ಬಳ್ಳಾರಿ:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ಅಂದಿನ ಸಚಿವ ಎಚ್​.ವೈ.ಮೇಟಿಗೆ ಸಂಬಂಧಿಸಿದ್ದ ಸೆಕ್ಸ್​ ಸಿಡಿ ರಿಲೀಸ್​ ಮಾಡಿ ಭಾರಿ ರಾಜ್ಯ ರಾಜಕೀಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ್ದ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಇಂದು ಸುದ್ದಿಗೋಷ್ಠಿ ನಡೆಸಿ ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ.
ಉದ್ಯೋಗದ ಆಮಿಷವೊಡ್ಡಿ ಯುವತಿಯನ್ನ ಕಾಮತೃಷೆಗೆ ಬಳಸಿಕೊಂಡ ಆರೋಪ ರಮೇಶ್​ ಜಾರಕಿಹೊಳಿ ವಿರುದ್ಧ ದಾಖಲಾಗಿದ್ದು, ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಬಳ್ಳಾರಿಯಲ್ಲಿ ಮಾತನಾಡಿದ ರಾಜಶೇಖರ ಮುಲಾಲಿ, ಸೆಕ್ಸ್​ ಸಿಡಿ ಬಿಡುಗಡೆ ಹಿಂದೆ ರಮೇಶ್ ಜಾರಕಿಹೊಳಿಯ ಮರ್ಯಾದೆ ಕಳೆಯುವ ಹುನ್ನಾರ ಇದೆ. ಆ ಸಿಡಿಯಲ್ಲಿರುವ ವಿಡಿಯೋ ಮತ್ತು ವಾಯ್ಸ್​ಗೆ ಲಿಂಕ್ ಇಲ್ಲ. ಈ ಸಿಡಿ ಹಳೇಯದು, ಇದರ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇರಬಹುದು. ಇಲ್ಲಿಯವರೆಗೂ ಸಂತ್ರಸ್ತರು ದೂರು ನೀಡಿಲ್ಲ. ಆ ಮಹಿಳೆ ನಿಜವಾದ ಸಂತ್ರಸ್ತೆಯಾಗಿದ್ರೆ ದೂರು ನೀಡಲಿ. ಭಯ ಇದ್ರೆ ನನ್ನನ್ನು ಭೇಟಿ ಮಾಡಲಿ, ನಾನು ಅವರಿಗೆ ಸೂಕ್ತ ರಕ್ಷಣೆ ಕೊಟ್ಟು ನ್ಯಾಯ ದೊರಕಿಸಿಕೊಡುವೆ ಎಂದರು.ಇದನ್ನೂ ಓದಿರಿಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೇ ಗೋಕಾಕ್​ ಬಂದ್​! ಸೀಮೆಎಣ್ಣೆ ಸುರಿದುಕೊಂಡು ಆಕ್ರೋಶ
ಕೆಲವರು ಪ್ರಭಾವಿಗಳ ವಿರುದ್ಧ ಸಿಡಿ ಮಾಡುವ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಒಬ್ಬ ಮಾಜಿ ಮುಖ್ಯಮಂತ್ರಿ ವಯನಾಡಿಗೆ ಹೊಗ್ತಾರೆ. ಅವರು ಇದೇ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಅಲ್ಲಿಗೆ ಹೋಗ್ತಾರೆ. ಆ ಮಾಜಿ ಸಿಎಂ ಅಲ್ಲಿರೋ ರೆಸಾರ್ಟ್​ಗೆ ಹೋಗ್ತಾರೆ ಎಂದು ಗಂಭೀರ ಆರೋಪ ಮಾಡಿದ ರಾಜಶೇಖರ ಮುಲಾಲಿ, ಇನ್ನೂ 19 ಜನರ ಸಿಡಿಗಳು ಇವೆ. ಅವುಗಳನ್ನು ಇಟ್ಟುಕೊಂಡು ಕೆಲವರು ಆಟ ಆಡ್ತಿದ್ದಾರೆ. ಅನುಕೂಲಕ್ಕೆ ತಕ್ಕಂತೆ ರಿಲೀಸ್ ಮಾಡುತ್ತಿದ್ದಾರೆ ಬಾಂಬ್​ ಸಿಡಿಸಿದರು.
ಇನ್ನೂ ಮೂವರು ಪ್ರಭಾವಿ ರಾಜಕಾರಣಿಗಳ ಸಿಡಿ ನನ್ನ ಬಳಿ ಇದೆ, ಎಲ್ಲರೂ ಹಾಲಿಗಳೇ…

ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೇ ಗೋಕಾಕ್​ ಬಂದ್​! ಸೀಮೆಎಣ್ಣೆ ಸುರಿದುಕೊಂಡು ಆಕ್ರೋಶ

ಸೆಕ್ಸ್​ ಸಿಡಿ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಜಾರಕಿಹೊಳಿ, ಷರತ್ತುಗಳು ಅನ್ವಯ!

ಕರ್ನಾಟಕ ಭವನದಲ್ಲೇ ಸಚಿವರ ಕಾಮದಾಟ! ರಮೇಶ್​ ಜಾರಕಿಹೊಳಿಗೆ ಖೆಡ್ಡಾ ತೋಡಿದ್ದು ಕೈ ಮುಖಂಡ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
