ಬೆಂಗಳೂರು:ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿಯಲ್ಲಿನ ಆಡಿಯೋ-ವಿಡಿಯೋದಲ್ಲಿ ಯುವತಿ ಮತ್ತು ಸಚಿವರ ಮಾತುಕತೆ ಗಮನಿಸಿದ್ರೆ ರಮೇಶ್​ ಜಾರಕಿಹೊಳಿ ಹನಿಟ್ರ್ಯಾಪ್​ಗೆ ಒಳಗಾದ್ರಾ? ಎಂಬ ಪ್ರಶ್ನೆ ದಟ್ಟವಾಗಿ ಮೂಡಿದೆ. ಜಾರಕಿಹೊಳಿ ಅವರನ್ನ ಟಾರ್ಗೆಟ್​ ಮಾಡಿ ಖೆಡ್ಡಾ ತೋಡಲಾಗಿತ್ತಾ? ಕೆಲ ಕಾಂಗ್ರೆಸ್​ ಮುಖಂಡರ ಸೂಚನೆಯಂತೆ ಕೆಲ ದಿನಗಳ ಹಿಂದೆಯೇ ಸ್ಕೆಚ್​ ಹಾಕಿದ್ದರೇ? ಎಂಬೆಲ್ಲ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.
ಈ ನಡುವೆ ಮತ್ತೊಂದು ಅನುಮಾನವನ್ನ ಹುಟ್ಟುಹಾಕಿದೆ ಶಾಸಕ ಮಹೇಶ್​ ಕುಮಟಳ್ಳಿಯ ಹೇಳಿಕೆ. ರಮೇಶ್​ ಜಾರಕಿಹೊಳಿಯ ಕತ್ತಿನ ಭಾಗದಲ್ಲಿ ಮಚ್ಚೆ ಇದೆ. ಆದರೆ ವೈರಲ್​ ಆಗಿರುವ ಸೆಕ್ಸ್​ ವಿಡಿಯೋದಲ್ಲಿ ಮಚ್ಚೆ ಇಲ್ಲ ಎಂಬ ಮಾತು ಕೇಳಿ ಬಂದಿದೆ. ಇದೆಲ್ಲವನ್ನೂ ಗಮನಿಸಿದ್ರೆ ಇದು ಎಡಿಟ್ ಆಗಿರೋ ವಿಡಿಯೋ ಅನ್ನಿಸುತ್ತಿದೆ ಎಂದು ಮಹೇಶ್​ ಕುಮಟಳ್ಳಿ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಹೇಳಿದರು. ಅತ್ತ ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ, ಇಡೀ ಪ್ರಕರಣ 5 ಕೋಟಿಗೆ ಡೀಲ್​ ಆಗಿದೆ, ಜಾರಕಿಹೊಳಿ ವಿರುದ್ಧ ದೂರು ಕೊಟ್ಟ ದಿನೇಶ್​ ಕಲ್ಲಹಳ್ಳಿಯನ್ನು ಬಂಧಿಸಿ ಏರೋಪ್ಲೇನ್​ ಹತ್ತಿಸಿದ್ರೆ ಸತ್ಯ ಹೊರಬರುತ್ತೆ ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿರಿಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಕೂಡ ನಿನ್ನೆ ಜಾರಕಿಹೊಳಿ ಪರ ಮಾತನಾಡಿದ್ದರು. ಇಟ್ ಈಸ್ ವೆರಿ ಅನ್ ಫಾರ್ಚ್ಯುನೇಟ್. ಪ್ಲಾನ್ಡ್ ಎಫರ್ಟ್, ಇದೊಂದು ರಾಜಕೀಯದ ಷಡ್ಯಂತ್ರ. ಅವ್ರು ಸಂಪೂರ್ಣ‌ ನಿರ್ದೋಷಿ ಆಗಿ ಆಚೆ ಬರ್ತಾರೆ. ರಾಜಕಾರಣಿಗಳ ಬಗ್ಗೆ ಅಸಹ್ಯ ಹುಟ್ಟಿಸೋ ಸಂಚು ಅಡಗಿದೆ ಎಂದು ಸುಧಾಕರ್​ ಹೇಳಿದ್ದರು.
ಇನ್ನು ಈ ಪ್ರಕರಣ ಸಂಬಂಧ ನೈತಿಕೆ ಹೊಣೆ ಹೊತ್ತು ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಇವರಿಂದ ತೆರವಾದ ಸ್ಥಾನಕ್ಕೆ ರಮೇಶ್​ರ ಸಹೋದರ ಬಾಲಚಂದ್ರ ಜಾರಕಿಹೊಳಿಯನ್ನ ಕೂರಿಸಬೇಕು. ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಬೇಡಿಕೆ ಕೆಲವರಿಂದ ಕೇಳಿಬರುತ್ತಿದೆ. ಇದಕ್ಕೆ ಶಾಸಕ ಮಹೇಶ್​ ಕುಮಟಳ್ಳಿ ಕೂಡ ಧ್ವನಿಗೂಡಿಸಿದ್ದು, ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ತಾರೆ. ರಮೇಶ್ ಜಾರಕಿಹೊಳಿ ಅವರಿಂದ ತೆರವಾದ ಸ್ಥಾನವನ್ನ ಅವರ ಕುಟುಂಬಸ್ಥರಿಗೇ ಕೊಡಬೇಕು. ಬೇರೆ ಯಾರೊಬ್ಬರೂ ಕೇಳುವುದು ಸೂಕ್ತವಲ್ಲ. ಉಪಚುನಾವಣೆ ಹಿನ್ನೆಲೆ ಬಾಲಚಂದ್ರ ಜಾರಕಿಹೊಳಿಗೇ ನೀಡುವುದು ಸೂಕ್ತ ಎಂದಿದ್ದಾರೆ.
ಜಾರಕಿಹೊಳಿ ಸೆಕ್ಸ್​ ಸಿಡಿ ರಿಲೀಸ್​ಗೂ ಮುನ್ನ ದಿನೇಶ್ ಕಲ್ಲಹಳ್ಳಿ ಲಾಡ್ಜ್​ಗೆ ಹೋಗಿದ್ದೇಕೆ? ಸಿಸಿ ಕ್ಯಾಮರಾದಲ್ಲಿ ಸೆರೆ

ಜಾರಕಿಹೊಳಿ ಸೆಕ್ಸ್​ ಸಿಡಿ‌ ಪ್ರಕರಣ 5 ಕೋಟಿ ರೂಪಾಯಿಗೆ ಡೀಲ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 3 =
Remember me
