ಬೆಂಗಳೂರು:ಮಾಜಿ ಸಚಿವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಕೇಸ್​ನ ಹಿಂದಿನ‌‌ ಮಾಸ್ಟರ್ ಪ್ಲಾನ್ ಒಂದೊಂದಾಗಿ ರಿವೀಲ್ ಆಗುತ್ತಲೇ ಇದೆ. ತನಿಖೆ ಚುರುಕುಗೊಳಿಸಿರುವ ಎಸ್​ಐಟಿ ತಂಡ ಸಿಡಿ ಗ್ಯಾಂಗ್​ನ ಬೆನ್ನಹಿಂದೆ ಬಿದ್ದಿದ್ದು, ಈ ಕೇಸ್​ ಕ್ಷಣಕ್ಕೊಂದು ಟ್ವಿಸ್ಟ್​ ಪಡೆಯುತ್ತಿದೆ.
ಸಿಡಿ‌ ಮಾಡೋಕು ಮುನ್ನವೇ ಯುವತಿ ಜತೆ ಸೇರಿಕೊಂಡ ಸಿಡಿ ಗ್ಯಾಂಗ್​, ಭರ್ಜರಿ ಪ್ಲಾನ್ ಮಾಡಿತ್ತು ಎನ್ನಲಾಗಿದೆ. ಡ್ರೋನ್​ ಮೂಲಕ ಡ್ಯಾಂ ಚಿತ್ರೀಕರಣ ಮಾಡಿ ಸಾಕ್ಷ್ಯಚಿತ್ರ ಮಾಡುವುದಾಗಿ ಅಂದಿನ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿಗೆ ಯುವತಿ ಮೂಲಕವೇ ಸಿಡಿ ಗ್ಯಾಂಗ್​ ಕಾಲ್ ಮಾಡಿಸಿತ್ತು. ಡ್ರೋನ್ ಹೆಸರಲ್ಲಿ ಕಲರ್ ಕಲರ್ ಕಾಗೆ ಹಾರಿಸಿ ಜಾರಕಿಹೊಳಿಗೆ ಗಾಳ ಹಾಕಲಾಗಿತ್ತು ಎನ್ನಲಾಗಿದೆ.ಇದನ್ನೂ ಓದಿರಿಊರೂರು ಸುತ್ತುತ್ತಿರೋ ‘ಸಿಡಿ ಲೇಡಿ’ ಈಗ ಎಲ್ಲಿದ್ದಾಳೆ? ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ
ಈ ಕುರಿತು ತನಿಖೆ ಕೈಗೊಂಡಿರುವ ಎಸ್​ಐಟಿ, ನಿಜಕ್ಕೂ ಸಾಕ್ಷ್ಯಚಿತ್ರ ಮಾಡಲು ಯುವತಿ ಮತ್ತು ತಂಡ ರೆಡಿಯಾಗಿತ್ತಾ? ಇಲ್ಲ ಹನಿಟ್ರ್ಯಾಪ್​ಗೆಂದೇ ಸಾಕ್ಷ್ಯಚಿತ್ರದ ಸುಳ್ಳಿನ ಸರಮಾಲೆ ಕಟ್ಟಿದ್ರಾ? ಒಂದು ವೇಳೆ ಸಾಕ್ಷ್ಯಚಿತ್ರ ತಯಾರಾಗಿದ್ರೆ ಯಾವುದು ಆ ಸಾಕ್ಷ್ಯಚಿತ್ರ? ಈ ಸಾಕ್ಷ್ಯಚಿತ್ರದ ಉದ್ದೇಶವೇನು? ಯಾರೆಲ್ಲಾ ಈ ಸಾಕ್ಷ್ಯಚಿತ್ರಕ್ಕೆ ಕೆಲಸ ಮಾಡಿದ್ರು? ಈ ಎಲ್ಲ ಆಯಾಮದಲ್ಲೂ ಎಸ್​ಐಟಿ ತಂಡ ತನಿಖೆ ನಡೆಸುತ್ತಿದೆ.ಸದ್ಯ ರಮೇಶ್ ಜಾರಕಿಹೊಳಿ ಸಿಡಿ ಕೇಸ್​ ಸಂಬಂಧ ಎಸ್ಐಟಿ ಇದುವರೆಗೂ 50ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದೆ.
ಆರೋಪಿತರೊಂದಿಗೆ ನಿಕಟ ಸಂಪರ್ಕ ಇರುವ ಎಲ್ಲರನ್ನೂ ವಿಚಾರಣೆ ಮಾಡುತ್ತಿದೆ. ಸಿಡಿ ಬಿಡುಗಡೆ ಹಿಂದಿನ ದಿನ ಒಟ್ಟು ಐವರು ಆರ್​ಟಿ ನಗರದಲ್ಲಿ ಸಭೆ ಮಾಡಿದ್ದರು. ಐವರು ಪ್ರಮುಖ ಶಂಕಿತರು ಒಂದೇ ಟವರ್ ಲೊಕೇಶನ್​ನಲ್ಲಿದ್ದ ಸಾಕ್ಷ್ಯ ಲಭ್ಯವಾಗಿದೆ. ಇದೇ ಕಾರಣಕ್ಕೆ ಐವರ ನಿಕಟ ಸಂಪರ್ಕದಲ್ಲಿರುವರನ್ನ ಎಸ್ಐಟಿ ವಿಚಾರಣೆ ಮಾಡುತ್ತಿದೆ. ಇಂದು ಕೂಡ ಹಲವರನ್ನ ವಿಚಾರಣೆಗೆ ಎಸ್ಐಟಿ ಅಧಿಕಾರಿಗಳು ಕರೆದಿದ್ದಾರೆ.
ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಯುವಕನಿಂದ ಹಿಗ್ಗಾಮುಗ್ಗಾ ತರಾಟೆ! ಶಾಸಕಿಯಿಂದ ಮೊಂಡು ಸಮರ್ಥನೆ

ಇದೇ ಗ್ಯಾಂಗ್​ ಕೈಯಲ್ಲಿದೆ ಕಾಂಗ್ರೆಸ್​ ನಾಯಕರ ಸಿಡಿ! ಲಕ್ಷ ಲಕ್ಷ ಕೊಟ್ಟು ಬಚಾವಾದ ಆ ನಾಯಕರು ಯಾರು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
