟಿದ್ದೆ. ವೀಡಿಯೊ ಯಾರು ಹೊರಗೆ ಬಿಟ್ರು ಅಂತಾ ಗೊತ್ತಿಲ್ಲ.
ಎಸ್ಐಟಿ:ನಿಮ್ಮ ಬಾಯ್ ಫ್ರೆಂಡ್ ಆಕಾಶ್ ಬೇರೆಯದ್ದೇ ಹೇಳಿಕೆ ಕೊಟ್ಟಿದ್ದಾನಲ್ಲ
ಯುವತಿ:ಅವನಿಗೆ ಇದ್ರ ಬಗ್ಗೆ ಏನೂ ಗೊತ್ತಿರಲಿಲ್ಲ.
ಎಸ್ಐಟಿ:ನಿಮ್ಮ ಪೋಷಕರು ನೀವು ಒತ್ತಡದಲ್ಲಿದ್ದೀರಿ ಅಂತಾ ಹೇಳಿದ್ದಾರಲ್ಲ
ಯುವತಿ:ನನ್ನ ತಂದೆ ಫಸ್ಟ್ ಟೈಂ ನಮ್ಮ ಜಾತಿ ಎಸ್ ಟಿ ಬಗ್ಗೆ ಮಾತಾಡಿದ್ದಾರೆ. ಹೇಳಿಕೆ ಕೊಡಬಾರದು ಅಂತಾ ಒತ್ತಡ ಹಾಕಿ ಹೀಗೆ ಮಾಡಿಸಿದ್ದಾರೆ.
ಎಸ್ಐಟಿ:ಕಂಪ್ಲೆಂಟ್ ನೀವೇ ಬರೆದಿದ್ದಾ? ವಕೀಲರನ್ನ ಹೇಗೆ ಸಂಪರ್ಕ ಮಾಡಿದ್ರಿ? ಬೆಂಗಳೂರಲ್ಲೇ ಭೇಟಿ ಮಾಡಿ ಕೊಟ್ರಾ? ಬೆಂಗಳೂರಲ್ಲೇ ಇದ್ರಾ?
ಯುವತಿ:ಕಂಪ್ಲೆಂಟ್ ನಾನೇ ಬರೆದಿದ್ದು ಬಟ್ ಎಲ್ಲಿ ಕೊಟ್ಟೆ ಅಂತಾ ಹೇಳೋಕೆ ಆಗಲ್ಲ…
28 ದಿನದ ಬಳಿಕ ಕೋರ್ಟ್​ನಲ್ಲಿ ಸಿಡಿ ಲೇಡಿ ಪ್ರತ್ಯಕ್ಷ! ರಮೇಶ್​ ಜಾರಕಿಹೊಳಿ ಎದೆಯಲ್ಲಿ ಢವಢವ

ನಾನು ನಂದಿ ಅಲ್ಲ, ಜಗದೀಶ! ನಾನು ಮೂರನೇ ಕಣ್ಣು ಬಿಟ್ರೆ ಭಸ್ಮ ಆಗ್ತೀರಿ: ಸಿಡಿ ಲೇಡಿ ವಕೀಲರ ಖಡಕ್​ ವಾರ್ನಿಂಗ್​ ಯಾರಿಗೆ?

ಸುಳ್ಳು‌ ದೂರಿಗೆ ನನ್ನಿಂದ ಹೆಂಡತಿ‌-ಮಕ್ಕಳು ದೂರವಾದರು: ಆರ್​. ಅಶೋಕ್​ ವಿರುದ್ಧ ಸಿಡಿ ಲೇಡಿ ವಕೀಲ ಜಗದೀಶ್​ ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − eight =
Remember me
