ಬೆಂಗಳೂರು:ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸಿಡಿ ತಯಾರಿಸಿದ್ದೇ ಕಾಂಗ್ರೆಸ್​ನವರು! ಇಂಥ ಮನೆಹಾಳು, ತೇಜೋವಧೆ ಕೆಲಸ ಮಾಡೋದು ಅವ್ರೇ. ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ. ಅವ್ರು ಏನೇನು ಮಾಡ್ತಾರೆ ಅಂತ ನನಗೆ ಗೊತ್ತಿದೆ ಎಂದು ಬಹಿರಂಗವಾಗಿಯೇ ಕಿಡಿಕಾರಿದ್ದ ಸಚಿವ ಎಸ್.ಟಿ. ಸೋಮಶೇಖರ್​ಗೆ ಟ್ವೀಟ್​ ಮೂಲಕ ಕಾಂಗ್ರೆಸ್​ ತಿರುಗೇಟು ಕೊಟ್ಟಿದೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್​, 100% ಸಿಡಿ ಮಾಡಿದ್ದೇ ಕಾಂಗ್ರೆಸ್ ನವ್ರು, ಇನ್ಯಾರು ಮಾಡಿರ್ತಾರೆ? ಸಿಬಿಐ‌ ತನಿಖೆಯಿಂದ ಎಲ್ಲವೂ ಆಚೆ ಬರುತ್ತೆ. ರಾಜಕೀಯವಾಗಿ ಸವಾಲು ಹಾಕಲಿ ಎದುರಿಸ್ತೇವೆ. ತಾಕತ್ತಿದ್ರೆ ನನ್ ವಿರುದ್ಧ ಇಲ್ಲವೇ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​, ನೀವೆಷ್ಟು ಸಿಡಿ ಮಾಡಿದ್ದೀರಿ? ನಿಮ್ಮದೆಷ್ಟು ಸಿಡಿ ಇದೆ? ಅದಕ್ಕೆಷ್ಟು ಖರ್ಚು ಮಾಡಿದ್ದೀರಿ? ಬಾಂಬೆಯ ಹೋಟೆಲ್‌ನಲ್ಲಿ ಕ್ವಾರೆಂಟೈನ್ ಆಗಿದ್ದಿರಲ್ಲ ಆಗ ನಿಮ್ಮ ಸಿಡಿ ಯಾರು ಮಾಡಿದ್ದು? ಕೋರ್ಟಿಗೆ ಅರ್ಜಿ ಏಕೆ ಸಲ್ಲಿಸಿದಿರಿ? ಎಂದು ಪಶ್ನಿಸಿದೆ.ಇದನ್ನೂ ಓದಿರಿಗೋಕಾಕ್​ ಸಾಹುಕಾರನಿಗಾಗಿ ವಿಭಿನ್ನ ಅಭಿಯಾನ ಶುರು
ಇನ್ನು ಸಚಿವ ಸೋಮಶೇಖರ್​ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಅಜಯ್ ಸಿಂಗ್, ಅವರು ಈ ಸ್ಥಾನಕ್ಕೆ ಬಂದು ಸಚಿವರಾಗಿದ್ದಾರೆ ಅಂದರೆ ಅದಕ್ಕೆ ಕಾಂಗ್ರೆಸ್ ಕಾರಣ. ಕಾಂಗ್ರೆಸ್​ನಲ್ಲಿ 20 ವರ್ಷದಿಂದ ಇದ್ದು, ಬೆರೆತು ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸಿಡಿ ಮಾಡಿದೆ ಅನ್ನೋ ಆರೋಪ ಸಂಪೂರ್ಣ ಸುಳ್ಳು. ಬಿಜೆಪಿಯವರೇ ಅವರ ಸಚಿವರ ಸಿಡಿ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಪಕ್ಷದಲ್ಲಿ ಅಸಮಧಾನ ಇದೆ. ಯಾವಾಗ ಬೇಕಾದ್ರೂ ಸ್ಫೋಟವಾಗಲಿದೆ. ಇದನ್ನ ಮಾಡಿದ್ದು ಬಿಜೆಪಿ ಹೊರತು, ಬೇರೆ ಪಕ್ಷದವರಲ್ಲ. ಬೇರೆ ಪಕ್ಷದವರ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದರು.
ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಕಾಂಗ್ರೆಸ್​: ಸಚಿವರ ಸ್ಫೋಟಕ ಹೇಳಿಕೆ

ಸೊಸೆಯನ್ನ ಕೊಂದು ಮಾವ ಆತ್ಮಹತ್ಯೆ! ಊಟಕ್ಕೆ ಬಂದ ಮಗನಿಗೆ ಕಾದಿತ್ತು ಆಘಾತ…

ಸಿಐಡಿಗೆ ಸಿಡಿ ಕೇಸ್​! ಷಡ್ಯಂತ್ರ ಮಾಡಿದ್ದವರನ್ನ ಜೈಲಿಗೆ ಕಳಿಸೋದೇ ನನ್ನ ಗುರಿ: ಜಾರಕಿಹೊಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 16 =
Remember me
