ಬೆಂಗಳೂರು:ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಜತೆ ಸಿಡಿ ಲೇಡಿ ವಿಡಿಯೋ ಕಾಲ್​ನಲ್ಲಿ ಮಾತನಾಡಲು ಬಳಸಿದ್ದ ಮೊಬೈಲ್​ ಅನ್ನು ಎಸ್​ಐಟಿ ಅಧಿಕಾರಿಗಳು ಜಪ್ತಿ ಮಾಡಿರುವುದಾಗಿ ತಿಳಿದುಬಂದಿದೆ.
ವಿಡಿಯೋ ರೆಕಾರ್ಡ್​ ಮಾಡಿದ ಮೊಬೈಲ್ ಯಾವುದು? ಆ ಸಮಯದಲ್ಲಿ ಸಿಮ್ ಕಾರ್ಡ್ ಯಾವುದಿತ್ತು? ಎಂಬುದರ ಎಲ್ಲಾ ಮಾಹಿತಿಯನ್ನು ಎಸ್ಐಟಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ವಿಡಿಯೋ ಕಾಲ್ ಮಾಡಿದ್ದ ಮೊಬೈಲ್ ಕೂಡ ವಶಕ್ಕೆ ಪಡೆಯಲಾಗಿದೆ. ಮೊಬೈಲ್ ಅನ್ನು ಸ್ವತಃ ಯುವತಿಯೇ ಕೊಟ್ಟಿದ್ದಾಳೆಂಬ ಮಾಹಿತಿ ಇದೆ. ಪಿಜಿಯ ಕಪಾಟಿನಲ್ಲಿ ಸ್ವಿಚ್ ಆಫ್ ಮಾಡಿ ಬಚ್ಚಿಟ್ಟಿದ್ದ ಮೊಬೈಲ್​ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿರಿ:ಸಿಡಿ ಲೇಡಿ ಉಳಿದುಕೊಂಡಿದ್ದ ಪಿಜಿಯಲ್ಲಿ ತನಿಖಾಧಿಕಾರಿಗಳು ಜಪ್ತಿ ಮಾಡಿದ ವಸ್ತುಗಳ್ಯಾವುವು?
ಇದಕ್ಕೂ ಮುನ್ನ ಪಿಜಿ‌ ಮಾಲೀಕರಿಗಿಂತ ಮುಂಚಿತವಾಗಿ ಯುವತಿಯಿಂದ ಅಧಿಕಾರಿಗಳು ಮಾಹಿತಿ ಪಡೆದರು. ಪಿಜಿಯಲ್ಲಿ ಆಕೆಯ ಪ್ರತಿಯೊಂದು ಚಲನಾವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಯುವತಿ ಹೇಳಿಕೆ ಮೇಲೆ ಮಾಲೀಕರಿಗೆ ಪ್ರಶ್ನೆ ಮಾಡಿದ್ದು, ಆಕೆ ಹೇಳಿದ್ದೆಲ್ಲವೂ ನಿಜವಾ ಎಂದು ಮಾಲೀಕರಿಂದಲೂ ಸ್ಪಷ್ಟನೆ ಪಡೆದಿದ್ದಾರೆ. ಯುವತಿ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಸಹ ಮಾಡಲಾಗಿದೆ. ಇದರ ಜತೆಗೆ ಹೇಳಿದ ಎಲ್ಲಾ ಹೇಳಿಕೆಯನ್ನು ಬರವಣಿಗೆ ಮೂಲಕವೂ ದಾಖಲಿಸಿಕೊಂಡು ಸಹಿ ಪಡೆದಿದ್ದಾರೆ.(ದಿಗ್ವಿಜಯ ನ್ಯೂಸ್​)
ಕೆಲ್ಸದಿಂದ ಮನೆಗೆ ಬಂದವನು ಪತ್ನಿಗಾಗಿ ಹುಡುಕಾಡುವಾಗ ಕಾದಿತ್ತು ಶಾಕ್​: ಇದು ಅತಿ ಕೆಟ್ಟ ಅಕ್ರಮ ಸಂಬಂಧವಂತೆ!

PHOTOS! 45ರ ಹರೆಯದಲ್ಲೂ ಬಿಕಿನಿ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ “ಓ ನನ್ನ ನಲ್ಲೆ”!

ಬುರ್ಜ್ ಖಲೀಫಾದಲ್ಲಿ ಬ್ರೇಕ್​​ಫಾಸ್ಟ್, ಗೋಲ್ಡನ್ ಕಾಫಿ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
