ಬೆಂಗಳೂರು:ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ವಿಡಿಯೋ ವೈರಲ್​ ಆಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರಿ ಕೋಲಾಹಲ ಎದ್ದಿದೆ. ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ಗೋಕಾಕ್​ನ ಸಾಹುಕಾರ್​ ರಾಜೀನಾಮೆ ನೀಡಿದ್ದು, ಪರ-ವಿರೋಧ ಬೆಂಬಲಿಗರ ಆಕ್ರೋಶ ಭುಗಿಲೆದ್ದಿದೆ. ಇಡೀ ಪ್ರಕರಣ 5 ಕೋಟಿಗೆ ಡೀಲ್​ ಆಗಿದೆ, ಜಾರಕಿಹೊಳಿ ವಿರುದ್ಧ ದೂರು ಕೊಟ್ಟ ದಿನೇಶ್​ ಕಲ್ಲಹಳ್ಳಿಯನ್ನು ಬಂಧಿಸಿ ಏರೋಪ್ಲೇನ್​ ಹತ್ತಿಸಿದ್ರೆ ಸತ್ಯ ಹೊರಬರುತ್ತೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಮಹೇಶ್ ಕುಮಟಳ್ಳಿ, ಯುವತಿ ಹಾಗೂ ರಮೇಶ್ ಜಾರಕಿಹೊಳಿ ಪ್ರಬುದ್ಧರು, ಅದರಲ್ಲಿ ತಪ್ಪೇನಿದೆ? ಯುವತಿಯ ಸಮ್ಮತಿ ಇರೋದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತೆ. ಮೇಲ್ನೋಟಕ್ಕೆ ಇದು ಹನಿಟ್ರ್ಯ‍ಾಪ್ ಅನ್ನಿಸುತ್ತಿದೆ. ರಾಜ ಮಹಾರಾಜರ ಕಾಲದಲ್ಲಿ ವಿಷಕನ್ಯೆಯನ್ನ ಬಿಟ್ಟು ಮಾಡ್ತಿದ್ರು, ಈಗ ಹನಿಟ್ರ್ಯಾಪ್ ಮಾಡುತ್ತಿದ್ದಾರೆ ಎಂದರು.ಇದನ್ನೂ ಓದಿರಿಬಿಜೆಪಿ ಶಾಸಕನ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರ! ಹಿಂದು ದೇವರ ಪೋಟೋ ನೋಡಿ ಮನೆ ತೊರೆದರು
ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ನೋಡಿದ್ದೇನೆ. ಆ ದೃಶ್ಯಾವಳಿಗಳನ್ನ ನೋಡಿದ್ರೆ ಎಲ್ಲೂ ಬಲತ್ಕಾರ ಅನ್ನಿಸಲ್ಲ. ಇದು ಪ್ರೀ ಪ್ಲಾನ್ಡ್ ಅನ್ನೋದು ಗೊತ್ತಾಗ್ತಿದೆ. ಅವರನ್ನು ಭೇಟಿ ಮಾಡೋಣ ಅಂತಾ ಬಂದಿದ್ದೆ. ಆದರೆ ಅವರು ಇಲ್ಲಿ ಇಲ್ಲ. ಅವರು ಬೆಳಗಾವಿ ಅಥವಾ ಗೋಕಾಕ್​ಗೆ ಹೋಗಿದ್ದಾರೆ ಎನ್ನಲಾಗ್ತಿದೆ. ರಮೇಶ್​ ಜಾರಕಿ ಹೊಳಿ ದೈವ ಭಕ್ತರು. ಆದ್ರೆ ಏಕೆ ಹೀಗೆ ಆಗಿದೆ ಗೊತ್ತಾಗ್ತಿಲ್ಲ ಎಂದು ಮಹೇಶ್​ ಕಮಟಳ್ಳಿ ಹೇಳಿದರು.
ಸಿಡಿ ಫೇಕ್ ಆಗಿರಲಿ ಅಥವಾ ನಿಜವೇ ಇರಲಿ. ಯುವತಿ ಹಾಗೂ ರಮೇಶ್ ಜಾರಕಿಹೊಳಿ ಇಬ್ಬರೂ ಪ್ರಬುದ್ಧರು. ಅದರಲ್ಲಿ ತಪ್ಪೇನಿದೆ? ಎನ್ನುತ್ತಾ ರಮೇಶ್ ಜಾರಕಿಹೊಳಿಯನ್ನ ಮಹೇಶ್ ಕುಮಟಳ್ಳಿ ಸಮರ್ಥಿಸಿಕೊಂಡರು.
ಜಾರಕಿಹೊಳಿ ಸೆಕ್ಸ್​ ಸಿಡಿ ರಿಲೀಸ್​ಗೂ ಮುನ್ನ ದಿನೇಶ್ ಕಲ್ಲಹಳ್ಳಿ ಲಾಡ್ಜ್​ಗೆ ಹೋಗಿದ್ದೇಕೆ? ಸಿಸಿ ಕ್ಯಾಮರಾದಲ್ಲಿ ಸೆರೆ

ಜಾರಕಿಹೊಳಿ ಸೆಕ್ಸ್​ ಸಿಡಿ‌ ಪ್ರಕರಣ 5 ಕೋಟಿ ರೂಪಾಯಿಗೆ ಡೀಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
