ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಹಗರಣ ಕೇಸ್​ಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಸಿಕ್ಕಿದೆ. ಸಂತ್ರಸ್ತೆಯ ಪರವಾಗಿ ಪೊಲೀಸ್​ ಠಾಣೆಗೆ ಬಂದು ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕೊಟ್ಟ ಸ್ಟೇಟ್​ಮೆಂಟ್ ಮೇರೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸಿಡಿ ಬಿಡುಗಡೆಗೂ ಮುನ್ನಾದಿನ ಅಂದರೆ ಮಾ.1ರಂದು ಸಂತ್ರಸ್ತೆ ಕುಟುಂಬದ ಸ್ನೇಹಿತನನ್ನ ದಿನೇಶ್ ಕಲ್ಲಹಳ್ಳಿ ಭೇಟಿ ಮಾಡಿದ್ದು ಬೆಂಗಳೂರಿನ ಗಾಂಧಿನಗರದಲ್ಲಿವ ರಾಮಕೃಷ್ಣ ಲಾಡ್ಜ್​ನಲ್ಲಿ. ಆ ವ್ಯಕ್ತಿ ಬಳಿ ಇದ್ದ ಸಿಡಿಯನ್ನದಿನೇಶ್ ಕಲ್ಲಹಳ್ಳಿ ಅಲ್ಲೇ ಪಡೆದಿದ್ದರಂತೆ.ಇದನ್ನೂ ಓದಿರಿರಮೇಶಣ್ಣನ ಮರ್ಯಾದೆ ತೆಗೆಯಲು ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ, ದಿನೇಶ್ ಕಲ್ಲಹಳ್ಳಿ ಕೇವಲ ದಾಳ…
ಜಾರಕಿಹೊಳಿ ಕೇಸ್​ ಬೆನ್ನತ್ತಿದ ಕಬ್ಬನ್ ಪಾರ್ಕ್ ಹಾಗೂ ಸಿಸಿಬಿ ಪೊಲೀಸರು ನಿನ್ನೆ ಸಂಜೆ ರಾಮಕೃಷ್ಣ ಲಾಡ್ಜ್​ಗೆ ಭೇಟಿ ನೀಡಿದ್ದಾರೆ. ಅಲ್ಲದೆ ಲಾಡ್ಜ್​ನಲ್ಲಿದ್ದ ಸಿಸಿ ಕ್ಯಾಮರಾ, ಡಿವಿಆರ್ ವಶಕ್ಕೆ ಪಡೆದಿದ್ದಾರೆ. ದಿನೇಶ್ ಕಲ್ಲಹಳ್ಳಿ ಭೇಟಿ ಮಾಡಿದ್ದ ವ್ಯಕ್ತಿ ಹಾಗೂ ಅವರಿಬ್ಬರು ಮಾತನಾಡುತ್ತಿರುವ ದೃಷ್ಯಗಳನ್ನ ಸಿಸಿಬಿ ಪಡೆದಿದೆ. ಅಲ್ಲದೆ ಲಾಡ್ಜ್​ನ ಸಿಬ್ಬಂದಿ ಬಳಿಯೂ ಮಾಹಿತಿ ಕಲೆ ಹಾಕಿದ್ದಾರೆ.
ದಿನೇಶ್​ ಕಲ್ಲಹಳ್ಳಿಗೆ ಸಿಡಿ ಕೊಟ್ಟ ದಿನ ಲಾಡ್ಜ್​ನಲ್ಲಿ ಕರ್ತವ್ಯದಲ್ಲಿದ್ದ ಎಲ್ಲರನ್ನೂ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವ್ಯಕ್ತಿಗಳ ಕುರಿತು ವಿಚಾರಣೆ ನಡೆಸಿರುವ ಪೊಲೀಸರು, ಈ ಹಿಂದೆ ಆ ವ್ಯಕ್ತಿ ಎಷ್ಟು ಬಾರಿ ಹೊಟೇಲ್​ಗೆ ಬಂದಿದ್ದಾರೆ? ದೃಶ್ಯದಲ್ಲಿ ಸೆರೆಯಾದ ವ್ಯಕ್ತಿ ಯಾರ ಜೊತೆ ಬಂದಿದ್ದ? ಆ ವ್ಯಕ್ತಿ ಬರೀ ಕೈಯಲ್ಲಿ ಬಂದಿದ್ದನೇ? ಅಥವಾ ಫೈಲ್ ಬ್ಯಾಗ್ ಏನಾದ್ರೂ ತಂದಿದ್ರಾ? ಎಂಬುದರ ಬಗ್ಗೆಯೂ ಖಾಕಿ ಪಡೆ ಮಾಹಿತಿ ಕಲೆ ಹಾಕಿದೆ.
ವಿಧಾನಸೌಧದಲ್ಲೇ ಶರ್ಟ್​ ಬಿಚ್ಚಿದ ಶಾಸಕ! ಸ್ಪೀಕರ್​ ಫುಲ್​ ಗರಂ

ರಮೇಶಣ್ಣನ ಮರ್ಯಾದೆ ತೆಗೆಯಲು ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ, ದಿನೇಶ್ ಕಲ್ಲಹಳ್ಳಿ ಕೇವಲ ದಾಳ…

ಇನ್ನೂ 19 ಜನರ ಸೆಕ್ಸ್​ ಸಿಡಿ ಇದೆ, ಒಬ್ಬ ಮಾಜಿ ಸಿಎಂ ಅದಕ್ಕಾಗಿಯೇ ರೆಸಾರ್ಟ್​ಗೆ ಹೋಗ್ತಾರೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
