ಬೆಳಗಾವಿ:ಕರೊನಾ ಸೋಂಕಿನಿಂದಾಗಿ ಅಶ್ಲೀಲ ಸಿಡಿ ಪ್ರಕರಣದ ವಿಚಾರಣೆಗೂ ಹಾಜರಾಗದೇ, ಉಪಚುನಾವಣೆಯಲ್ಲೂ ಪಾಲ್ಗೊಳ್ಳದೇ ಮರೆಯಾಗಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಇದೀಗ ದಿಢೀರ್​ ಪ್ರತ್ಯಕ್ಷವಾಗಿದ್ದು, ಕರೊನಾ ನಿಯಂತ್ರಣಕ್ಕೊಂದು ಸಲಹೆ ನೀಡಿದ್ದಾರೆ.
ಶನಿವಾರ ಗೋಕಾಕ್​ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಕರೊನಾ ನಿಯಂತ್ರಣ ಮಾಡುವ ಸಲುವಾಗಿ ಈ ಬಾರಿ ಕಠಿಣ ಲಾಕ್​ಡೌನ್ ಮಾಡಲಾಗುತ್ತಿದೆ ಎಂದರು.
ಗ್ರಾಮೀಣಿಗರು ಸಿಟಿಗೆ ಬಾರದಂತೆ ಸಿಟಿ ಜನ ಹಳ್ಳಿಗೆ ಹೋಗದಂತೆ ನೋಡಿಕೊಳ್ಳಲಾಗುತ್ತದೆ. ಕರೊನಾ ಸರಪಳಿಯನ್ನು ಮುರಿಯಲು ಯಾವ ಕ್ರಮ ತೆಗೆದುಕೊಳ್ಳಬೇಕು ಆ ಕ್ರಮವನ್ನು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಕ್ಸಿಜನ್ ಕೊರತೆ ನೀಗಿಸುವ ಕ್ರಮ ಕೈಗೊಳ್ಳುತ್ತವೆ. ಕರೊನಾ ದೊಡ್ಡ ರೋಗವೇನಲ್ಲ. ನಾವು ಧೈರ್ಯದಿಂದ ಎದುರಿಸಬೇಕು. ಜನರು ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ. ಗಂಭೀರ ಪರಿಸ್ಥಿತಿ ಇದ್ದರೆ ಮಾತ್ರ ಆಸ್ಪತ್ರಗೆ ಬರಬೇಕು ಎಂದು ಮನವಿ ಮಾಡಿದರು.
ಮನೆಯಲ್ಲೆ ಇದ್ದು ಯೋಗ, ಪ್ರಾಣಾಯಾಮ ಹಾಗೂ ವ್ಯಾಯಾಮ ಮಾಡಿಕೊಂಡು ನಿಯಮಿತವಾಗಿ ವೈದ್ಯರ ಸಲಹೆ ಪಡೆದರೆ, ಕರೊನಾ ನಿಯಂತ್ರಣಕ್ಕೆ ಬರುತ್ತದೆ ಎಂದು ಸಲಹೆ ನೀಡಿದರು.(ಏಜೆನ್ಸೀಸ್​)
ಕೋವಿಡ್‌ ಬಿಕ್ಕಟ್ಟು ನಿಭಾಯಿಸಲು ಸರ್ಕಾರಕ್ಕೆ ಎಚ್‌ಡಿ ಕುಮಾರಸ್ವಾಮಿ ಹತ್ತು ಸಲಹೆ

ಕ್ರಿಕೆಟರ್ ಭುವನೇಶ್ವರ್​ ಜತೆಗಿನ ಸಂಬಂಧ ಎಂಥದ್ದು? ಆ್ಯಂಕರ್​ ಶ್ಯಾಮಲಾ ಹೇಳಿದ್ದು ಹೀಗೆ…​

ಕರೊನಾ ನಿಯಂತ್ರಣಕ್ಕೆ ಗೋಮೂತ್ರ ಸೇವಿಸಲು ಕರೆ ಕೊಟ್ಟ ಬಿಜೆಪಿ ಶಾಸಕ: ಕುಡಿಯುವ ಕ್ರಮ ಹೀಗಿರಬೇಕಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 1 =
Remember me
