ಬೆಂಗಳೂರು:ಸಚಿವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಅಶ್ಲೀಲ ಆಡಿಯೋ-ವಿಡಿಯೋದಲ್ಲಿ ಯುವತಿ ಮತ್ತು ಸಚಿವರ ಮಾತುಕತೆ ಗಮನಿಸಿದ್ರೆ ಜಾರಕಿಹೊಳಿ ಹನಿಟ್ರ್ಯಾಪ್​ಗೆ ಒಳಗಾದ್ರಾ? ಎಂಬ ಪ್ರಶ್ನೆ ಮೂಡುತ್ತೆ. ರಮೇಶ್​ ಜಾರಕಿಹೊಳಿ ಅವರನ್ನ ಟಾರ್ಗೆಟ್​ ಮಾಡಿ ಖೆಡ್ಡಾ ತೋಡಲಾಗಿತ್ತಾ? ಕೆಲ ಕಾಂಗ್ರೆಸ್​ ಮುಖಂಡರ ಸೂಚನೆಯಂತೆ ಕೆಲ ದಿನಗಳ ಹಿಂದೆಯೇ ಸ್ಕೆಚ್​ ಹಾಕಿದ್ದರೆ? ಅಥವಾ ಬಂಡಾಯದಿಂದ ಬಿಜೆಪಿಗೆ ಬಂದಿದ್ದಕ್ಕೇ ಸ್ವಪಕ್ಷದವರಿಂದಲೇ ಹನಿಟ್ರ್ಯಾಪ್​ ಮಾಡಿಸಲಾಗಿತ್ತೆ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಅಲ್ಲದೆ, ಸೆಕ್ಸ್​ ಸಿಡಿ ಕುರಿತು ಪ್ರತಿಕ್ರಿಯಿಸಿರುವ ರಮೇಶ್​ ಜಾರಕಿಹೊಳಿ, ಇದು ಫೇಕ್​. ಯಾರೋ ನನ್ನನ್ನು ಸಿಲುಕಿಸಲು ಪ್ಲಾನ್​ ಮಾಡಿಯೇ ಹಾಕಿದ್ದಾರೆ. ನನಗೆ ಆ ಯುವತಿ ಯಾರೆಂದು ಗೊತ್ತೇ ಇಲ್ಲ. ನಾನು ತಾಪ್ಪು ಮಾಡಿಯೇ ಲ್ಲ. ಹಾಗಿದ್ದ ಮೇಲೆ ನಾನೇಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದಿದ್ದಾರೆ. ಅಲ್ಲದೆ, ಜಾರಕಿಹೊಳಿ ಸೆಕ್ಸ್​ ವೀಡಿಯೋ ಪ್ರಕರಣ ಕುರಿತು ಹಲವು ಸಚಿವರು ಸಮರ್ಥಿಸಿಕೊಂಡಿದ್ದಾರೆ.ಇದನ್ನೂ ಓದಿರಿರಮೇಶ್​ ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣ: ಚಡ್ಡಿ ಪ್ರದರ್ಶಿಸಿ ಪ್ರತಿಭಟನೆ
ಗೆಳೆಯ ರಮೇಶ್ ಜಾರಕಿಹೊಳಿ ಬಗ್ಗೆ ಕುಮಟಾದಲ್ಲಿ ಸಮರ್ಥಿಸಿಕೊಂಡ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಇವೆಲ್ಲವೂ ಸತ್ಯಕ್ಕೆ ದೂರವಾದ ವಿಚಾರ. ಬಂಡಾಯದಿಂದ ಬಂದವರನ್ನು ಟ್ರಾಪ್ ಮಾಡಲಾಗುತ್ತಿದೆ ಎಂಬುದು ಸುಳ್ಳು. ಮೊದಲು ನಾವೆಲ್ಲ ಜೊತೆಯಲ್ಲೇ ಇದ್ದವರು. ಇದಕ್ಕೂ ಬಂಡಾಯಕ್ಕೂ ಯಾವುದೇ ಸಂಬಂಧವಿಲ್ಲ. ಬಂಡಾಯ ಈಗ ಮುಗಿದ ಅಧ್ಯಾಯ. ನಾವೀಗ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಎಂದಿದ್ದಾರೆ.
ಉತ್ತರಕನ್ನಡ ಜಿಲ್ಲೆ ಕುಮಟಾದಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ, ರಮೇಶ ಜಾರಕಿಹೊಳಿ ಅವರೇ ಈ ಪ್ರಕರಣ ಸತ್ಯವಲ್ಲ, ಸುಳ್ಳು ಎಂದಿದ್ದಾರೆ. ಅವರ ಹೇಳಿಕೆಯನ್ನು ನಾನೂ ಪುನರುಚ್ಛರಿಸುತ್ತೇನೆ. ದೂರು ಪರಿಶೀಲನೆ ನಡೆಸಿ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಾಗುವುದು‌ ಎಂದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ಸೆಕ್ಸ್​ ಸಿಡಿ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಜಾರಕಿಹೊಳಿ, ಷರತ್ತುಗಳು ಅನ್ವಯ!

ರಮೇಶ್​ ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣ: ಚಡ್ಡಿ ಪ್ರದರ್ಶಿಸಿ ಪ್ರತಿಭಟನೆ

ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

ಕರ್ನಾಟಕ ಭವನದಲ್ಲೇ ಸಚಿವರ ಕಾಮದಾಟ! ರಮೇಶ್​ ಜಾರಕಿಹೊಳಿಗೆ ಖೆಡ್ಡಾ ತೋಡಿದ್ದು ಕೈ ಮುಖಂಡ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + twelve =
Remember me
