ಬೆಂಗಳೂರು:ಸಿಡಿ ಲೇಡಿ ಬುಧವಾರ ವಿಚಾರಣೆಗೆ ಹಾಜರಾಗುವ ಹಿನ್ನೆಲೆಯಲ್ಲಿ ಆಡುಗೋಡಿ ತಾಂತ್ರಿಕ ವಿಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಯುವತಿಯು ಮಂಗಳವಾರ ರಾತ್ರಿ ಪರಿಚಿತ ಸ್ನೇಹಿತೆ ಮಹಿಳಾ ಲಾಯರ‌ವೊಬ್ಬ ಮನೆಯಲ್ಲಿ ನೆಲೆಸಿದ್ದಳು. ಪೊಲೀಸ್ ಭದ್ರತೆಯಲ್ಲೇ ಯುವತಿಯನ್ನು ಆಕೆ ವಾಸಿಸುವ ಮನೆಗೆ ಬಿಡಲಾಗಿದೆ. ಇದೀಗ ಮತ್ತೆ ಪೊಲೀಸ್ ಭದ್ರತೆಯಲ್ಲೇ ಆಕೆಯ ವಕೀಲರ ಸಮ್ಮುಖದಲ್ಲಿ ಯುವತಿಯನ್ನು ಆಡುಗೋಡಿಗೆ ಕರೆತರುವ ಸಾಧ್ಯತೆಗಳಿವೆ.
ಇದನ್ನೂ ಓದಿರಿ:ಹೋಟೆಲ್​ಗೆ ಪೊಲೀಸರು ಎಂಟ್ರಿ ಕೊಡುತ್ತಿದ್ದಂತೆ ವಧು-ವರ ಎಸ್ಕೇಪ್​! ಕಾರಣ ಕೇಳಿದ್ರೆ ಹುಬ್ಬೇರುವುದು ಖಂಡಿತ!
ಯುವತಿ ಭದ್ರತೆಗಾಗಿ 8 ಮಹಿಳಾ ಪೊಲೀಸರ ತಂಡ ರಚಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಆಗುವವರೆಗೆ ನಮ್ಮ ರಕ್ಷಣೆಯಲ್ಲಿರಬೇಕು. ಯಾವುದೇ ತೊಂದರೆ ಆಗದಂತೆ ಸೂಕ್ತ ರಕ್ಷಣೆ ಒದಗಿಸುತ್ತೇವೆ. ನೀವು ಬಯಸಿದರೆ ಮಹಿಳಾ ಸಾಂತ್ವನ ಕೇಂದ್ರದಲ್ಲೂ ಇರಬಹುದು. ಇಲ್ಲವಾದರೆ ನೀವು ಬಯಸಿದ ಸ್ಥಳದಲ್ಲೂ ಇರಬಹುದು ಎಂದು ಎಸ್‌ಐಟಿ ತನಿಖಾಧಿಕಾರಿಗಳು ಮಂಗಳವಾರ ಯುವತಿಯ ವಿಚಾರಣೆ ನಡೆಸಿದ ಬಳಿಕ ಹೇಳಿದ್ದರು.
ಯುವತಿ ಪರಿಚಿತ‌ ಮಹಿಳಾ ಲಾಯರ್ ಮನೆಯಲ್ಕಿ ವಾಸವಾಗಲು ಇಚ್ಚಿಸಿದ್ದಳು. ಎಸ್ಐಟಿ ವಿಚಾರಣೆ ಮುಗಿದ ಬಳಿಕ ರಾತ್ರಿ 8 ಗಂಟೆಗೆ ಆಡುಗೋಡಿ ಟೆಕ್ನಿಕಲ್ ಸೆಂಟರ್‌ನಿಂದ ಯುವತಿ ನೀಡಿದ ವಿಳಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕರೆದುಕೊಂಡು ಹೋಗಲಾಗಿತ್ತು. ಯುವತಿ ವಾಸವಿರುವ ನಿವಾಸಕ್ಕೂ ಹೆಚ್ಚಿನ ಭದ್ರತೆ ನೀಡಲಾಗಿದೆ.
ಸಿಡಿ ಲೇಡಿಗೆ ವೈದ್ಯಕೀಯ ತಪಾಸಣೆಗೆ ಸಿದ್ಧತೆ

28 ದಿನದ ಬಳಿಕ ಕೋರ್ಟ್​ನಲ್ಲಿ ಸಿಡಿ ಲೇಡಿ ಪ್ರತ್ಯಕ್ಷ! ರಮೇಶ್​ ಜಾರಕಿಹೊಳಿ ಎದೆಯಲ್ಲಿ ಢವಢವ

ಸಿಡಿ ಲೇಡಿ ಕೋರ್ಟ್​ಗೆ ಬರಲು ದಿನಾಂಕ ಮತ್ತು ಸಮಯ ಫಿಕ್ಸ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
